Thursday, April 25, 2024

ಭಯ ಬೇಡ : ಪ್ಯಾನ್- ಆಧಾರ್ ಕಾರ್ಡ್ ಲಿಂಕ್ ಗಡುವು ವಿಸ್ತರಣೆ

ಬೆಂಗಳೂರು : ಪ್ಯಾನ್-ಆಧಾರ್ ಲಿಂಕ್ ಗಡುವನ್ನು ಜೂನ್ 30ರ ವರೆಗೆ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ (ಆದಾಯ ತೆರಿಗೆ ಇಲಾಖೆ) ಆದೇಶ ಹೊರಡಿಸಿದೆ.

ಹೌದು, ಪ್ಯಾನ್-ಆಧಾರ್ ಲಿಂಕ್ ಮಾಡಲು ನೀಡಿದ್ದ ಅವಧಿ ಮುಗಿಯುವ ಎರಡು ದಿನಗಳ ಮುಂಚೆಯೇ ಮತ್ತೆ ಗಡುವನ್ನು ವಿಸ್ತರಣೆ ಮಾಡಲಾಗದೆ. ಇದರಿಂದ, ಕೆಲಸ ಕಾರ್ಯಗಳನ್ನು ಬದಿಗೊದ್ದು ತರಾತುರಿಯಲ್ಲಿ ಪ್ಯಾನ್-ಆಧಾರ್ ಜೋಡಣೆ ಮಾಡಲು ಸೈಬರ್ ಸೆಂಟರ್ ಗಳತ್ತ ಮುಖ ಮಾಡುತ್ತಿದ್ದವರು ನಿಟ್ಟುಸಿರು ಬಿಟ್ಟಿದ್ದಾರೆ.

ತೆರಿಗೆ ವಂಚನೆ ತಡೆಗೆ ಪ್ಯಾನ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವುದು ಮುಖ್ಯವಾಗಿದೆ. ನೇರವಾಗಿ https://eportal.incometax.gov.in/iec/foservices/#/pre-login/bl-link-aadhaar ಹೋಗಿ 1,000 ರೂ. ಶುಲ್ಕ ಪಾವತಿಸಿ ಲಿಂಕ್ ಮಾಡಬಹುದು.

ಇದನ್ನೂ ಓದಿ : ಆನ್ ಲೈನ್ನಲ್ಲಿ ಪ್ಯಾನ್-ಆಧಾರ್ ಲಿಂಕ್ ಮಾಡುವುದು ಹೇಗೆ? : ಇಲ್ಲಿದೆ ಸರಳ ವಿಧಾನ

ಮಾರ್ಚ್ 31ರೊಳಗೆ ಅವಕಾಶ

ಮಾರ್ಚ್ 31ರೊಳಗೆ ಪ್ಯಾನ್-ಆಧಾರ್ ಜೋಡಣೆ ಮಾಡಲು ಅವಕಾಶವಿದೆ. ಆ ಬಳಿಕ ಲಿಂಕ್ ಮಾಡಲು 1,000 ರೂ. ದಂಡ ವಿಧಿಸಲಾಗುತ್ತದೆ. ಇವುಗಳ ಜೋಡಣೆಯಾಗದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ಸೂಚಿಸಿತ್ತು.

ಆಧಾರ್-ಪ್ಯಾನ್‌ ಲಿಂಕ್ ಮಾಡದಿದ್ರೆ ಏನೆಲ್ಲಾ ತೊಂದರೆ?

  • ಕಾರ್ಡ್ ಒಮ್ಮೆ ಅಮಾನ್ಯವಾದರೆ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ
  • ತೆರಿಗೆ ಪ್ರಯೋಜನಗಳು ಮತ್ತು ವಹಿವಾಟುಗಳನ್ನು ಪಡೆಯುವಲ್ಲಿ ತೊಂದರೆ
  • ಪ್ಯಾನ್‌ ನಂಬರ್‌ ಇಲ್ಲದೆ ಯಾವುದೇ ಹಣಕಾಸು ವ್ಯವಹಾರ ನಿಭಾಯಿಸುವುದು ಕಷ್ಟ
  • ಬ್ಯಾಂಕಿನಲ್ಲಿ ಖಾತೆ ತೆರೆಯುವುದರಿಂದ ಹಿಡಿದು ಹೂಡಿಕೆ ಮಾಡಲು ಪ್ಯಾನ್​ ಬೇಕು
  • ಎಲ್ಲ ಹಣಕಾಸಿನ ವ್ಯವಹಾರಗಳಿಗೂ ಪ್ಯಾನ್‌ ಕಾರ್ಡ್‌ ಬೇಕೇ ಬೇಕು
  • ಪ್ಯಾನ್‌ ಕಾರ್ಡ್‌ ಇಲ್ಲದಿದ್ದರೆ ನಿಮ್ಮ ಹಣಕಾಸಿನ ವ್ಯವಹಾರಗಳು ಸ್ಥಗಿತವಾಗಬಹುದು

RELATED ARTICLES

Related Articles

TRENDING ARTICLES