ಬೆಂಗಳೂರು : ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತರಿಗೆ ಮೋಸ ಮಾಡದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಕಂದಾಯ ಸಚಿವ ಆರ್. ಅಶೋಕ್ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅಶೋಕ್, ಕಾಂಗ್ರೆಸ್ ಪಕ್ಷದವರಿಗೆ ಮುಸ್ಲಿಮರ ಬಗ್ಗೆ ಅತೀ ಪ್ರೀತಿ ಇದೆ. ಅದಕ್ಕೆ ಈಗ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಸಂವಿಧಾನ ತಿದ್ದುಪಡೆ ಮಾಡುವವರು ಇವರು. ಯಾರದ್ದೋ ಮೀಸಲಾತಿ ಕಿತ್ತು ಯಾರಿಗೋ ಕೊಟ್ರು ಅಂತ ಕೇಳೋದಿಕ್ಕೆ ನೀವ್ಯಾರು? ನಿಮ್ಮ ಸರ್ಕಾರ ಇದ್ದಾಗ ನೀವ್ಯಾಕೆ ಮಾಡಲಿಲ್ಲ? ನಮ್ಮ ಸರ್ಕಾರ ಮಾಡಿದೆ ಅಂತ ಅವರಿಗೆ ಸಹಿಸೋದಕ್ಕೆ ಆಗ್ತಿಲ್ಲ ಎಂದು ಅಶೋಕ್ ಕಿಡಿಕಾರಿದ್ದಾರೆ.
Beggars Have No Choice
ಕಾಡಿ ಬೇಡೋದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತ್ರ. ಕಾಂಗ್ರೆಸ್ ನವರು ಈ ರಾಜ್ಯದಲ್ಲಿ ಭಿಕ್ಷುಕರು ಇದ್ದಂತೆ. ಎಲ್ಲೂ ಕಾಂಗ್ರೆಸ್ ಇಲ್ಲ, ಭಿಕ್ಷುಕರು ಇದ್ದಂಗ ಅಷ್ಟೆ ಅವರು, Beggars have no choice ಎಂದು ಅಶೋಕ್ ತಿರುಗೇಟು ಕೊಟ್ಟಿದ್ದಾರೆ.
ಮುಸ್ಲಿಂರಿಗೆ ಅನೂಕೂಲವೇ ಹೊರತು ಅನ್ಯಾಯವಲ್ಲ
ಮುಸ್ಲಿಂಮರನ್ನು EWSಗೆ ಸೇರ್ಪಡೆ ಮಾಡಿರುವುದರಿಂದ ಅವರಿಗೆ ಮತ್ತಷ್ಟು ಅನುಕೂಲವಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂರಿಗೆ ಮೊದಲು 4 ಪರ್ಸೆಂಟ್ ಮೀಸಲಾತಿ ಇತ್ತು. ಈಗ ಶೇ.10ರಷ್ಟು ಮೀಸಲಾತಿ ಇರುವ ಕಡೆ ಹಾಕಿದ್ದೇವೆ. ಇದರಿಂದ ಮುಸ್ಲಿಂರಿಗೆ ಅದು ಹೇಗೆ ಅನ್ಯಾಯ ಆಗುತ್ತೆ ಎಂದು ಸಿಎಂ ಬೊಮ್ಮಾಯಿ ಪ್ರಶ್ನಿಸಿದ್ದಾರೆ.