Saturday, April 20, 2024

ಪವರ್ ಬೇಟೆ ನಂ.34 : ಒಂದೂವರೆ ಇಟ್ಕೊಂಡ್ ಏನ್ ಮಾಡ್ಲಿ, ಎಲೆಕ್ಷನ್ ಬೇರೆ ಬಂತು : ‘ಕೈ’ ಶಾಸಕನ ಲಂಚಾವತಾರ ಹೀಗಿತ್ತು!

ಬೆಂಗಳೂರು : ಸರ್, ಕಿಲೋಮೀಟರ್ ಗೆ ಒಂದೂವರೆ ಕೊಡುತ್ತಿದ್ದೇವೆ. ಎಲ್ಲರಿಗೂ ಅಷ್ಟೇ ಕೊಡುತ್ತಿದ್ದೇವೆ ಸರ್ ಎಂದ ಪವರ್ ಟಿವಿ ಪ್ರತಿನಿಧಿ. ಯಾತಕ್ಕಪ್ಪಾ.. ಒಂದೂವರೆ ಇಟ್ಟುಕೊಂಡು ಏನು ಮಾಡೋದು? ನಮಗೆ ಎಲೆಕ್ಷನ್ ಬೇರೆ ಇದೆ. ಆ ರೀತಿ ಮಾಡಿದ್ರೆ ಏನು ಉಪಯೋಗ ಆಗುತ್ತೆ?

ಇದು, ಪವರ್ ಟಿವಿ ಸ್ಟಿಂಗ್ ತಂಡಕ್ಕೆ ಸಿಕ್ಕಿಬಿದ್ದ 34ನೇ ಶಾಸಕನ ಮಾತುಗಳು. ಲಂಚದ ಡೀಲ್ ಕುದುರಿಸುವಾಗ ಪವರ್ ಟಿವಿ ಪ್ರತಿನಿಧಿಯೊಂದಿಗೆ 6 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿರುವ ಹುಮ್ನಾಬಾದ್ ಕಾಂಗ್ರೆಸ್ ಶಾಸಕ ರಾಜಶೇಖರ್ ಪಾಟೀಲ್ ಲಂಚಾವತಾರ ಬಟಾ ಬಯಲಾಗಿದೆ.

ಯಾವ ಸಂಘಟನೆಯವರೂ ಬರಲ್ಲ, ಕೆಲ್ಸ ಮಾಡಿಕೊಳ್ಳಿ

1.50 ಲಕ್ಷನಾ… ಅದೆಲ್ಲಾ ಕೊಟ್ರೆ ಅಲ್ಲಾ, ನೀವು ಕೆಲಸ ಮಾಡಿಕೋಬೇಕು. ಮಾಡಿಕೊಳ್ಳಿ ದುಡ್ಡು ಮುಖ್ಯ ಅಲ್ಲ ಎನ್ನುವ ಶಾಸಕರು, ಸರ್.. ಅಲ್ಲಿ ಏನಂದ್ರೆ, ಅಲ್ಲಿ ಡಿಸ್ಟರ್ಬ್ ಆಗುತ್ತೆ, ಸಂಘಟನೆಯವರು ಅಲ್ಲಿ ಬರ್ತಾರೆ ಅಂದಿದ್ದಕ್ಕೆ, ಇಲ್ಲ.. ಇಲ್ಲ.. ಅದೆಲ್ಲಾ, ನಮ್ಮಲ್ಲಿ ಯಾವ ಸಂಘಟನೆಯವರೂ ಬರಲ್ಲ, ಅವರೆಲ್ಲಾ ಏನಿದ್ರೂ ಬೆಂಗಳೂರು ಆ ಕಡೆ ಈಕಡೆ ಅಷ್ಟೇ ಎಂದು ಬಿಂದಾಸ್ ಆಗಿಯೇ ಮಾತನಾಡಿದರು.

ಹುಮ್ನಾಬಾದ್ ಕ್ಷೇತ್ರದಲ್ಲಿ ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಶಾಸಕ ರಾಜಶೇಖರ್ ಪಾಟೀಲ್​ನಮ್ಮ ತಂಡದ ಜೊತೆಗೆ ಡೀಲ್ ಕುದುರಿಸಿದ್ದಾರೆ. ಬೆಂಗಳೂರಿನ ಶಾಸಕರ ಭವನದಲ್ಲಿ ಮಾತುಕತೆಗಿಳಿದ ಶಾಸಕರು, ಬೆಳಕೆರೆ ಸಮೀಪ 4 ಕಿಲೋಮೀಟರ್​ ಕೇಬಲ್ ಅಳವಡಿಕೆಗೆ ಆಫರ್ ಕೊಟ್ಟರು​​​. ಪ್ರತೀ ಕಿಲೋಮೀಟರ್​ಗೆ ಒಂದೂವರೆ ಲಕ್ಷ ರೂಪಾಯಿ ನೀಡುವಂತೆ ಡಿಮ್ಯಾಂಡ್ ಮಾಡಿದರು.

ಡೀಲ್ ಒಪ್ಪಿಗೆ ಆದ ಬಳಿಕೆ ಅಡ್ವಾನ್ಸ್ ಆಗಿ ಒಂದೂವರೆ ಲಕ್ಷ ರೂಪಾಯಿ ನೀಡಲು ಹೋದಾಗ ಶಾಸಕರು ನಿರಾಕರಿಸಿದರು. ಆನಂತರ ಎರಡು ಲಕ್ಷ ನೀಡಲು ಹೋದಾಗಲೂ ಸ್ವೀಕರಿಸದ ಶಾಸಕರು, ಪ್ರತೀ ಕಿಲೋಮೀಟರ್​ಗೆ ತಲಾ ಒಂದೂವರೆ ಲಕ್ಷದಂತೆ ನೀಡಲು ಒಪ್ಪಿಗೆ ಸೂಚಿಸಿದರು. ಬಳಿಕ ಹುಮ್ನಾಬಾದ್​​ನಲ್ಲಿ ಒಟ್ಟಿಗೆ 6 ಲಕ್ಷ ರೂಪಾಯಿ ನೀಡುವಂತೆ ಸೂಚನೆ ನೀಡಿದರು. ಇವರ ಭ್ರಷ್ಟಾಚಾರದ ಮುಖವಾಡ ಪವರ್ ಟಿವಿ ರಹಸ್ಯ ಕ್ಯಾಮೆರಾದ ಮೂಲಕ ರಾಜ್ಯದ ಜನತೆಯ ಮುಂದೆ ಬಯಲಾಗಿದೆ.

ಹೆಸರು: ರಾಜಶೇಖರ್ ಪಾಟೀಲ್​

ಕ್ಷೇತ್ರ: ಹುಮ್ನಾಬಾದ್

ಪಕ್ಷ: ಕಾಂಗ್ರೆಸ್

ಜಿಲ್ಲೆ: ಬೀದರ್

ಸ್ಥಳ: ಶಾಸಕರ ಭವನ, ಬೆಂಗಳೂರು

ಬೇಡಿಕೆ: 6 ಲಕ್ಷ ರೂಪಾಯಿ

RELATED ARTICLES

Related Articles

TRENDING ARTICLES