Friday, March 29, 2024

ಖರ್ಗೆ ಕರ್ಮಭೂಮಿಯಲ್ಲಿ ಬಿಜೆಪಿ ಕಹಳೆ ಮೊಳಗಿದೆ : ಖರ್ಗೆಗೆ ಮೋದಿ ಟಾಂಗ್

ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕರ್ಮಭುಮಿಯಲ್ಲಿ ಬಿಜೆಪಿ ಕಹಳೆ ಮೊಳಗಿದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಖರ್ಗೆಗೆ ಟಾಂಗ್ ಕೊಟ್ಟಿದ್ದಾರೆ.

ದಾವಣೆಗೆರೆಯಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಎಐಸಿಸಿ ಅಧ್ಯಕ್ಷರ ತವರಲ್ಲೇ ಮೇಯರ್, ಉಪಮೇಯರ್ ಚುನಾವಣೆ ಇತ್ತು. ಆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಕಲಬುರಗಿಯಲ್ಲಿ ಬಿಜೆಪಿಯವರೇ ಮೇಯರ್​, ಉಪ ಮೇಯರ್​ ಆಗಿದ್ದಾರೆ ಎಂದು ಬಿಜೆಪಿ ಗೆಲುವನ್ನು ಪ್ರಸ್ತಾಪಿಸಿ ಮಲ್ಲಿಕಾರ್ಜುನ ಖರ್ಗೆಗೆ ಕುಟುಕಿದ್ದಾರೆ.

ಎಂದಿನಂತೆ ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ದಾವಣಗೆರೆಯ ಎಲ್ಲಾ ನನ್ನ ಸಹೋದರ-ಸಹೋದರಿಯರಿಗೆ ನಮಸ್ಕಾರಗಳು. ಬಿಜೆಪಿ ಎಲ್ಲಾ ಕಾರ್ಯಕರ್ತರಿಗೆ ನಮಸ್ಕಾರಗಳು. ದಾವಣಗೆರೆಗೆ ಬಂದಾಗೆಲ್ಲಾ ನಿಮ್ಮ ಆಶೀರ್ವಾದ ಹೆಚ್ಚಾಗುತ್ತಿದೆ. ನಿಮ್ಮ ಆಶೀರ್ವಾದ ನನ್ನ ಶಕ್ತಿ ಹೆಚ್ಚಿಸುತ್ತಿದೆ ಎಂದು ಹೇಳಿದ್ದಾರೆ.

ಹರಿಹರೇಶ್ವರನಿಗೆ ನನ್ನ ಪ್ರಣಾಮಗಳು

ತಾಯಿ ಭುವನೇಶ್ವರಿ, ಹರಿಹರೇಶ್ವರನಿಗೂ ಹಾಗೂ ಈ ಭಾಗದ ಎಲ್ಲಾ ಮಠಗಳಿಗೂ ನನ್ನ ಪ್ರಣಾಮಗಳು. 4 ವಿಜಯ ಸಂಕಲ್ಪ ಯಾತ್ರೆಗಳು ಇಂದು ಮಹಾಸಂಗಮ ಆಗಿದೆ. ತುಂಗಭದ್ರೆ ತಾಯಿಯ ಆಶೀರ್ವಾದ ನಮ್ಮ ಮೇಲಿದೆ. ಪ್ರತಿ ಬೂತ್​ ಗೆಲ್ಲುವ ಸಂಕಲ್ಪ ಮಾಡಿ ಎಂದು ಕಾರ್ಯಕರ್ತರನ್ನು ಪ್ರಧಾನಿ ಮೋದಿ ಹುರಿದುಂಬಿಸಿದರು.

ನಿಮ್ಮ ಬೆಂಬಲಕ್ಕೆ ಭಾವುಕನಾಗಿದ್ದೇನೆ

ರಾಜ್ಯದಲ್ಲಿ ಕಾಂಗ್ರೆಸ್​ ಹಾಗೂ ಜೆಡಿಎಸ್​ ರೈತರ ಹೆಸರಲ್ಲಿ ರಾಜಕೀಯ ಮಾಡುತ್ತಿದೆ. ಕಿಸಾನ್​ ಸಮ್ಮಾನ್​ ಮೂಲಕ ನಾವು ರೈತರಿಗೆ ಸಹಾಯ ಮಾಡುತ್ತಿದ್ದೇವೆ. ಬಿಜೆಪಿ ಸರ್ಕಾರ ರೈತರ ಖಾತೆಗೆ ನೇರವಾಗಿ ಹಣ ಹಾಕುತ್ತಿದೆ. ಬಿಜೆಪಿ ಯಾತ್ರೆಯ ಪ್ರತಿ ಮಾಹಿತಿಯನ್ನೂ ನಾನು ಪಡೆಯುತ್ತಿದೆ. ಇಷ್ಟೊಂದು ಜನರನ್ನು ನೋಡಿ ನಾನು ಭಾವುಕನಾಗಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES