ಬೆಂಗಳೂರು : ತಾನು ಮಾಡಿದ ಪೋಸ್ಟ್ ಗೆ ನಿರೀಕ್ಷೆಗೂ ಮೀರಿ ಕಾಮೆಂಟ್ಸ್ ಹಾಗೂ ಟ್ರೋಲ್ ಆಗುತ್ತಿರುವುದರಿಂದ ಸ್ವತಃ ಉಪೇಂದ್ರ ಅವರೇ ಮತ್ತೊಂದು ಪೋಸ್ಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು, ಕೇಂದ್ರ ಚುನಾವಣಾ ಆಯೋಗ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿ ಮಾಡಿದೆ. ಈ ಬೆನ್ನಲ್ಲಿಯೇರಿಯಲ್ ಸ್ಟಾರ್ ನಟ ಉಪೇಂದ್ರ ಮಾಡಿರುವ ಟ್ವೀಟ್‌ಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದರು. ಇದಕ್ಕೆ ಉಪೇಂದ್ರ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.
ವಿಶೇಷ ಅಂದ್ರೆ, ನಟ ಉಪೇಂದ್ರ ಅವರು ಲೇಟೆಸ್ಟ್ ಆಗಿ ಮಾಡಿರುವ ಪೋಟ್ಸ್ ಕೂಡ ವೈರಲ್ ಆಗಿದೆ. ಇದು ತಂತ್ರಜ್ಞಾನ ಯುಗ. ಪ್ರಧಾನ ಮಂತ್ರಿಗಳು ತಮ್ಮ ಬೆರಳಿಂದಲೇ ಲಕ್ಷಾಂತರ ಬ್ಯಾಂಕ್ ಖಾತೆಗೆ ಏಕಕಾಲಕ್ಕೆ ಹಣ ವರ್ಗಾಯಿಸುತ್ತಾರೆ! ಇದು ಯಾಕೆ ಸಾಧ್ಯವಾಗಬಾರದು ಎಂದು ವಿಶ್ಲೇಷಿಸಿದ್ದಾರೆ.
ಇದು ಪ್ರಶ್ನೆ ಅಷ್ಟೇ, ಟೀಕೆ ಅಲ್ಲ
ಅನಕ್ಷರಸ್ತ ರಸ್ತೆ ವ್ಯಾಪಾರಿಗಳು ಫೋನ್ ಮೂಲಕ ಡಿಜಿಟಲ್ ನಲ್ಲಿ ಹಣದ ವ್ಯವಹಾರ ಮಾಡುತ್ತಾರೆ. ವ್ಯಾಪಾರಸ್ತರು ಕೋಟ್ಯಾಂತರ ಹಣ ಸುರಕ್ಷಿತವಾಗಿ ಆನ್ಲೈನ್ ನಲ್ಲಿ ಟ್ರಾನ್ಸ್ಫರ್ ಮಾಡುತ್ತಾರೆ. ಬಹು ಮುಖ್ಯ ದಾಖಲೆಗಳೊಂದಿಗೆ ವ್ಯವಹಾರ ಮಾಡುವ ದೊಡ್ಡ ದೊಡ್ಡ ಅಂತರಾಷ್ಟ್ರೀಯ ಕಂಪನಿಗಳು ಡಿಜಿಟಲ್ ಮೂಲಕ ವ್ಯವಹರಿಸುತ್ತಾರೆ. ಪ್ರಧಾನ ಮಂತ್ರಿಗಳು ತಮ್ಮ ಬೆರಳಿಂದಲೇ ಲಕ್ಷಾಂತರ ಬ್ಯಾಂಕ್ ಖಾತೆಗೆ ಏಕಕಾಲಕ್ಕೆ ಹಣ ವರ್ಗಾಯಿಸುತ್ತಾರೆ! ಇಷ್ಟೆಲ್ಲಾ ಬದಲಾವಣೆ ಆದರೂ ಚುನಾವಣೆಯಲ್ಲಿ ಮತದಾರರು ಅವರಿರುವ ಜಾಗದಿಂದಲೇ ಮತದಾನ ಮಾಡುವ ತಂತ್ರಜ್ಞಾನ ಏಕೆ ಬರುತ್ತಿಲ್ಲ? ಯೋಚಿಸಿ.. ಇದು ಪ್ರಶ್ನೆ ಅಷ್ಟೇ. ಟೀಕೆ ಅಲ್ಲ ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.
#SupremeCourt #Election2023 #ElectionCommission @ECISVEEP pic.twitter.com/5D7jrKlhMq
— Upendra (@nimmaupendra) March 29, 2023
ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ
ನಟ ಉಪೇಂದ್ರ ಇನ್ನೊಂದು ಪೋಸ್ಟ್ ಕೂಡ ಮಾಡಿದ್ದಾರೆ. ‘ಡಿಜಿಟಲ್ ವೋಟಿಂಗ್ ಅಲ್ವಾ? ಮತ ಎಣಿಕೆಗೆ 2 ದಿನಾ ಬೇಕಾ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ…ಅಬ್ಬಬ್ಬಾ ಏನು ಕಾಮೆಂಟ್ಸ್ ಗಳು? ವಾರೆ ವಾಹ್..ವ್ಯಾಪಾರೀ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂ ಬಾಲಕರು..’ ಎಂದು ಪರೋಕ್ಷವಾಗಿ ಕೆಲವರಿಗೆ ಕುಟುಕಿದ್ದಾರೆ.
ಡಿಜಿಟಲ್ ವೋಟಿಂಗ್ ಅಲ್ವಾ ?
ಮತ ಎಣಿಕೆಗೆ 2 ದಿನಾ ಬೇಕಾ ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ….
ಅಬ್ಬಬ್ಬಾ ಏನು ಕಾಮೆಂಟ್ಸ್ ಗಳು ?!
ವಾರೆ ವಾಹ್ …
ವ್ಯಾಪಾರೀ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂ ಬಾಲಕರು….— Upendra (@nimmaupendra) March 29, 2023
ಒಟ್ನಲ್ಲಿ, ಉಪೇಂದ್ರ ಅವರು, ಡಿಜಿಟಲ್ ಕಾಲದಲ್ಲಿ ಇವಿಎಂ ಮೂಲಕ ಚುನಾವಣೆ ನಡೆಯುತ್ತಿದೆ. ಆದರೆ, ಮತಗಳ ಎಣಿಕೆ ನಡೆಯಲು ಎರಡು ದಿನಗಳ ಅಂತರ ಯಾಕೆ, ಅದೇ ದಿನ ಪ್ರಕಟಿಸಬಹುದಲ್ಲ ಎಂಬ ಅರ್ಥದಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಉಪೇಂದ್ರ ಅವರ ಪೋಸ್ಟ್ ಗಳಿಗೆ ನೆಟ್ಟಿಗರು ಚಿತ್ರವಿಚಿತ್ರವಾಗಿ ಕಾಮೆಂಟ್ ಹರಿಬಿಟ್ಟಿದ್ದಾರೆ. ಸೋ ಕಾಲ್ಡ್ ರಾಜಕೀಯ ಹಿಂಬಾಲಕರು ಉಪ್ಪಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.