Sunday, January 5, 2025

ಡಾಲಿ-ಬಲಿಯ ಆರ್ಭಟಕ್ಕೆ ಪ್ರೇಕ್ಷಕ ಚಿಲ್ : ಡಾಲಿ ಖಾಕಿ ಖದರ್ ಹೇಗಿದೆ ಗೊತ್ತಾ?

ಬೆಂಗಳೂರು : ರಾಜ್ಯದಲ್ಲಿ ಚುನಾವಣೆ ಫೀವರ್ ಶುರುವಾಗಿದ್ರೂ ಸಹ ಹೊಯ್ಸಳ ಖದರ್​ಗೆ ಥಿಯೇಟರ್ಸ್​ ಹೌಸ್​ಫುಲ್ ಆಗಿವೆ. ನಟರಾಕ್ಷಸ ಡಾಲಿ ಕರಿಯರ್​ನ ಬಿಗ್ಗೆಸ್ಟ್ ಓಪನಿಂಗ್ ಇದಾಗಿದ್ದು, ಸಿನಿಮಾ ನೋಡಿದ ಪ್ರತಿಯೊಬ್ಬರೂ ದಿಲ್​ಖುಷ್ ಆಗಿದ್ದಾರೆ.

ಹೌದು, ನಟರಾಕ್ಷಸ ಡಾಲಿ ಧನಂಜಯ ನಟನೆಯ 25ನೇ ಸಿನಿಮಾ ಹೊಯ್ಸಳ ವರ್ಲ್ಡ್​ವೈಡ್ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರ, ಆಡಂಬರದಲ್ಲಿ ಇದೇ ಮೊದಲ ಬಾರಿ ಡಾಲಿಯ ಈ ಸಿನಿಮಾ ವಿಶ್ವದಾದ್ಯಂತ ಕನ್ನಡದಲ್ಲೇ ರಿಲೀಸ್ ಆಗಿದೆ. ಎಲ್ಲೆಡೆ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.

ವಿಜಯ್ ನಿರ್ದೇಶನದ ಹಾಗೂ ಕೆಆರ್​ಜಿ ಸ್ಟುಡಿಯೋಸ್​ನ ಕಾರ್ತಿಕ್ ಗೌಡ-ಯೋಗಿ ಜಿ ರಾಜ್ ನಿರ್ಮಾಣದ ಹೊಯ್ಸಳ ಎಲ್ಲರ ನಿರೀಕ್ಷೆಯಂತೆ ಸೂಪರ್ ಹಿಟ್ ಅನಿಸಿಕೊಂಡಿದೆ. ಪವರ್​ಫುಲ್ ಪೊಲೀಸ್ ಕಾಪ್ ಆಗಿ ಡಾಲಿ, ವಿಲನ್ ಬಲಿ ಪಾತ್ರದಲ್ಲಿ ನವೀನ್ ಶಂಕರ್ ಹಾಗೂ ನಾನಾ ಪಾತ್ರದಾರಿ ಪ್ರತಾಪ್ ನಾರಾಯಣ್ ಪ್ರತಾಪ ಇಂಪ್ರೆಸ್ಸೀವ್ ಆಗಿದೆ.

