Monday, December 23, 2024

ಸಿನಿ ಪ್ರೇಕ್ಷಕರಿಗೆ ಗುಡ್ ನ್ಯೂಸ್ : ‘ಹೊಯ್ಸಳ’ ಟಿಕೆಟ್ ದರದಲ್ಲಿ ಡಿಸ್ಕೌಂಟ್..!

ಬೆಂಗಳೂರು : ಚಿತ್ರಮಂದಿರಗಳಲ್ಲಿ ಡಾಲಿಯ 25ನೇ ಸಿನಿಮಾ ಹೊಯ್ಸಳದ ಅಬ್ಬರ ದಿನದಿಂದ ದಿನಕ್ಕೆ ಜೋರಾಗುತ್ತಾ ಹೋಗುತ್ತಿದೆ. ಯೂಥ್ಸ್ ಜೊತೆ ಫ್ಯಾಮಿಲಿ ಆಡಿಯೆನ್ಸ್ ಕೂಡ ಚಿತ್ರ ನೋಡ್ತಿದ್ದು, ಇದೀಗ, ಕೆಆರ್​ಜಿ ಸ್ಟುಡಿಯೋಸ್​ನಿಂದ ಸಿನಿ ಪ್ರೇಕ್ಷಕರಿಗೆ ಸ್ಪೆಷಲ್ ಆಫರ್ ಸಿಕ್ಕಿದೆ.

ಹೌದು, ಎಲ್ಲಾ ಕಲಾಭಿಮಾನಿಗಳು ಥಿಯೇಟರ್​ನಲ್ಲೇ ಸಿನಿಮಾ ನೋಡಲಿ ಎನ್ನುವ ಉದ್ದೇಶದಿಂದ ಸಿನಿಪ್ರಿಯರಿಗೆ ಕೆಆರ್​ಜಿ ಸ್ಟುಡಿಯೋಸ್ ಸ್ಪೆಷಲ್ ಆಫರ್ ಕೂಡ ನೀಡಿದೆ. ಇದು ನಟ ಡಾಲಿ ಧಜಂಜಯ್ ಅವರ 25ನೇ ಸಿನಿಮಾ. ಇದರ ಜೊತೆಗೆ ಒಂದಷ್ಟು ಇಂಟರೆಸ್ಟಿಂಗ್ ಫ್ಯಾಕ್ಟರ್​ಗಳಿಂದ ಮನರಂಜನೆ ಜೊತೆ ಪ್ರೇಕ್ಷಕರಿಗೆ ಸಂದೇಶ ಕೂಡ ಕೊಡುತ್ತಿದೆ.

ಕಥೆಗಳನನ್ನು ಆಯ್ಕೆ ಮಾಡಿಕೊಳ್ಳೋದ್ರಲ್ಲಿ ಕೆಆರ್​ಜಿ ಸ್ಟುಡಿಯೋಸ್ ಕೂಡ ಹೊಂಬಾಳೆ ಫಿಲಂಸ್​​ನಂತೆ ಸೂಪರ್ ಅನಿಸಿದೆ. ಈ ಹಿಂದಿನ ಅವರ ರತ್ನನ್ ಪ್ರಪಂಚ ರೀತಿ, ಥಿಯೇಟ್ರಿಕಲ್ ರಿಲೀಸ್ ಮಾಡಿದ ಚೊಚ್ಚಲ ಸಿನಿಮಾ ಹೊಯ್ಸಳ ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಪೊಲೀಸ್ ವ್ಯವಸ್ಥೆಯ ಸುತ್ತುವ ಕಥೆ

