Wednesday, January 22, 2025

‘ಘೋಸ್ಟ್’ ಚಿತ್ರದ ಸೀಕ್ರೆಟ್ ರಿವೀಲ್ ಮಾಡಿದ ಶಿವಣ್ಣ

ಬೆಂಗಳೂರು : ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಹಾಗೂ ಮತ್ತೊಂದು ಬಿಗ್ ಸಿನಿಮಾ ಅಂದ್ರೆ ಅದು ಘೋಸ್ಟ್. ನಟ ಶಿವರಾಜ್​ಕುಮಾರ್ ಅವರು ಗ್ಯಾಂಗ್​ಸ್ಟರ್ ಆಗಿ ನಟಿಸುತ್ತಿರುವ ಚಿತ್ರ.

ಹೌದು, ಬಾಲಿವುಡ್​ನ ಅನುಪಮ್ ಖೇರ್ ಹಾಗೂ ಮಲಯಾಳಂನ ಜಯರಾಂ ಶಿವಣ್ಣನ ಜೊತೆ ಬಣ್ಣ ಹಚ್ಚಿದ್ದಾರೆ. ಇದೀಗ, ಈ ಮೂವರು ಸೂಪರ್ ಸ್ಟಾರ್​ಗಳ ಮಹಾಸಂಗಮದ ಘೋಸ್ಟ್ ಸೀಕ್ರೆಟ್ ರಿವೀಲ್ ಆಗಿದೆ. ಶಿವಣ್ಣ, ಅನುಪಮ್ ಖೇರ್, ಜಯರಾಂ ಕಾಂಬೋ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

ನಿರ್ದೇಶಕ ಶ್ರೀನಿ ಅವರು ಘೋಸ್ಟ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್​ ಅಡಿ ಸಂದೇಶ್ ಬಂಡವಾಳ ಹೂಡಿದ್ದಾರೆ. ಘೋಸ್ಟ್ ಪ್ಯಾನ್ ಇಂಡಿಯಾ ಚಿತ್ರವಾಗಲಿದ್ದು, ಮೇಕಿಂಗ್, ತಾರಾಗಣದಿಂದ ಹೈಪ್ ಕ್ರಿಯೇಟ್ ಮಾಡಿದೆ. ನಿರ್ದೇಶಕ ಶ್ರೀನಿ ಈ ಬಾರಿ ಮಾಸ್ ಪ್ಯಾನ್ಸ್ ಗೆ ಹೊಸದೊಂದು ಟ್ರೀಟ್ ಕೊಡಲು ಹವಣಿಸುತ್ತಿದ್ದಾರೆ.

ಈಗಾಗಲೇ, ಶೂಟಿಂಗ್ ಭರದಿಂದ ಸಾಗುತ್ತಿದೆ. ನಟ ಶಿವರಾಜ್​ಕುಮಾರ್ ಗ್ಯಾಂಗ್​ಸ್ಟರ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಶಿವಣ್ಣನ ಕಿಲ್ಲಿಂಗ್ ಲುಕ್ ಕಿಕ್ಕೇರಿಸುತ್ತಿದೆ. ವಿಶೇಷ ಎಂದರೆ, ಈ ಸಿನಿಮಾಗೆ ಬಾಲಿವುಡ್​ ನ ಖ್ಯಾತ ನಟ ಅನುಪಮ್ ಖೇರ್ ಹಾಗೂ ಮಲಯಾಳಂ ಸ್ಟಾರ್ ಜಯರಾಂ ಅವರು ಸಹ ಬಣ್ಣ ಹಚ್ಚಿದ್ದಾರೆ.

ಚಿತ್ರರಂಗದಲ್ಲಿ ನಾಲ್ಕು ದಶಕ ಪೂರೈಸಿರೋ ಅನುಪಮ್ ಖೇರ್, ಇದೇ ಮೊದಲ ಬಾರಿ ಕನ್ನಡ ಸಿನಿಮಾವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಇದೇ ಮೊದಲ ಬಾರಿ ಶೂಟಿಂಗ್ ಸೆಟ್​​ನಲ್ಲಿ ಇವರೆಲ್ಲಾ ಒಟ್ಟಿಗೆ ಕಾಣಿಸಿಕೊಂಡಿದ್ದು ವಿಶೇಷ.

ಇನ್ನು ಅಪ್ಪು ಅವರಿಗಾಗಿ ನೀನೇ ರಾಜಕುಮಾರ ಸಾಂಗ್ ಹಾಡಿ ಫೇಮಸ್ ಆಗಿದ್ದ ಅಲಾ ವೈಕುಂಠಪುರಮುಲೋ ಚಿತ್ರದ ಖ್ಯಾತಿಯ ಮಲಯಾಳಂ ನಟ ಜಯರಾಂ, ಶಿವಣ್ಣ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡುತ್ತಿರುವುದಕ್ಕೆ ಸಂತೋಷ ಹಂಚಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES