Monday, December 23, 2024

ಸಿಎಂ ಆಗೋವರೆಗೂ ‘ಡಿಕೆಶಿ ಗಡ್ಡ’ ತೆಗೆಯಲ್ವಂತೆ

ಬೆಂಗಳೂರು : ವಿಡಿಯೋ ಬಿಡುಗಡೆ ಮುನಿರತ್ನ ವಿವಾದಾತ್ಮಕವಾಗಿ ಮಾತನಾಡಿದ್ದಾರೆ ಎಂದು ಗಂಭಿರ ಆರೋಪ ಮಾಡಿರುವ ಸಂಸದ ಡಿ.ಕೆ ಸುರೇಶ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಸುರೇಶ್ ಅವರಿಗೆ ಸಚಿವ ಮುನಿರತ್ನ ಟಾಂಗ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮುನಿರತ್ನ, ಡಿ.ಕೆ ಸುರೇಶ್ ಅವರ ಅಣ್ಣ (ಡಿ.ಕೆ ಶಿವಕುಮಾರ್) ಗಡ್ಡ ತೆಗೆಯುತ್ತಿಲ್ಲ. ಅವರಣ್ಣ ಸಿಎಂ ಆಗುವವರೆಗೂ ಗಡ್ಡ ತೆಗೆಯಲ್ವಂತೆ ಎಂದು ಕುಟುಕಿದ್ದಾರೆ.

ಗಡ ತೆಗೆದ್ರೆ ಅವರಣ್ಣ ಸುಂದರವಾಗಿ ಕಾಣ್ತಾರಂತೆ. ಎಲ್ಲರತ್ರ ಹೋಗಿ ನನ್ನ ಮುಖ್ಯಮಂತ್ರಿ ಮಾಡಿ ಅಂತ ಬೇಡಿಕೊಳ್ತಿದ್ದಾರೆ. ಅಣ್ಣನ್ನು ಮುಖ್ಯಮಂತ್ರಿ ಮಾಡಬೇಕು ಅಂತ ಓಡಾಡಿ ಸುಸ್ತಾಗಿದ್ದಾರೆ ಎಂದು ಪರೋಕ್ಷವಾಗಿ ಡಿ.ಕೆ ಶಿವಕುಮಾರ್ ಅವರನ್ನು ಮುನಿರತ್ನ ಕೆಣಕಿದ್ದಾರೆ.

ಹಲ್ಲೆಗೆ ಮುಸ್ಲಿಂ ಮಹಿಳೆಗೆ 50 ಸಾವಿರ

ನಮ್ಮಲ್ಲಿ ಒಂದು ಘಟನೆ ನಡೆದಿದೆ. ಸುನಂದಾ ಬೋರೇಗೌಡ ಅಂತ. ಅವರು ತಟ್ಟೆ ಹಂಚುವಾಗ ಗಲಾಟೆ ನಡೆದಿದೆ. ಆ ಮುಸ್ಲಿಂ ಹೆಣ್ಣುಮಗಳು ಹಲ್ಲೆ ಮಾಡಿದ್ದಾಳೆ. ಸುನಂದ ಬೋರೇಗೌಡ ಮೇಲೆ ಹಲ್ಲೆ ಮಾಡಲು ಮುಸ್ಲಿಂ ಮಹಿಳೆಗೆ 50 ಸಾವಿರ ಹಣ ಕೊಟ್ಟಿದ್ದಾರೆ. ಇದು ಇವರ ರಾಜಕೀಯ ಮಾಡುವ ಲಕ್ಷಣ ಎಂದು ಡಿ.ಕೆ ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗಡ್ಡ ತೆಗೆಯಲು ಎಷ್ಟು ಖರ್ಚಾಗುತ್ತೆ?

ನಾನು ಪ್ರಶ್ನೆ ಮಾಡ್ತೀನಿ, ಆರ್.ಆರ್ ನಗರಕ್ಕೆ ನಿಮ್ಮ ಕೊಡುಗೆ ಏನು? ಎಲ್ಲರನ್ನೂ ಕೂರಿಸಿ ಚರ್ಚೆ ಮಾಡೋಣ. ನಿಮ್ಮ ಅಣ್ಣ ಗಡ್ಡ ತೆಗೆಯಲು ಏನು ಬೇಕೋ ಅದು ಮಾಡಿ ಮೊದಲು. ಗಡ್ಡ ತೆಗೆಯಲು ಎಷ್ಟು ಖರ್ಚಾಗುತ್ತೆ? ಅದು ಬಿಟ್ಟು ನನ್ನ ಕ್ಷೇತ್ರದಲ್ಲಿ ಕಾರಿನ ಮೇಲೆ ಕಲ್ಲು ಹಾಕಬೇಕು ಎನ್ನುವ ಪ್ಲಾನ್ ಬಿಡಿ ಎಂದು ಕುಟುಕಿದ್ದಾರೆ.

ನನ್ನ ಮೇಲೆ ಎಫ್ಐಆರ್ ಹಾಕಬೇಕು ಅನ್ನೋದು ನಿಮ್ಮ ಪ್ಲಾನ್. ನಿಮ್ಮ ಪ್ಲಾನ್ ಏನು ಅಂತ ನನಗೆ ಗೊತ್ತಿದೆ. ನಿಮ್ಮ ಕಾರ್ಯಕರ್ತರಿಂದ ಕಾರಿನ ಮೇಲೆ ಹಲ್ಲೆ ಮಾಡಬೇಕು.ಬ್ಯಾಂಡೇಜ್ ಹಾಕಿಕೊಂಡು ಆಸ್ಪತ್ರೆಯಲ್ಲಿ ಮಲಗಬೇಕು. ಮುನಿರತ್ನ ಮೇಲೆ ದೂರು ಮಾಡಬೇಕು. ನಿಮ್ಮ ಪ್ಲಾನ್ ಬಗ್ಗೆ ಪೊಲೀಸರಿಗೆ ತಿಳಿಸಿದ್ದೇನೆ ಎಂದು ಮುನಿರತ್ನ ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES