Thursday, April 18, 2024

ಪವರ್ ಬೇಟೆ ನಂ.33: ‘ಲಂಚ ಕಮ್ಮಿ ಆದ್ರೆ, ಜೆಸಿಬಿ ತಗೊಂಡು ಕಿತ್ತಾಕ್ತೀನಿ’ : ದಳಪತಿ ಆವಾಜ್ ನೋಡಿ

ಬೆಂಗಳೂರು : ಬೇರೆಯವರಿಗೆ ಇದಕ್ಕಿಂದ ಜಾಸ್ತಿ ಕೊಟ್ಟಿಲ್ಲ ಅಲ್ವಾ? ಅವರಿಗೆ ಒಂದು ಲಕ್ಷದ ಮೇಲೆ ಇತ್ತು ಅಂದ್ರೆ, ನಾನೇ ಸ್ವತಃ ಜೆಸಿಬಿ ತೆಗೆದುಕೊಂಡು, ನೀವು ಎಲ್ಲಿ ತನಕ ಹಾಕಿರುತ್ತೀರೋ ಅಲ್ಲಿ ತನಕ ಕಿತ್ತಾಕಿಸುತ್ತೇನೆ.

ಇದು, ಲಂಚದ ಡೀಲ್ ಕುದುರಿಸುವಾಗ ಗುರುಮಠಕಲ್ ದಳಪತಿ ಪವರ್ ಟಿವಿ ಸ್ಟಿಂಗ್ ತಂಡದ ಪ್ರತಿನಿಧಿಗೆ ಖಡಕ್ ಆಗಿಯೇ ಎಚ್ಚರಿಕೆ ಕೊಟ್ಟ ಪರಿ. ನಮ್ಮ ತನಿಖಾ ತಂಡಕ್ಕೆ ಸಿಕ್ಕಿಬಿದ್ದ 33ನೇ ಬಲಿ ಯಾದಗಿರಿ ಜಿಲ್ಲೆ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ.

ಕಿಲೋಮೀಟರ್ ಗೆ 80 ಸಾವಿರ ಮಾಡುತ್ತೇವೆ ಸರ್.. ಎಲ್ಲರಿಗೂ ಅಷ್ಟೇನಾ? ಎಲ್ಲರಿಗೂ ಎಷ್ಟೆಷ್ಟು ಮಾಡುತ್ತೀರಾ.. ಅಷ್ಟೇನಾ? ಈಗ ನಾಗಮಂಗಲದಲ್ಲಿ ನಮ್ಮವರು ಇದ್ದಾರೆ. ಮತ್ತೆ ಅವರು ಏನಾದ್ರೂ ಕೇಳಿದ್ರೆ ಹೆಚ್ಚು ಕಮ್ಮಿ ಆಗಿರಬಾರದು. ನಾವು ಅವರನ್ನೂ ಕೇಳುತ್ತೇವೆ. ಮತ್ತೆ ನಮ್ಮ ಬೇರೆ ಇವರನ್ನೂ ಕೇಳುತ್ತೇವೆ. ವ್ಯತ್ಯಾಸ ಇರಬಾರದು ಎಂದು ನೇರಾ ನೇರಾವಾಗಿ ಮಾತನಾಡಿದರು.

ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಗುರುಮಠಕಲ್ ಶಾಸಕರು ಬೆಂಗಳೂರಿನ ಶಾಸಕರ ಭವನದಲ್ಲಿ ಪವರ್ ಟಿವಿ ಜೊತೆ ಡೀಲ್ ಮಾತುಕತೆ ನಡೆಸಿದರು. ಈ ವೇಳೆ ಶಾಸಕ ನಾಗನಗೌಡ ಕಂದಕೂರ ತುಂಬಾ ನೀಟಾಗಿಯೇ ಮಾತನಾಡಿದ್ದರು. ಬೆಟ್ಟದ ಹಳ್ಳಿ, ಧರ್ಮಾಪುರ 3 ಕಿಲೋಮೀಟರ್ ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಕೆಲಸದ ಬಗ್ಗೆ ಅಳೆದು ತೂಗಿ ಪದೇಪದೇ ಪ್ರಶ್ನೆ ಕೇಳಿದರು.

ಜೆಸಿಬಿ ತಂದು ಕಿತ್ತಾಕಿಸ್ತೀನಿ

ಪ್ರತೀ ಕಿಲೋಮೀಟರ್​ಗೆ 80 ಸಾವಿರ ರೂಪಾಯಿ ಡೀಲ್​ಗೆ ಒಪ್ಪಿಗೆ ಸೂಚಿಸಿದರು. ಡೀಲ್ ಬಗ್ಗೆ ಮಾತನಾಡಿದ್ರೂ ಹಣ ಸ್ವೀಕರಿಸದ ಶಾಸಕ ನಾಗನಗೌಡ ಕಂದಕೂರ, ಶಾಸಕ ರಾಜವೆಂಕಟಪ್ಪ ನಾಯಕಗೆ ನೀಡಿದಷ್ಟೇ ಲಂಚ ತನಗೂ ಕೊಡಬೇಕೆಂದು ಬೇಡಿಕೆ ಇಟ್ಟರು. ಅವರಿಗೆ ಕಿಲೋಮೀಟರ್​ಗೆ ಒಂದು ಲಕ್ಷಕ್ಕಿಂತ ಹೆಚ್ಚು ಕೊಟ್ಟಿದ್ರೆ ಜೆಸಿಬಿ ತಂದು ಕಿತ್ತಾಕಿಸ್ತೀನಿ ಎಂದು ಎಚ್ಚರಿಕೆ ನೀಡಿದರು. ಡೀಲ್ ಮಾತುಕತೆ ವೇಳೆ ಜಂಟಲ್​ಮ್ಯಾನ್ ಅಗ್ರೀಮೆಂಟ್ ಬಗ್ಗೆಯೂ ಶಾಸಕರು ಪ್ರಸ್ತಾಪ ಮಾಡಿದರು. ಹೀಗೆ ಖಡಾಖಂಡಿತವಾಗಿ, ನೇರವಾಗಿ ಅಬ್ಬರಿಸುತ್ತಾ ಶಾಸಕರು ಫೈನಲ್ ಆಗಿ 3.20 ಲಕ್ಷ ರೂಪಾಯಿಗೆ ಒಕೆ ಎಂದರು.

ಹೆಸರು: ನಾಗನಗೌಡ ಕಂದಕೂರ

ಕ್ಷೇತ್ರ: ಗುರುಮಠಕಲ್​​

ಪಕ್ಷ: ಜೆಡಿಎಸ್

ಜಿಲ್ಲೆ: ಯಾದಗಿರಿ

ಸ್ಥಳ: ಶಾಸಕರ ಭವನ, ಬೆಂಗಳೂರು

ಬೇಡಿಕೆ: 3 ಲಕ್ಷದ 20 ಸಾವಿರ ರೂಪಾಯಿ

RELATED ARTICLES

Related Articles

TRENDING ARTICLES