Monday, December 23, 2024

ಕಾಂಗ್ರೆಸ್ ಹೀನಾಯವಾಗಿ ಸೋಲಲಿದೆ : ಸಿಎಂ ಬೊಮ್ಮಾಯಿ ಭವಿಷ್ಯ

ಬೆಂಗಳೂರು : ಕಳೆದ ಬಾರಿಗಿಂತ (ಚುನಾವಣೆ) ಕಾಂಗ್ರೆಸ್ ಹೀನಾಯವಾಗಿ ಸೋಲುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ಸಿಗೆ ಸರಿಯಾದ ಅಭ್ಯರ್ಥಿಗಳೇ  ಇಲ್ಲ, ತಳಮಟ್ಟದಲ್ಲಿ ಸಂಘಟನೆಯೂ ಇಲ್ಲ, ಸರಿಯಾದ ನೀತಿ ಸಿದ್ಧಾಂತಗಳಿಲ್ಲ ಅಭಿವೃದ್ಧಿ ರಾಜಕಾರಣ ಕೂಡ ಇಲ್ಲ ಎಂದು ಕುಟುಕಿದ್ದಾರೆ.

60 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳೇ ಇಲ್ಲ

ಕಾಂಗ್ರೆಸ್ ಪಕ್ಷಕ್ಕೆ 60 ಕ್ಷೇತ್ರಗಳಲ್ಲಿ ಸರಿಯಾದ ಅಭ್ಯರ್ಥಿಗಳೇ ಇಲ್ಲ. ಕಾಂಗ್ರೆಸ್ ನಾಯಕರು ಅಲ್ಲಿಂದ, ಇಲ್ಲಿಂದ ಅಭ್ಯರ್ಥಿಗಳನ್ನು ಕರೆತಂದು ಟಿಕೆಟ್ ಕೊಡುವ ಪ್ರಯತ್ನ ನಡೆಸಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ  ನಡೆಸಿದ್ದಾರೆ.

ಇದನ್ನೂ ಓದಿ : ಶಿಗ್ಗಾಂವಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡ್ತೀನಿ : ಸಿಎಂ ಬೊಮ್ಮಾಯಿ

ಬಿಜೆಪಿ ಅಭ್ಯರ್ಥಿಗಳಿಗೆ ಡಿಕೆಶಿ ಆಮಿಷ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎರಡನೇ ಪಟ್ಟಿ ಬಿಡುಗಡೆಗೂ ಮುನ್ನ ಬಿಜೆಪಿಯ ಬಹುತೇಕ ಶಾಸಕರುಗಳಿಗೆ ನಿಮಗಾಗಿ ಟಿಕೆಟ್ ಕಾದಿರಿಸಿದ್ದೇವೆ ಬರುತ್ತೀರಾ ಎಂದು ಕೇಳಿದ್ದರು. ಕಾಂಗ್ರೆಸ್ಸಿಗರು ಹೊರಗಡೆ ಶೂರತದ ಮಾತನಾಡುತ್ತಾರೆ ಒಳಗಡೆ ಹಕೀಕತ್ ಬೇರೆಯೇ  ಇದೆ ಎಂದು ಛೇಡಿಸಿದ್ದಾರೆ.

ಲಕ್ಷ್ಮಣ ಸವದಿ ಜೊತೆ ಮಾತನಾಡಿದ್ದೇನೆ

ಮಹೇಶ್ ಕುಮಟಳ್ಳಿ ಸೋಲನ್ನು ನನ್ನ ತಲೆಗೆ ಕಟ್ಟಲು ನೋಡುತ್ತಿದ್ದಾರೆ ಎಂಬ ಲಕ್ಷ್ಮಣ ಸವದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಲಕ್ಷ್ಮಣ ಸವದಿ ಅವರ ಬಳಿ ಮಾತನಾಡಿದ್ದು  ಆ ರೀತಿ ಏನೂ  ಇಲ್ಲ. ಸವದಿ ಅವರು ಬಿಜೆಪಿ ಪಕ್ಷದ ಹಿರಿಯ ನಾಯಕರು, ಡಿಸಿಎಂ ಆಗಿದ್ದವರು. ಅವರ ಜವಾಬ್ದಾರಿಯ ಬಗ್ಗೆ  ಅವರಿಗೆ ಅರಿವಿದೆ ಎಂದು ತಿಳಿದಿದ್ದೇನೆ. ಅವರ ಬಳಿ ಮಾತನಾಡಿದ್ದು ಎಲ್ಲವೂ ಸರಿ ಹೋಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES