Wednesday, January 22, 2025

ಡಾಲಿ ‘ಹೊಯ್ಸಳ’ ನೋಡಿ ಅಶ್ವಿನಿ ಪುನೀತ್ ಏನಂದ್ರು ಗೊತ್ತಾ?

ಬೆಂಗಳೂರು : ಡಾಲಿ ಧನಂಜಯ್​ ನಟನೆಯ ಹೊಯ್ಸಳ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮತ್ತೊಂದೆಡೆ, ದಿವಂಗತ ನಟ ಡಾ.ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹೊಯ್ಸಳ ಸಿನಿಮಾ ವೀಕ್ಷಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಹೌದು, ಗುರುದೇವ್ ಎಂಬ ಖಡಕ್ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಡಾಲಿ ಧನಂಜಯ್​ ಅವರ ಅಭಿನಯಕ್ಕೆ ಅಶ್ವಿನಿ ಪುನೀತ್ ಫುಲ್ ಮಾರ್ಕ್ಸ್ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ (ಪೋಸ್ಟ್) ಅಭಿಪ್ರಾಯ ಹಂಚಿಕೊಂಡಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್, ‘ಗುರುದೇವ್ ಹೊಯ್ಸಳ’ ಚಿತ್ರದ ಕಥಾಹಂದರವು ಅದ್ಭುತವಾಗಿ ಮೂಡಿಬಂದಿದೆ. ಈ ಚಿತ್ರ ಯಶಸ್ವಿಯಾಗಲಿ ಎಂದು ನಮ್ಮೆಲ್ಲರ ಹಾರೈಕೆ. ಶುಭವಾಗಲಿ ಎಂದು ಹೇಳಿದ್ದಾರೆ.

ಸಿನಿಮಾ ನೋಡುವುದೇ ಸತ್ಕಾರ

ಚಿತ್ರದಲ್ಲಿ ಗುರುದೇವ ಹೊಯ್ಸಳ (ಡಾಲಿ) ಕರ್ತವ್ಯ ಹಾಗೂ ಅಭಿನಯ ನಮ್ಮನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗುತ್ತದೆ. ಈ ಸಿನಿಮಾ ನೋಡುವುದೇ ಒಂದು ಸತ್ಕಾರ. ಈ ಅತ್ಯುತ್ತಮ ಸಿನಿಮಾ ನೀಡಿದ ನಟ ಧನಂಜಯ್, ನವೀನ್ ಶಂಕರ್ ಮತ್ತು ಇನ್ನಿತರ ಕಲಾವಿದರು, ಸಿಬ್ಬಂದಿ ಹಾಗೂ ಇಡೀ ಚಿತ್ರತಂಡಕ್ಕೆ ನನ್ನ ಅಭಿನಂದನೆಗಳು ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಇಂಡಸ್ಟ್ರಿ ಹಿಟ್ ಕೊಟ್ಟ ಡಾಲಿ

ನಟ ಡಾಲಿ ಧನಂಜಯ್ ಹೊಯ್ಸಳ ಸಿನಿಮಾದ ಮೂಲಕ ಮತ್ತೊಂದು ಇಂಡಸ್ಟ್ರಿ ಹಿಟ್ ಕೊಟ್ಟಿದ್ದಾರೆ. ಡಾಲಿ ಪಕ್ಕಾ ಮಾಸ್ ವಿತ್ ಕ್ಲಾಸ್ ಕಂಟೆಂಟ್​ನಿಂದ ನೋಡುಗರಿಗೆ ಮಸ್ತ್ ಮನರಂಜನೆ ನೀಡುವಲ್ಲಿ ಯಶಸ್ವಿ ಆಗಿದ್ದಾರೆ. ಹೊಯ್ಸಳ, ಈ ವರ್ಷದ ಮತ್ತೊಂದು ಇಂಡಸ್ಟ್ರಿ ಹಿಟ್ ಸಿನಿಮಾ ಸಾಲಿಗೆ ಸೇರ್ಪಡೆಯಾಗಿದೆ.

RELATED ARTICLES

Related Articles

TRENDING ARTICLES