Friday, November 22, 2024

ಆನ್ ಲೈನ್ನಲ್ಲಿ ಪ್ಯಾನ್-ಆಧಾರ್ ಲಿಂಕ್ ಮಾಡುವುದು ಹೇಗೆ? : ಇಲ್ಲಿದೆ ಸರಳ ವಿಧಾನ

ಬೆಂಗಳೂರು : ಮಾರ್ಚ್ 31ರೊಳಗೆ ಪ್ಯಾನ್-ಆಧಾರ್ ಜೋಡಣೆ ಮಾಡಲು ಅವಕಾಶವಿದೆ. ಆ ಬಳಿಕ ಲಿಂಕ್ ಮಾಡಲು 1,000 ರೂ. ದಂಡ ವಿಧಿಸಲಾಗುತ್ತದೆ. ನೀವೇನಾದರೂ ಇವುಗಳ ಜೋಡಣೆಯಾಗದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗುತ್ತದೆ.

1 ಸಾವಿರ ದಂಡದೊಂದಿಗೆ ಮಾರ್ಚ್‌ 31ರ ತನಕ ಪ್ಯಾನ್‌-ಆಧಾರ್‌ ಲಿಂಕ್​ಗೆ ಅವಕಾಶವಿದೆ. ಹೊಸ ಪ್ಯಾನ್‌ ಕಾರ್ಡ್​ ಪಡೆದು ಲಿಂಕ್‌ ಮಾಡಲು 10 ಸಾವಿರ ದಂಡ ಇರುತ್ತದೆ. ಹಾಗಾದ್ರೆ, ಆನ್‌ಲೈನ್‌ನಲ್ಲಿ ಪ್ಯಾನ್-ಆಧಾರ್ ಲಿಂಕ್ ಮಾಡುವುದು ಹೇಗೆ? ಈ ಕೆಳಗಿನ ಕ್ರಮಗಳನ್ನು ಅನುಸರಿಸಿ ಜೋಡನೆ ಮಾಡಬಹುದು

  1. ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟಲ್ ತೆರೆಯಿರಿ
  2. ಈಗಾಗಲೇ ನೋಂದಾಯಿಸದಿದ್ದರೆ ನೋಂದಾಯಿಸಿ
  3. ನಿಮ್ಮ ಪ್ಯಾನ್ ಸಂಖ್ಯೆ ನಿಮ್ಮ ಬಳಕೆದಾರ ID ಆಗಿರುತ್ತದೆ
  4. ನಿಮ್ಮ ಬಳಕೆದಾರ ಐಡಿ, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಿ
  5. ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ, ಅದರ ಮೇಲೆ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ
  6. ಅದು ಬರದಿದ್ದರೆ ‘ಪ್ರೊಫೈಲ್ ಸೆಟ್ಟಿಂಗ್ಸ್’ಗೆ ಹೋಗಿ ‘ಲಿಂಕ್ ಆಧಾರ್’ ಕ್ಲಿಕ್ ಮಾಡಿ
  7. ಈಗ ಪ್ಯಾನ್‌ ನಲ್ಲಿ ಹುಟ್ಟಿದ ದಿನಾಂಕ ಮತ್ತು ಲಿಂಗ ವಿವರಗಳು ಇಲ್ಲಿ ಗೋಚರಿಸುತ್ತವೆ
  8. ಈ ವಿವರಗಳನ್ನು ನಿಮ್ಮ ಆಧಾರ್ ವಿವರಗಳೊಂದಿಗೆ ಹೊಂದಿಸಿ. ಈ ವಿವರವು ಎರಡೂ ದಾಖಲೆಗಳಲ್ಲಿ ಹೊಂದಿಕೆಯಾಗದಿದ್ದರೆ, ನೀವು ತಪ್ಪಾಗಿರುವುದನ್ನು ಸರಿಪಡಿಸಬೇಕಾಗುತ್ತದೆ.
  9. ವಿವರಗಳು ಹೊಂದಾಣಿಕೆಯಾಗಿದ್ದರೆ, ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು “ಈಗ ಲಿಂಕ್” ಬಟನ್ ಕ್ಲಿಕ್ ಮಾಡಿ.
  10. ನಿಮ್ಮ ಪ್ಯಾನ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾಗಿದೆ ಎಂದು ನಿಮಗೆ ತಿಳಿಸುವ ಪಾಪ್-ಅಪ್ ಸಂದೇಶವು ಕಾಣಿಸಿಕೊಳ್ಳುತ್ತದೆ.
  11. ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ನೀವು https://www.utiitsl.com/ ಅಥವಾ https://www.egov-nsdl.co.in/ಗೆ ಭೇಟಿ ನೀಡಬಹುದು.

ಪ್ರಮುಖ ಅಂಶಗಳು

  • ಏಪ್ರಿಲ್‌ 1ರಿಂದ ಆರ್ಥಿಕ ಜಗತ್ತಿನಲ್ಲಿ ಹಲವು ಬದಲಾವಣೆ
  • ಪ್ಯಾನ್‌-ಆಧಾರ್‌ ಲಿಂಕ್‌ ಗೆ ಮಾರ್ಚ್‌ 31 ಕೊನೆ ದಿನ (ಐದು ದಿನ ಮಾತ್ರ ಬಾಕಿ)ಈ ಬಾರಿ ಡೆಡ್‌ಲೈನ್‌ ವಿಸ್ತರಣೆ ಆಗುವ ಸಾಧ್ಯತೆ ಅನುಮಾನ
  • ಲಿಂಕ್‌ ಮಾಡದಿದ್ರೆ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯ
  • 1 ಸಾವಿರ ದಂಡದೊಂದಿಗೆ ಮಾರ್ಚ್‌ 31ರ ತನಕ ಪ್ಯಾನ್‌-ಆಧಾರ್‌ ಲಿಂಕ್​ಗೆ ಅವಕಾಶ
  • ಹೊಸ ಪ್ಯಾನ್‌ ಕಾರ್ಡ್​ ಪಡೆದು ಲಿಂಕ್‌ ಮಾಡಲು 10 ಸಾವಿರ ದಂಡ
  • ಒಮ್ಮೆ ಕಾರ್ಡ್ ಅಮಾನ್ಯವಾದರೆ ಅದನ್ನು ಬಳಸಲು ಸಾಧ್ಯದಿಲ್ಲ
  • ತೆರಿಗೆ ಪ್ರಯೋಜನಗಳು ಮತ್ತು ವಹಿವಾಟುಗಳನ್ನು ಪಡೆಯುವಲ್ಲಿ ತೊಂದರೆ
  • ಪ್ಯಾನ್‌ ನಂಬರ್‌ ಇಲ್ಲದೆ ಹಣಕಾಸು ವ್ಯವಹಾರ ನಿಭಾಯಿಸುವುದು ಕಷ್ಟ

RELATED ARTICLES

Related Articles

TRENDING ARTICLES