Sunday, January 19, 2025

ಪವರ್ ಬೇಟೆ ನಂ.25 : ಕಂಪ್ಲಿ ಶಾಸಕ ಗಣೇಶ್ ‘ಡೀಲ್ ಮಗಾ ಡೀಲ್’

ಬೆಂಗಳೂರು : ಭ್ರಷ್ಟಾಚಾರಲ್ಲಿ ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ಶಾಸಕರು ಯಾರಿಗಿಂತ ಹಿಂದೆ ಬಿದ್ದಿಲ್ಲ ಅನ್ನೋದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ.

ಹೌದು, ವಿಜಯನಗರ ಜಿಲ್ಲೆ ಕಂಪ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೆ.ಎನ್​​.ಗಣೇಶ್ ಲಂಚ ಪುರಾಣ ಪವರ್ ಟಿವಿ ಮೆಗಾ ಬೇಟೆಯಲ್ಲಿ ಬಯಲಾಗಿದೆ. ನಮ್ಮ ರಹಸ್ಯ ಕಾರ್ಯಾಚರಣೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 25ನೇ ಶಾಸಕ ಇವರೇ ನೋಡಿ.

ಶಾಸಕ ಜೆ.ಎನ್​​.ಗಣೇಶ್ ಅವರಿಂದಲೂ ಡೀಲ್ ಮಗಾ ಡೀಲ್!​ ಕಂಪ್ಲಿ ಪಟ್ಟಣದಲ್ಲಿ ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಪವರ್ ಟಿವಿ ಸ್ಟಿಂಗ್ ತನಿಖಾ ತಂಡದ ಜೊತೆಗೆ ಮಾತುಕತೆ ನಡೆಸಿದ್ದರು. ಅಕ್ರಮವಾಗಿ ಕೇಬಲ್ ಅಳವಡಿಸಲು ಕಿಲೋಮೀಟರ್​ಗೆ ತಲಾ 2 ಲಕ್ಷಕ್ಕೆ ಡಿಮ್ಯಾಂಡ್​ ಮಾಡಿದ್ದರು.

ಶಾಸಕ ಗಣೇಶ್ ಫೈನಲ್ಲ್ ಆಗಿ ಕಿಲೋಮೀಟರ್​ಗೆ ತಲಾ 2 ಲಕ್ಷ ಲಂಚಕ್ಕೆ ಒಪ್ಪಿಕೊಳ್ಳುತ್ತಾರೆ. ತನ್ನ​ ಪಿಎ ಮೂಲಕ ಬೆಂಗಳೂರಿನ ಶಾಸಕರ ಭವನದಲ್ಲಿ ಜೆ.ಎನ್​.ಗಣೇಶ್ 2 ಲಕ್ಷ ರೂಪಾಯಿ ಪಡೆಯುತ್ತಾರೆ. ಈಗ 5 ಲಕ್ಷ ರೂಪಾಯಿ ಕೊಡು, ಊರಲ್ಲಿ 3 ಲಕ್ಷ  ರೂಪಾಯಿ ನೀಡುವಂತೆ ಶಾಸಕ ಗಣೇಶ್ ಬೇಡಿಕೆ ಇಡುತ್ತಾರೆ.

ಬೆಂಗಳೂರಿನ ಶಾಸಕರ ಭವನದಲ್ಲಿ ಡೀಲ್ ಮಾತುಯಕತೆ ನಡೆದಿದ್ದು, ಆರಂಭದಲ್ಲಿ 2 ಲಕ್ಷ ರೂಪಾಯಿ ಪಡೆದ ನಂತರ ಕಂಪ್ಲಿಯಲ್ಲೂ ಪಿಎ ಮೂಲಕ 1 ಲಕ್ಷ ರೂಪಾಯಿ ಲಂಚ ಪಡೆಯುವ ಮೂಲಕ ತನ್ನ ಲಂಚಬಾಕಕತನ ಪ್ರದರ್ಶನ ಮಾಡಿದ್ದಾರೆ.

 

ಹೆಸರು: ಜೆ.ಎನ್.ಗಣೇಶ್

ಪಕ್ಷ: ಕಾಂಗ್ರೆಸ್

ಕ್ಷೇತ್ರ: ಕಂಪ್ಲಿ

ಜಿಲ್ಲೆ: ವಿಜಯನಗರ

ಸ್ಥಳ: ಶಾಸಕರ ಭವನ, ಬೆಂಗಳೂರು

ಲಂಚ: ಎರಡು ಲಕ್ಷ ರೂಪಾಯಿ

RELATED ARTICLES

Related Articles

TRENDING ARTICLES