ಮತ್ತೊಂದು ಇಂಡಸ್ಟ್ರಿ ಹಿಟ್ ಕೊಟ್ಟ ಡಾಲಿ

ಪಕ್ಕಾ ಮಾಸ್ ವಿತ್ ಕ್ಲಾಸ್ ಕಂಟೆಂಟ್​ನಿಂದ ನೋಡುಗರಿಗೆ ಮಸ್ತ್ ಮನರಂಜನೆ ಕೊಡುವಲ್ಲಿ ಯಶಸ್ವಿ ಆಗಿರೋ ಹೊಯ್ಸಳ, ಈ ವರ್ಷದ ಮತ್ತೊಂದು ಇಂಡಸ್ಟ್ರಿ ಹಿಟ್ ಅನಿಸಿಕೊಂಡಿದೆ. ಅಲ್ಲದೆ, ಕಿಚ್ಚ ಸುದೀಪ್ ಕೂಡ ಸಿನಿಮಾ ನೋಡಿ ಹಿಟ್ ಆಗಲಿದೆ ಅಂತ ಭವಿಷ್ಯ ನುಡಿದಿದ್ದಾರೆ. ಚಿತ್ರರಂಗದ ಸಾಕಷ್ಟು ಮಂದಿ ಸ್ಟಾರ್ಸ್​ ಡಾಲಿಯ 25ನೇ ವೆಂಚರ್​ಗೆ ಆಲ್​ ದಿ ಬೆಸ್ಟ್ ಹೇಳಿದ್ದಾರೆ.

ಡಾಲಿ ಚಿತ್ರಕ್ಕೆ ರಮ್ಯಾ ಚೈತ್ರಕಾಲ

ಸಂತೋಷ್ ಥಿಯೇಟರ್​ನಲ್ಲಿ ಹೊಯ್ಸಳ ರಿಲೀಸ್ ಸಂಭ್ರಮಾಚರಣೆ ಸಖತ್ ಜೋರಿತ್ತು. ನೆರೆದಿದ್ದ ಕನ್ನಡ ಕಲಾಭಿಮಾನಿಗಳು ಹಾಗೂ ಡಾಲಿ ಫ್ಯಾನ್ಸ್​ನ ಖುಷಿಯನ್ನ ಡಬಲ್ ಮಾಡಿದ್ದು ಮಾತ್ರ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ. ಪ್ರೇಕ್ಷಕರ ಜೊತೆ ಸಿನಿಮಾ ನೋಡಲು ಬಂದ ಮೋಹಕತಾರೆ, ತನ್ನ ಆತ್ಮೀಯ ಗೆಳತಿ ಅಮೃತಾ ಅಯ್ಯಂಗಾರ್ ಹಾಗೂ ಡಾಲಿ ಪರ್ಫಾಮೆನ್ಸ್ ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಸಿನಿಮಾ ಕಂಪ್ಲೀಟ್ ಆಗಿ ಮುಗಿದ ಮೇಲೆಯೂ ಸಹ ನಟಿ ರಮ್ಯಾ ಚಿತ್ರದ ಬಗ್ಗೆ ಕೊಂಡಾಡಿದ್ರು. ಸದ್ಯ ಡಾಲಿ ನೆಕ್ಸ್ಟ್ ಸಿನಿಮಾ ಉತ್ತರಕಾಂಡದಲ್ಲಿ ಧನಂಜಯಗೆ ಜೋಡಿಯಾಗಿ ರಮ್ಯಾ ಬಣ್ಣ ಹಚ್ಚಿದ್ದಾರೆ.

ಒಟ್ಟಾರೆ, ಹೊಯ್ಸಳ ಸಿನಿಮಾಗೆ ಪ್ರೇಕ್ಷಕಪ್ರಭು ಫುಲ್ ಮಾರ್ಕ್ಸ್ ನೀಡಿದ್ದಾರೆ. ಸಿನಿಮಾದಲ್ಲಿ ಮಾಸ್ತಿ ಡೈಲಾಗ್ಸ್ ಹೊಯ್ಸಳ ಚಿತ್ರಕ್ಕೆ ಪ್ಲಸ್ ಆಗಿದ್ದು, ಸಂಥಿಂಗ್ ಸ್ಪೆಷಲ್ ಅನಿಸಿದೆ. ಎಲ್ಲಾ ಌಂಗಲ್​ನಿಂದ ಸಿನಿಮಾ ಸಖತ್ ಎಂಟರ್​ಟೈನಿಂಗ್ ಆಗಿದ್ದು, ಎಲೆಕ್ಷನ್ ಫೀವರ್​ನ ನಡುವೆಯೂ ಹೌಸ್​ಫುಲ್ ಪ್ರದರ್ಶನ ಕಾಣ್ತಿರೋದು ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES