Thursday, March 28, 2024

ಪವರ್ ಬೇಟೆ ನಂ.31: ‘ಎಷ್ಟು ತಂದಿದ್ದೀರಾ? ಈಗ್ಲೆ ಕೊಟ್ಟು ಹೋಗಿ’ : 14 ಲಕ್ಷಕ್ಕೆ ಪಟ್ಟು ಹಿಡಿದ ಕಾಂಗ್ರೆಸ್ ಶಾಸಕ

ಬೆಂಗಳೂರು : ಈಗಾಗಲೇ ಪವರ್ ಟಿವಿ ಮೆಗಾ ಬೇಟೆಯಲ್ಲಿ ರಾಜ್ಯದ 29 ಶಾಸಕರ ಲಂಚಾವತಾರ ರೆಡ್ ಹ್ಯಾಂಡ್ ಆಗಿ ಸೆರೆಯಾಗಿದೆ. ರಾಜ್ಯದ ಜನತೆ, ಶಾಸಕರ ಹಣದಾಸೆಯನ್ನು ಕಣ್ಣಾರೆ ಕಂಡಿದ್ದಾರೆ. ಇದೀಗ, ನಮ್ಮ ತಂಡದ 31ನೇ ಬೇಟೆ ನಡೆಸಿದೆ.

ಹೌದು, ಒಎಫ್​​ಸಿ ಕೇಬಲ್ ಅಳವಡಿಕೆ ಸಂಬಂಧ ಮಸ್ಕಿ ಕಾಂಗ್ರೆಸ್ ಶಾಸಕರು ನಮ್ಮ ತಂಡದ ಜೊತೆಗೆ ಡೀಲ್​ ಮಾತುಕತೆ ನಡೆಸಿ ಸಿಕ್ಕಿಬಿದ್ದಿದ್ದಾರೆ. ರಾಯಚೂರು ಜಿಲ್ಲೆ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ತುರುವಿಹಾಳ ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 31ನೇ ಶಾಸಕ.

ಮಸ್ಕಿ ಕ್ಷೇತ್ರದಲ್ಲಿ ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರುವಿಹಾಳ ಪವರ್ ಟಿವಿ ಪ್ರತಿನಿಧಿ ಜೊತೆಗೆ ಡೀಲ್​ ಮಾತುಕತೆ ನಡೆಸಿದ್ದಾರೆ. ಆರಂಭದಲ್ಲಿ ಪ್ರತೀ ಕಿಲೋಮೀಟರ್​ಗೆ 2 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.

14 ಲಕ್ಷ ರೂ.ಗೆ ಬೇಡಿಕೆ

ಶಾಸಕ ಬಸನಗೌಡ ತುರುವಿಹಾಳ ತನ್ನ ಆಪ್ತ ಸಹಾಯಕನಿಂದ ಡೀಲ್ ಮಾತುಕತೆ ನಡೆಸಿದರು. ಒಟ್ಟು 7 ಕಿಲೋಮೀಟರ್​​​​ಗೆ 14 ಲಕ್ಷ ರೂಪಾಯಿ ನೀಡುವಂತೆ ಶಾಸಕರು ಬೇಡಿಕೆ ಇಟ್ಟಿದ್ದರು. ಫೈನಲ್ ಆಗಿ ಪ್ರತೀ ಕಿಲೋಮೀಟರ್​​ಗೆ ಒಂದೂವರೆ ಲಕ್ಷ ರೂಪಾಯಿಗೆ ಡೀಲ್ ಕುದುರಿಸಿದ್ದರು​​.

ಟೋಟಲ್ ಕ್ಲೋಸ್ ಮಾಡಿ ಬಿಡಿ

ಶಾಸಕನ ಸಹಾಯಕ ಡೀಲ್ ವೇಳೆ, ಟೋಟಲ್ ಕ್ಲೋಸ್ ಮಾಡಿ ಬಿಡಿ. ಒಂದೇ ಸಲ, ತಿರಗಾ ತಿರಗಾ ಏಕೆ. ವರ್ಕ್ ಆರ್ಡರ್ ಫಸ್ಟ್ ಕೊಡಿ, ಏನಿದೆ ನೋಡೋಣ. ನೀನು ಬಾರಣ್ಣ… ಫುಲ್ ಮಾಡಿ ಬಾ. ಅಲ್ಲಿ ಪಿಡಿಓಗೆ ಹೇಳುತ್ತೇವೆ. ಒಂದೂವರೆ ಮಾಡಿಕೋ ಎಂದು ಕಡ್ಡಿ ಮುರಿದಂತೆ ಡೀಲ್ ಫೈನಲ್ ಮಾಡಿದರು.

ಅಡ್ವಾನ್ಸ್ ಹಣವಾಗಿ ಒಂದು ಲಕ್ಷ ರೂಪಾಯಿ ಪಡೆದಿದ್ದರು. ಸಹಾಯಕರಿಬ್ಬರ ಮೂಲಕ ಒಂದು ಲಕ್ಷ ರೂಪಾಯಿ ಪಡೆಯುವಾಗ ಪವರ್ ಟಿವಿ ರಹಸ್ಯ ಕ್ಯಾಮೆರಾದಲ್ಲಿ ಶಾಸಕ ಬಸನಗೌಡ ತುರುವಿಹಾಳ ಲಂಚಬಾಕತನ ರಾಜ್ಯದ ಜನತೆಯ ಮುಂದೆ ಬೆತ್ತಲಾಗಿದೆ.

ಹೆಸರು: ಬಸನಗೌಡ ತುರುವಿಹಾಳ

ಕ್ಷೇತ್ರ: ಮಸ್ಕಿ

ಪಕ್ಷ: ಕಾಂಗ್ರೆಸ್

ಜಿಲ್ಲೆ: ರಾಯಚೂರು

ಸ್ಥಳ: ಶಾಸಕರ ಭವನ, ಬೆಂಗಳೂರು

ಬೇಡಿಕೆ: 10.5 ಲಕ್ಷ ರೂಪಾಯಿ

ಅಡ್ವಾನ್ಸ್: ಒಂದು ಲಕ್ಷ ರೂಪಾಯಿ

RELATED ARTICLES

Related Articles

TRENDING ARTICLES