Sunday, November 3, 2024

‘ನನ್ನ ನಂಬಿ ಬಂದವರಿಗೆ ಅನ್ಯಾಯ’ ಮಾಡ್ಬೇಡಿ : ಹೈಕಮಾಂಡ್ ಗೆ BSY ಡಿಮ್ಯಾಂಡ್ ಏನು?

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆ ಬಳಿಕ ಬಿಜೆಪಿಯಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಬಿಜೆಪಿ ಟಿಕೆಟ್‌ ವಿಚಾರದಲ್ಲಿ ಹೈಕಮಾಂಡ್‌ಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕೆಲ ಡಿಮ್ಯಾಂಡ್‌ ಇಡಲಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ಬಿಜೆಪಿ ಹೈಕಮಾಂಡ್‌ ಒಂದು ಲಿಸ್ಟ್‌ ರೆಡಿ ಮಾಡಿಕೊಂಡಿದ್ರೆ, ಇತ್ತ, ಯಡಿಯೂರಪ್ಪ ಅವರು ಒಂದು ಲಿಸ್ಟ್‌ ಮಾಡಿಕೊಂಡಿದ್ದಾರಂತೆ. ತಾನು ಹೇಳಿದ ಶಾಸಕರಿಗೇ(ಅಭ್ಯರ್ಥಿಗಳಿಗೆ) ಟಿಕೆಟ್‌ ನೀಡುವಂತೆ ಯಡಿಯೂರಪ್ಪ ಡಿಮ್ಯಾಂಡ್‌ ಮಾಡುತ್ತಿದ್ದಾರೆ ಎನ್ನಲಾಗಿದೆ.

ತಾವು ಪಟ್ಟಿ ಮಾಡಿರುವ ಅಭ್ಯರ್ಥಿಗಳಿಗೆ ಟಿಕೆಟ್‌ ಕೊಟ್ಟರೆ ಎಲ್ಲರನ್ನೂ ಗೆಲ್ಲಿಸಿಕೊಂಡು ಬರುತ್ತೇನೆ. ಹೈಕಮಾಂಡ್ ಬಳಿ 25ಕ್ಕೂ ಹೆಚ್ಚು ಶಾಸಕರ ಪರ ಮಾಜಿ ಸಿಎಂ ಯಡಿಯೂರಪ್ಪ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ನನ್ನ ನಂಬಿದವರಿಗೆ ಅನ್ಯಾಯವಾಗಿದೆ

ಏಪ್ರಿಲ್​​ 4ರಂದು ದೆಹಲಿಯಲ್ಲಿ ಚುನಾವಣೆ ಸಮಿತಿ ಮತ್ತು ಸಂಸದೀಯ ಮಂಡಳಿ ಸಭೆ ನಡೆಸಲಾಗುತ್ತದೆ. ಕೆಜೆಪಿ ಪಕ್ಷ ಕಟ್ಟಿದಾಗ ಹಲವರು ನನ್ನ ಜೊತೆ ಬಂದ್ರು, ವಾಪಸ್ ಆದ ಮೇಲೆ ಕೆಲವರಿಗೆ ಅವಕಾಶ ಸಿಗಲಿಲ್ಲ. ಹೀಗಾಗಿ, ನನ್ನ ನಂಬಿ ಬಂದವರಿಗೆ ಅನ್ಯಾಯವಾಗಿದೆ. ಇದೀಗ ತಮ್ಮನ್ನ ನಂಬಿದವರಿಗೆ ಟಿಕೆಟ್ ಕೊಡಿಸಲು ಯಡಿಯೂರಪ್ಪ ಪ್ಲಾನ್​ ಮಾಡಿದ್ದಾರೆ.

ಚುನಾವಣಾ ಸಮಿತಿ ಸಭೆಯಲ್ಲಿ ಈ ಪ್ರಸ್ತಾಪವಿಡಲು ಯಡಿಯೂರಪ್ಪ ನಿರ್ಧಾರ ಮಾಡಿದ್ದಾರಂತೆ. ಬಿಜೆಪಿ ಹೈಕಮಾಂಡ್‌ ಯಡಿಯೂರಪ್ಪ ಬೇಡಿಕೆಗೆ ಸೊಪ್ಪು ಹಾಕುತ್ತಾ? ಎಂದು ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES