Sunday, December 22, 2024

‘ಸಿಟಿ’ ರವಿಗೂ ‘ಓಟಿ’ ಮದ್ಯಕ್ಕೂ ಯಾವ ಜನ್ಮದ ಸಂಬಂಧ? : ಕಾಂಗ್ರೆಸ್ ಲೇವಡಿ

ಬೆಂಗಳೂರು : ಸದಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವ ಬಿಜೆಪಿ ಶಾಸಕ ಸಿ.ಟಿ ರವಿ ಇದೀಗ ಕಾಂಗ್ರೆಸ್ ನಾಯಕರಿಗೆ ಆಹಾರವಾಗಿದ್ದಾರೆ. ಸಿ.ಟಿ ರವಿ ಬೆಂಬಲಿಗರು ಎನ್ನಲಾಗಿರುವವರ ಕಾರಿನಲ್ಲಿ ಕಂಡುಬಂದಿರುವ ಮದ್ಯ ಹಾಗೂ ಮಾರಕಾಸ್ತ್ರವನ್ನೇ ಅಸ್ತ್ರವಾಗಿ ಬಳಸಿಕೊಂಡಿದೆ.

ಹೌದು, ಸಿ.ಟಿ ರವಿಗೂ ಕಾರು ಅಪಘಾತಕ್ಕೂ, ಓಟಿ ಮದ್ಯಕ್ಕೂ ಯಾವ ಜನ್ಮದ ಸಂಬಂಧ ಎಂದು ರಾಜ್ಯ ಕಾಂಗ್ರೆಸ್ ಲೇವಡಿ ಮಾಡಿದೆ. ಈ ಕುರಿತು ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿದೆ. ಅಲ್ಲದೆ, ಪೋಸ್ಟ್ ಮಾಡಿ ಸಿ.ಟಿ ರವಿಗೆ ಕುಟುಕಿದೆ.

ಸಿ.ಟಿ ರವಿ ಬೆಂಬಲಿಗರ ಕಾರು ಅಪಘಾತವಾಗುತ್ತದೆ. ಅದರೊಳಗೆ ಮದ್ಯದ ರಾಶಿ ಜೊತೆಗೆ ಮಾರಕಾಸ್ತ್ರ ಇರುತ್ತದೆ. ಧರ್ಮ, ಸಂಸ್ಕೃತಿಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿ ನಾಯಕರು ರಾತ್ರಿ ಹೊತ್ತಲ್ಲಿ ಮಾಡುವ ಅಸಲಿ ಧರ್ಮ ರಕ್ಷಣೆಯೇ ಬೇರೆ ಎಂದು ವಾಗ್ದಾಳಿ ನಡೆಸಿದೆ.

ಶಾಸಕರಿಗೆ ಬಾಂಬೆ ಮಿಠಾಯಿ ಆಮಿಷ ತೋರಿಸಿ ಆಪರೇಷನ್ ಮಾಡುವ ಬಿಜೆಪಿ ಮತದಾರರಿಗೆ ಹೆಂಡ ತೋರಿಸಿ ಮತ ಪಡೆಯಲು ಮುಂದಾಗಿದೆ. ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿಗೆ ಸಂಬಂಧಿಸಿದ ಕಾರಿನಲ್ಲಿ ಓಟಿ ಮದ್ಯ ಹಾಗೂ ಲಾಂಗ್ ಪತ್ತೆಯಾಗಿದೆ. ಹೆಂಡ ಕುಡಿಸಿ, ಬೆದರಿಸಿ ಮತ ಪಡೆಯುವ ಜವಾಬ್ದಾರಿಯನ್ನು ರೌಡಿ ಮೋರ್ಚಾಗೆ ವಹಿಸಲಾಗಿದೆಯೇ ಎಂದು ಬಿಜೆಪಿ ಸರ್ಕಾರಕ್ಕೆ ಪ್ರಶ್ನೆ ಮಾಡಿದೆ.

RELATED ARTICLES

Related Articles

TRENDING ARTICLES