Monday, December 23, 2024

ಡಿ.ಕೆ ಶಿವಕುಮಾರ್ ‘ಅದೊಂದು ಹುಚ್ಚಮುಂಡೆದು’ : ಸಿ.ಎಂ ಇಬ್ರಾಹಿಂ ಲೇವಡಿ

ಬೆಂಗಳೂರು : ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಶಿವಕುಮಾರ್ ಅದೊಂದು ಹುಚ್ಚಮುಂಡೆದು ಎಂದು ಲೇವಡಿ ಮಾಡಿದ್ದಾರೆ.

ಹಾನಗಲ್ ಪಟ್ಟಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿರುವ ಅವರು, ಮೇ 18ಕ್ಕೆ ನಮ್ಮ ನಾಯಕ ಎಚ್.ಡಿ ಕುಮಾರಸ್ವಾಮಿ ವಿಧಾನಸೌದದಲ್ಲಿ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೋದಿ ಅವರಿಗಂತು ಮದುವೆನೇ ಆಗಿಲ್ಲ

ಮೋದಿಗೆ ಚಿಂತೆ ಇದೆಯೇನು? ಅವರಿಗಂತು ಮದುವೆನೆ ಆಗಿಲ್ಲ. ಗುಜರಾತ್ ಮಾಡೇಲ್, ನಮ್ಮ ಊರಲ್ಲಿ ಪಾನಿಪುರಿ ಮಾರುತ್ತಿದ್ದವನು ಗುಜರಾತ್ ನವನು. ಕರ್ನಾಟಕದವರಾರು ಗುಜರಾತ್ ಗೆ ಹೋಗಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಇನ್ನೊಂದು ತಿಂಗಳಷ್ಟೇ ನಿಮ್ಮ ಸಮಯ : HDK ಎಚ್ಚರಿಕೆ ನೀಡಿದ್ದು ಯಾರಿಗೆ?

ಸಿದ್ದರಾಮಯ್ಯಗೆ ಸೋನಿಯಾಗಾಂಧಿ ಚಿಂತೆ. ಬೊಮ್ಮಾಯಿಗೆ ಮೋದಿ ಚಿಂತೆ. ಇವರಿಗೆ ಇರೋದು ಹಲಾಲ್ ಕಟ್, ಜಟ್ಕಾ ಕಟ್. ಹಿಜಾಬ್ ಅಂದ್ರೆ ಸೆರಗು. ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾಗಾಂಧಿ ಸೆರಗು ಹಾಕಿದ್ರು. ಹೆಣ್ಣಿಗೆ ಸೆರೆಗೆ ಚೆಂದ ಎಂದು ತಿಳಿಸಿದ್ದಾರೆ.

ಹಾನಗಲ್ ಮಾನ ಹೋಯ್ತು

ಮಾನೆಗೆ ತಂದಾಗಲೆ ಹೇಳಿದೆ ಹಾನಗಲ್ ಮಾನ ಹೋಯ್ತು ಅಂತಾ. ಮಾನೆ, ದಿನೇಶ್ ಇವರದ್ದು ಐದು ಜನರದ್ದು ಒಂದು ಗ್ಯಾಂಗ್. ಜಗನ್ನಾಥ ಜೋಷಿಯವರಿಗೆ ತಿರುಗಾಡಕ್ಕೆ ಚಪ್ಪಲಿ ಇರಲಿಲ್ಲ. ಅವರ ಕಾಲ ಚಪ್ಪಲಿಗೆ ಸಮ ಅಲ್ಲ‌ ಪ್ರಲ್ಹಾದ್ ಜೋಷಿ. ಮಾನೆ.. ನಿನಗೆ ಉಪ್ಪು ತಿಂದಿದ್ದ ನೆನಪು ಇದ್ದಿದ್ದರೆ, ಉಪಕಾರ ತಿರಿಸಬೇಕಿತ್ತು ಎಂದು ಹರಿಹಾಯ್ದಿದ್ದಾರೆ.

ಹುಚ್ಚಮುಂಡೆವಾ, ಮನೋಹರ ಮನೆಗೆ ಏನಾದ್ರು ಇಟ್ಟು ಹೋಗಬೇಕು ತಗೊಂಡ ಹೋಗಾಕ ಏನು ಇಲ್ಲ. ನಮ್ಮ ಹತ್ರ ಪಾಪದ ದುಡ್ಡು ಇಲ್ಲ. ಮಾನೆ ಬಂದ ಇವನು ಕೆಂಪು ಕೆಂಪಗಿದ್ದ. ಮನೋಹರ ತಹಶಿಲ್ದಾರ ಕಣ್ಣೀರು ಹಾಕಿದ್ರು. ಕಾಂಗ್ರೆಸ್ ಧರಿದ್ರ ತೊಲಗ್ತು ಒಳ್ಳೆಯದಾಯ್ತು. ಕಾಂಗ್ರೆಸ್, ಬಿಜೆಪಿ ಚಿಕ್ಕ-ದೊಡ್ಡಪ್ಪನ ಮಕ್ಕಳು ಎಂದು ಲೇವಡಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES