ಬೆಂಗಳೂರು : ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ಟಿಕೆಟ್ ನಿರೀಕ್ಷೆಯಲ್ಲಿದ್ದ ಅನೇಕ ವಲಸಿಗರಿಗೆ ಭಾರೀ ಹಿನ್ನಡೆಯಾಗಿದೆ. ಇದರಲ್ಲಿ ವೈ.ಎಸ್.ವಿ ದತ್ತಾ ಕೂಡ ಒಬ್ಬರು.
ಕಡೂರಿನಲ್ಲಿ ವೈ.ಎಸ್.ವಿ ದತ್ತಾ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದು, ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ. ಇದರಿಂದ ಅತಂತ್ರ ಸ್ಥಿತಿಯಲ್ಲಿರುವ ದತ್ತಾ ಮರಳಿ ಜೆಡಿಎಸ್ ಕಡೆ ಮುಖಮಾಡ್ತಾರ ಎಂಬ ಪ್ರಶ್ನೆ ಎದ್ದಿತ್ತು. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ದತ್ತಾ ಮರಳಿ ಜೆಡಿಎಸ್ ಸೇರುವ ಕುರಿತು ಪ್ರತಿಕ್ರಿಯಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ್ಮದು ಸಣ್ಣ ಪಕ್ಷ, ಅವರು ಇಂಟರ್ನ್ಯಾಷನಲ್ ಪಕ್ಷದ ಜೊತೆ ಹೋಗಿದ್ದಾರೆ. ನಮ್ಮ ಸಣ್ಣ ಪಕ್ಷದಲ್ಲಿ ಅವರಿಗೆ ಜಾಗವಿಲ್ಲ. ಅವರ ಬಗ್ಗೆ ನಾನು ಇಲ್ಲಿ ಏನು ಚರ್ಚೆ ಮಾಡಲ್ಲ ಎಂದು ಕುಮರಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ : ‘ನನ್ನನ್ನು ಬ್ಲಾಕ್ ಮೇಲ್ ಮಾಡಿ ವೀಕ್ ಮಾಡೋಕ್ಕಾಗಲ್ಲ’ : ಕುಮಾರಸ್ವಾಮಿ
ಸಾಮಾನ್ಯ ಕಾರ್ಯಕರ್ತನಿಗೆ ಹಾಸನ ಟಿಕೆಟ್
ಹಾಸನ ಟಿಕೆಟ್ ಹಂಚಿಕೆ ಗೊಂದಲ ವಿಚಾರ ಕುರಿತು ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಲಾಗುವುದು. ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿ ಗೆಲ್ಲುವ ಶಕ್ತಿ ಜೆಡಿಎಸ್ ಪಕ್ಷಕ್ಕೆ ಇದೆ ಎಂದು ಹೇಳಿದ್ದಾರೆ.
ಈ ವಿಚಾರದಲ್ಲಿ ನನ್ನ ಸ್ಟ್ಯಾಂಡ್ ಎಂದಿಗೂ ಬದಲಾಗಲ್ಲ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಆಸೆಯೂ ಕೂಡ ಇದೆ ಎನ್ನುವ ಮೂಲಕ ಭವಾನಿ ರೇವಣ್ಣಗೆ ಟಿಕೆಟ್ ಇಲ್ಲ ಎಂದು ಸುಳಿವು ನೀಡಿದ್ದಾರೆ.