ವಿಜಯ್ ಎನ್ ನಿರ್ದೇಶನದ ಹಾಗೂ ಕಾರ್ತಿಕ್- ಯೋಗಿ ಜಿ ರಾಜ್ ನಿರ್ಮಾಣದ ಹೊಯ್ಸಳ, ಮರ್ಯಾದಾ ಹತ್ಯೆ ಹಾಗೂ ಪೊಲೀಸ್ ವ್ಯವಸ್ಥೆಯ ಸುತ್ತುವ ಕಥೆ ಆಗಿದೆ. ಇಲ್ಲಿ ಡಾಲಿ ಖಡಕ್ ಪೊಲೀಸ್ ಕಾಪ್ ಆಗಿ ಕಿಕ್ ಕೊಡುತ್ತಾರೆ. ನವೀನ್ ಶಂಕರ್- ಪ್ರತಾಪ್ ನಾರಾಯಣ್ ಖಡಕ್ ಖಳನಾಯಕರಾಗಿ, ನಾಯಕಿಯಾಗಿ ಅಮೃತಾ ಅಯ್ಯಂಗಾರ್, ಅನಿರುದ್ದ್ ಹಾಗೂ ಮಯೂರಿ ಪ್ರೇಕ್ಷಕರನ್ನು ಹುಬ್ಬೇರಿಸಿದ್ದಾರೆ.

ಇದನ್ನೂ ಓದಿ : ನೂರು ಕೋಟಿ ಕ್ಲಬ್ ಸೇರಿಗೆ ನಾನಿ ‘ದಸರಾ’ : ನಿರ್ದೇಶಕರಿಗೆ ದುಬಾರಿ ಕಾರು ಗಿಫ್ಟ್

ಮಾಸ್ತಿ ಅವರ ಬರವಣಿಗೆ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಯಾವುದೇ ಅಬ್ಬರ, ಆಡಂಬರ ಇಲ್ಲದೆ ನೋಡುಗರಿಗೆ ರುಚಿಸುವಂತಿದೆ. ಮಕ್ಕಳಿಂದ ಮುದುಕರವರೆಗೆ ಎಲ್ಲರೂ ನೋಡುವಂತಹ ಕಂಟೆಂಟ್ ಚಿತ್ರದಲ್ಲಿದೆ. ಫ್ಯಾಮಿಲಿ ಆಡಿಯೆನ್ಸ್​ನಿಂದ ಹೌಸ್​ಫುಲ್ ಪ್ರದರ್ಶನ ಕಾಣ್ತಿದೆ.

ಸಿಂಗಲ್ ಸ್ಕ್ರೀನ್​ನಲ್ಲಿ 112 ರೂ. ಆಫರ್

ಟಿಕೆಟ್ ಪ್ರೈಸ್​​ನಲ್ಲಿ ಡಿಸ್ಕೌಂಟ್ ನೀಡಿದ್ದು, ಮಲ್ಟಿಪ್ಲೆಕ್ಸ್​​ಗಳಲ್ಲಿ 150 ರೂ. ಹಾಗೂ ಸಿಂಗಲ್ ಸ್ಕ್ರೀನ್ ಥಿಯೇಟರ್​ಗಳಲ್ಲಿ 112 ರೂ. ಮಾಡಿದೆ. ಇದರಿಂದ ನೋಡುಗರ ಸಂಖ್ಯೆಯೂ ಹೆಚ್ಚಾಗ್ತಿದ್ದು, ಯಶಸ್ವಿ ಪ್ರದರ್ಶನ ಕಾಣ್ತಿದೆ.

ಇನ್ನೂ, ಡಾಲಿ ಧನಂಜಯ್ ಹೋದಲ್ಲೆಲ್ಲಾ ಸಿನಿ ಪ್ರೇಕ್ಷಕರು ಜೈಕಾರ ಕೂಗಿ ಬಹುಪರಾಕ್ ಹೇಳುತ್ತಿದ್ದಾರೆ. ಇದು ಈ ವರ್ಷದ ಒನ್ ಆಫ್ ದ ಹಿಟ್ ಸಿನಿಮಾಗಳ ಲಿಸ್ಟ್ ಸೇರಿದ್ದು, ಬಾಕ್ಸ್ ಆಫೀಸ್​​ನಲ್ಲಿ ಜೋರಾಗಿ ಸದ್ದು ಮಾಡ್ತಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES