Thursday, December 19, 2024

ಮುಸ್ಲಿಮರ ಮೀಸಲಾತಿ ಅನಧಿಕೃತ, ಸಿದ್ದುಗೆ ಹಳೇ ಗಂಡನ ಪಾದವೇ ಗತಿ : ಪ್ರತಾಪ್ ಸಿಂಹ

ಬೆಂಗಳೂರು : ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರಿಗೆ ಮೋಸ ಮಾಡದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಸಂಸದ ಪ್ರತಾಪ್ ಸಿಂಹ್ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರತಾಪ್ ಸಿಂಹ, ಮೀಸಲಾತಿ ನಿರ್ಧಾರದ ಮೂಲಕ, ಬರೀ ಭಾಷಣ ಮಾಡುತ್ತಿದ್ದವರ ಬಾಯಿ ಮುಚ್ಚಿಸಲಾಗಿದೆ ಎಂದು ಹೇಳಿದ್ದಾರೆ.

ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಮರು 4% ಮೀಸಲಾತಿ ಪಡೆದುಕೊಂಡಿದ್ದರು. ಹಿಂದುಳಿದ ವರ್ಗಕ್ಕೆ ಸಲ್ಲಬೇಕಾದ ಮೀಸಲಾತಿಯನ್ನು ಅನಧಿಕೃತವಾಗಿ ಮುಸ್ಲಿಮರಿಗೆ ಕೊಡಲಾಗಿತ್ತು. ಇದೀಗ ನ್ಯಾಯಯುತವಾಗಿ ಮುಸ್ಲಿಮರ ಮೀಸಲಾತಿ ತೆಗೆದು ಒಕ್ಕಲಿಗ, ವೀರಶೈವರಿಗೆ ಮೀಸಲಾತಿ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಿದ್ದುಗೆ ಹಳೇ ಗಂಡನ ಪಾದವೇ ಗತಿ

ಊರಿಗೊಬ್ಳೆ ನಾನೇ ಪದ್ಮಾವತಿ ಅಂತಾ ಸಿದ್ದರಾಮಯ್ಯ ಓಡಾಡುತ್ತಿದ್ದು, ಕೊನೆಗೆ ಹಳೇ ಗಂಡನ ಪಾದವೇ ಗತಿ ಅಂತಾ ವರುಣಾ ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಪ್ರಶ್ನಾತೀತ ನಾಯಕ ನಾನೇ, ಮುಂದಿನ ಮುಖ್ಯಮಂತ್ರಿ ನಾನೇ ಎನ್ನುವ ಸಿದ್ದರಾಮಯ್ಯನಿಗೆ ಒಂದು ಕ್ಷೇತ್ರ ಹುಡುಕಿಕೊಳ್ಳಲು ಆಗಲಿಲ್ಲ. ಈಗ ಮಗನ ನೆಲೆ ಕಳೆದು ವರುಣಾ ಕ್ಷೇತ್ರಕ್ಕೆ ಬರುವ ಸ್ಥಿತಿ ಬಂದಿದೆ. ಅವರು ಪುಕ್ಕಲತನದಿಂದ ವರುಣಾಗೆ ಬಂದಿದ್ದು, ಎಲ್ಲೇ ನಿಂತರೂ ಸೋಲುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

RELATED ARTICLES

Related Articles

TRENDING ARTICLES