ಬೆಂಗಳೂರು : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ಜೆಡಿಎಸ್ ಅಭ್ಯರ್ಥಿಗಳಿಗೆ ಕೆಲವು ಸಲಹೆ ಸೂಚನೆ ಕೊಟ್ಟಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಇದೀಗ ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಬೆಂಗಳೂರಿನ ಜೆ.ಪಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕುಮಾರಸ್ವಾಮಿ, ನನ್ನತ್ರ ಯಾವ ಬ್ಲಾಕ್‌ಮೇಲ್ ತಂತ್ರ ನಡೆಯಲ್ಲ ಅಂತ ಹೇಳಿದ್ದು ಹಾಸನ ಜಿಲ್ಲೆಯ ರಾಜಕಾರಣಕ್ಕಲ್ಲ. ಸಾಮಾನ್ಯವಾಗಿ ಭಾವನಾತ್ಮಕವಾಗಿ ನನ್ನನ್ನು ಬ್ಲಾಕ್‌ಮೇಲ್ ಮಾಡಿ ವೀಕ್ ಮಾಡೋಕ್ಕಾಗಲ್ಲ ಅಂತ ಎಂದು ಹೇಳಿದ್ದಾರೆ.
ಸ್ವತಂತ್ರ ಸರ್ಕಾರ ತರಲು ನಾನು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತೇನೆ. ಹಾಸನ ಟಿಕೆಟ್ ಚರ್ಚೆ ತಡರಾತ್ರಿ ಸುಗಮವಾಗಿ ಆಗಿದೆ. ಅಂತಿಮವಾಗಿ ಯಾವುದೇ ಗೊಂದಲ ಇಲ್ಲದೆ ಬಗೆಹರಿಯುತ್ತೆ. ಹಾಸನ ವಿಚಾರದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರದ್ದೇ ವರ್ಶನ್ ಹೇಳ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಕುಮಾರಣ್ಣನಿಗೆ ‘ಕಿಸ್’ ಕೊಟ್ಟ ಆ.. ‘ಮಹಿಳೆ ಗಂಡ’ ಹೇಳಿದ್ದೇನು?
ದೇವೇಗೌಡ್ರು ಅವರ ಅನುಭವ ಹೇಳಿದ್ದಾರೆ
ನಾನು ಅಲ್ಲಿನ (ಹಾಸನ) ಗ್ರೌಂಡ್ ರಿಪೋರ್ಟ್ ಏನಿದೆ ಅಂತ ಹೇಳಿದ್ದೇನೆ. ದೇವೇಗೌಡರು ಅವರ ಅನುಭವ ಹೇಳಿದ್ದಾರೆ. ಇಂದು ಮದ್ಯಾಹ್ನ ಮೂರು ಗಂಟೆಗೆ ಜೆ.ಪಿ ಭವನಕ್ಕೆ ಬರುತ್ತೇನೆ. ಪಕ್ಷ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರನ್ನೂ ಬರಲು ಹೇಳಿದ್ದೇನೆ. ಅಲ್ಲಿ ಚರ್ಚೆ ಮಾಡಿ ಎರಡನೇ ಪಟ್ಟಿ ಬಿಡುಗಡೆ ಬಗ್ಗೆ ತೀರ್ಮಾನ ಮಾಡ್ತೀವಿ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಚನ್ನಕೇಶ್ವರನ ಅನುಗ್ರಹ ಇದ್ರೆ ಏನು ಬೇಕಿದ್ರೂ ಆಗುತ್ತೆ
ಹಾಸನ ಟಿಕೆಟ್ ವಿಚಾರದಲ್ಲಿ ದೇವೇಗೌಡರದ್ದೇ ಅಂತಿಮ ನಿರ್ಧಾರ ಎಂದು ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ಗದಾರೆ. ಚನ್ನಕೇಶ್ವರನ ಅನುಗ್ರಹ ಇದ್ದರೆ ಏನ್ ಬೇಕಾದ್ರೂ ಆಗುತ್ತೆ. ದೇವೇಗೌಡರಿಗೆ 60 ವರ್ಷದ ರಾಜಕೀಯ ಅನುಭವವಿದೆ. ನಿನ್ನೆ ರಾತ್ರಿ 11 ಗಂಟೆವರೆಗೂ ಕುಮಾರಸ್ವಾಮಿ ಹಾಗೂ ದೇವೇಗೌಡರು ನನ್ನ ಜೊತೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.