Tuesday, April 23, 2024

ವೈಟ್ ಫೀಲ್ಡ್ ಮೆಟ್ರೋಗೆ ಪ್ರಧಾನಿ ಚಾಲನೆ : ಮೆಟ್ರೋ ವಿಶೇಷತೆಗಳು ಏನು ಗೊತ್ತಾ?

ಬೆಂಗಳೂರು : ಬಹು ನಿರೀಕ್ಷಿತ ವೈಟ್‌ ಫೀಲ್ಡ್‌-ಕೆ.ಆರ್‌.ಪುರ ಮೆಟ್ರೋ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ಸ್ವತಃ ಪ್ರಧಾನಿ ಮೋದಿಯೇ ಬೆಂಗಳೂರಿಗೆ ಆಗಮಿಸಿ ಯೋಜನೆ ಲೋಕಾರ್ಪಣೆ ಗೊಳಿಸಿದ್ದಾರೆ. ಮೆಟ್ರೋ ಉದ್ಘಾಟನೆ ಬಳಿಕ ನರೇಂದ್ರ ಮೋದಿಯವರು ಅದೇ ಮೆಟ್ರೋದಲ್ಲಿ ಪ್ರಯಾಣಿಸಿದರು. ಮೋದಿ ಜೊತೆ ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ ಕೂಡ ಪ್ರಯಾಣಿಸಿದರು.

ಈ ವೇಳೆ ಮೋದಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದರು. ಮೆಟ್ರೋದಲ್ಲಿ ಸಂಚಾರ ನಡೆಸಿದ ಮೋದಿ ಅವರು ಮೆಟ್ರೋ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು. 13.71 ಕಿಲೋ ಮೀಟರ್‌ ಉದ್ದದ ನೇರಳೆ ಬಣ್ಣದ ಈ ಮಾರ್ಗದಲ್ಲಿ ಒಟ್ಟು 12 ಸ್ಟೇಷನ್‌ಗಳು ಬರಲಿವೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರಿಂದ ಕೆ.ಆರ್‌.ಪುರ, ವೈಟ್‌ ಫೀಲ್ಡ್‌ ಭಾಗದಲ್ಲಿ ಆಗ್ತಿದ್ದ ಸಂಚಾರ ದಟ್ಟಣೆ ಅಲ್ಪಮಟ್ಟಿಗೆ ನಿವಾರಣೆಯಾಗಲಿದೆ.

ವೈಟ್​​ಫೀಲ್ಡ್​​ನಲ್ಲಿ ಕಾಮಗಾರಿ ಪೂರ್ಣವಾಗಿದೆ. ಆದ್ರೆ ಕೆ.ಆರ್.ಪುರಂ ನಿಲ್ದಾಣ ಇನ್ನೂ ಅಪೂರ್ಣವಾಗಿದೆ. ಪಿಲ್ಲರ್‌ಗಳು, ಸೀಮೆಂಟ್ ಕಾರ್ಯ, ಸ್ಟೇಷನ್‌ಗೆ ಕಂಬಿಗಳನ್ನು ಅಳವಡಿಸುವುದು ಸೇರಿದಂತೆ ಅನೇಕ ಕಾರ್ಯಗಳು ಬಾಕಿ ಇವೆ.

ವೈಟ್‌ಫೀಲ್ಡ್‌ ಟು ಕೆ.ಆರ್. ಪುರ ವಿಶೇಷತೆಗಳು

  • ವೈಟ್‌ಫೀಲ್ಡ್‌ನಿಂದ ಕೆ.ಆರ್. ಪುರದವರೆಗೂ 13.71 ಕಿ.ಮೀ. ಉದ್ದದ ಮಾರ್ಗ
  • ಪ್ರಧಾನಿ ಮೋದಿ ಕೆ.ಆರ್‌.ಪುರ ಮೆಟ್ರೋ ಸೇವೆಗೆ ಚಾಲನೆ‌
  • ಕಾರು ಮತ್ತು ದ್ವಿಚಕ್ರ ವಾಹನಗಳಿಗೆ ಹೆಚ್ಚುವರಿ ಪಾರ್ಕಿಂಗ್ ಸೌಲಭ್ಯ
  • 2 ಬದಿಯಲ್ಲೂ ಪ್ರವೇಶ/ನಿರ್ಗಮನ ದ್ವಾರದೊಂದಿಗೆ BMTC ಬಸ್ ನಿಲ್ದಾಣಗಳು
  • ಮೆಟ್ರೋದಿಂದ ನೇರವಾಗಿ ರೈಲ್ವೆ ನಿಲ್ದಾಣಗಳಿಗೆ ಸಂಪರ್ಕಿಸಲು ಮೇಲ್ಸೇತುವೆಗಳು
  • ಕೆ.ಆರ್.ಪುರ ಮತ್ತು ವೈಟ್‌ಫೀಲ್ಡ್‌ನಲ್ಲಿ ರೈಲ್ವೆ ನಿಲ್ದಾಣಗಳಿಗೆ ಮೇಲ್ಸೇತುವೆಗಳು
  • ಪಟ್ಟಂದೂರು ಅಗ್ರಹಾರ ನಿಲ್ದಾಣದಲ್ಲಿ ಐಟಿಬಿಟಿಗೆ ನೇರವಾಗಿ ಮೇಲ್ಸೇತುವೆ ಸಂಪರ್ಕ
  • ವಿಕಲಚೇತನರು ಎಲ್ಲಾ ನಿಲ್ದಾಣಗಳನ್ನು ಉಪಯೋಗಿಸುವ ಸೌಲಭ್ಯ
  • ಪ್ರಯಾಣಿಕರ ಅನುಕೂಲಕ್ಕಾಗಿ, ಪ್ರತಿ ನಿಲ್ದಾಣದಲ್ಲಿ 8 ಎಸ್ಕಲೇಟರ್‌ಗಳು, 4 ಎಲಿವೇಟರ್‌ಗಳು ಮತ್ತು 8 ಮೆಟ್ಟಿಲುಗಳ ಅಳವಡಿಕೆ

RELATED ARTICLES

Related Articles

TRENDING ARTICLES