Monday, December 23, 2024

ಮೋದಿ ಫೋಟೋ ಹರಿದ ಶಾಸಕನಿಗೆ 99 ರೂ. ದಂಡ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಹರಿದು ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಅನಂತ್ ಪಟೇಲ್ ಅವರಿಗೆ ಗುಜರಾತ್ ನ ನವಸಾರಿ ಕೋರ್ಟ್ 99 ರೂಪಾಯಿ ದಂಡ ವಿಧಿಸಿದೆ.

ಹೌದು, ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಕೃಷಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳ ಕೊಠಡಿಗೆ ನುಗ್ಗಿ ಕಾಂಗ್ರೆಸ್ ಶಾಸಕ ಅನಂತ್ ಪಟೇಲ್ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಹರಿದು ಹಾಕಿದ್ದರು. ಈ ಆರೋಪದಡಿ ಕಾಂಗ್ರೆಸ್ ಶಾಸಕನಿಗೆ ನ್ಯಾಯಾಲಯ ದಂಡ ವಿಧಿಸಿ, ತೀರ್ಪು ಪ್ರಕಟಿಸಿದೆ.

ಈ ಪ್ರಕರಣ ಸಂಬಂಧ ಗುಜರಾತ್ ನ ನವಸಾರಿ (ಹೆಚ್ಚುವರಿ ನ್ಯಾಯಾಲಯ) ನ್ಯಾಯಾಲಯದ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ವಿಎ ಧಾಧಲ್ ಅವರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್ ಶಾಸಕರಾದ ಅನಂತ್ ಪಟೇಲ್ ಅವರನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದಾರೆ.

ಘಟನೆ ಹಿನ್ನೆಲೆ ಏನು?

ಕಾಂಗ್ರೆಸ್ ಶಾಸಕರಾದ ಅನಂತ್ ಪಟೇಲ್ ಹಾಗೂ ವಿದ್ಯಾರ್ಥಿಗಳು 2017ರಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ನವಸಾರಿ ಕೃಷಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳ ಕಚೇರಿಗೆ ಪ್ರವೇಶಿಸಿದ್ದರು. ಕೊಠಡಿಯ ಟೇಬಲ್ ಮೇಲೆ ಇರಿಸಿದ್ದ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಹರಿದು ಹಾಕಿದ್ದರು.

ಈ ಆರೋಪ ಸಂಬಂಧಿಸಿದಂತೆ 2017ರಲ್ಲಿ ಜಲಾಲ್‍ಪೋರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಾಂಗ್ರೆಸ್ ಶಾಸಕರಾದ ಅನಂತ್ ಪಟೇಲ್ ಸೇರಿದಂತೆ ಆರು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು.

RELATED ARTICLES

Related Articles

TRENDING ARTICLES