Monday, December 23, 2024

ಮೋದಿ ‘ವಿಶ್ವದ ಅತ್ಯಂತ ಶಕ್ತಿಶಾಲಿ’ ಲೀಡರ್ : ನಮೋ ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಹೌದು, ಅಮೆರಿಕದ ಮಾರ್ನಿಂಗ್ ಕನ್ಸಲ್ಟ್ ಬಿಡುಗಡೆ ಮಾಡಿದ ಗ್ಲೋಬಲ್ ಲೀಡರ್ ಅಪ್ರೂವಲ್ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ 76% ರೇಟಿಂಗ್‌ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಮೆಕ್ಸಿಕೋದ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ 61% ರೇಟಿಂಗ್‌ನೊಂದಿಗೆ ಮೋದಿ ನಂತರದ (2ನೇ ಸ್ಥಾನ) ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮೂರನೇ ಸ್ಥಾನದಲ್ಲಿದ್ದರೆ, ಅಮೆರಿಕದ ಅಧ್ಯಕ್ಷ ಜೋ ಬೈಡನ್ ಈ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಇನ್ನೂ ಭಾರತ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ 10ನೇ ಸ್ಥಾನದಲ್ಲಿದ್ದಾರೆ.

ಟಾಪ್ 10 ಗ್ಲೋಬಲ್ ಲೀಡರ್

ನರೇಂದ್ರ ಮೋದಿ(Modi): 76%

ಲೋಪೆಜ್ ಒಬ್ರಡಾರ್(Lopez Obrador): 61%

ಅಲ್ಬನೀಸ್(Albanese): 55%

ಮೆಲೋನಿ(Meloni): 49%

ಲುಲಾ ಡ ಸಿಲ್ವಾ(Lula da Silva): 49%

ಜೋ ಬೈಡನ್ (Joe Biden): 41%

ಟ್ರುಡೊ(Trudeau): 39%

ಸ್ಯಾಂಚೆಜ್(Sanchez): 38%

ಸ್ಕೋಲ್ಜ್(Scholz): 35%

ರಿಷಿ ಸುನಕ್(Rishi Sunak): 34%

ಮ್ಯಾಕ್ರನ್(Macron): 22%

ನನ್ನ ವಿರುದ್ಧ ಸುಪಾರಿ ನೀಡಿದ್ದಾರೆ

ನನ್ನ ವರ್ಚಸ್ಸು ಹಾಳು ಮಾಡಲು ಕೆಲವರು ದೇಶದ ಒಳಗೆ ಹಾಗೂ ಹೊರಗಿನ ಜನರೊಂದಿಗೆ ಶಾಮೀಲಾಗಿದ್ದಾರೆ. ಅಲ್ಲದೆ,ಸುಪಾರಿಯನ್ನೂ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪ ಮಾಡಿದ್ದಾರೆ. ಈ ಹಿಂದೆ ಇದ್ದ ಸರ್ಕಾರಗಳು ಮತದಾರರ ಓಲೈಕೆಯಲ್ಲಿ ತಲ್ಲೀನವಾಗಿದ್ದವು. ಆದರೆ, ಬಿಜೆಪಿ ಸರ್ಕಾರ ಜನರನ್ನು ಸಂತೃಪ್ತಗೊಳಿಸಲು ನಿರತವಾಗಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES