ಬೆಂಗಳೂರು : ಒಂದೆರಡು ದಿನಗಳಲ್ಲಿ ಪಕ್ಷದ ವರಿಷ್ಠರನ್ನು ನೇರವಾಗಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಸುತ್ತೇನೆ ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಾ.ಎಸ್. ಷಫಿ ಅಹಮದ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಗಾಗಲೇ ರಾಜೀನಾಮೆ ಪತ್ರವನ್ನುಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಕಳುಹಿಸಿದ್ದೇನೆ ಎಂದು ಹೇಳಿದ್ದಾರೆ.
ನಾಳೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಭೆ ಸೇರಿ ನಿರ್ಣಯ ತೆಗೆದುಕೊಂಡು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಒಂದೆರಡು ದಿನಗಳಲ್ಲಿ ಪಕ್ಷದ ವರಿಷ್ಠರನ್ನು ನೇರವಾಗಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಸುತ್ತೇನೆ. ಮುಂದೆ ಯಾವ ರೀತಿಯ ನಿರ್ಣಯವನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಡಾ.ಎಸ್. ಷಫಿ ಅಹಮದ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಪಕ್ಷದ ಮತ್ತೊಂದು ದೊಡ್ಡ ವಿಕೆಟ್ ಪತನ : ಶೀಘ್ರ ಜೆಡಿಎಸ್ ಸೇರ್ಪಡೆ
ರಫೀಕ್ ಅಹಮದ್ ಸಹ ರಾಜೀನಾಮೆ
ಇಂದು ಕರೆದ ಸಭೆಗೆ ಸಮಕಾಲಿನರು ಹಾಜರಾಗಿದ್ದರು. ಬಹುತೇಕರು ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ನಾಳೆ ಮತ್ತೊಂದು ಸಭೆ ಕರೆಯಲಾಗಿದೆ ಎಂದು ಡಾ.ಎಸ್. ಷಫಿ ಅಹಮದ್ ಹೇಳಿದ್ದಾರೆ. ಡಾ.ಎಸ್. ಷಫಿ ಅಹಮದ್ ರಾಜೀನಾಮೆ ನೀಡುತ್ತಾರೆ. ಆದರೆ, ಮಾಜಿ ಶಾಸಕ ರಫೀಕ್ ಅಹಮದ್ ನಾಲ್ಕೈದು ದಿನಗಳೊಳಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನು ಕರೆದು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿದುಬಂದಿದೆ.
ಯುವ ಮುಖಂಡನಿಗೆ ಟಿಕೆಟ್
ಕಾಂಗ್ರೆಸ್ ಹೈ ಕಮಾಂಡ್ ಯುವ ಮುಖಂಡ ಇಕ್ಬಾಲ್ ಅಹ್ಮದ್ಗೆ ಟಿಕೆಟ್ ನೀಡಿದೆ. ಈ ನಿರ್ಧಾರವನ್ನು ಷಫಿ ಅಹ್ಮದ್ ವಿರೋಧಿಸಿದ್ದಾರೆ. ಡಾ.ಎಸ್. ಷಫಿ ಅಹಮದ್ ಎರಡು ಬಾರಿ ಹಾಗೂ ಅಳಿಯ ಡಾ.ರಫಿಕ್ ಅಹ್ಮದ್ ಒಂದು ಬಾರಿ ಶಾಸಕರಾಗಿದ್ದರು. ಇದೀಗ ಮೊದಲ ಬಾರಿ ಷಫಿ ಅಹಮದ್ ಕುಟುಂಬ ಹೊರತುಪಡಿಸಿ ಬೇರೆ ಅಭ್ಯರ್ಥಿಗೆ ಕಾಂಗ್ರೆಸ್ ಮಣೆ ಹಾಕಿದೆ.