Monday, December 23, 2024

ಪವರ್ ಟಿವಿ 2ನೇ ಬೇಟೆ : ‘ಪವರ್’ ಬಲೆಗೆ ಬಿದ್ದ ಲಂಚಬಾಕ ಶಾಸಕ ‘ಭೀಮಾ ನಾಯ್ಕ್’

ಬೆಂಗಳೂರು : ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎರಡನೇ ಬಲಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ್. ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ 4 ಲಕ್ಷ ಲಂಚಕ್ಕೆ ಭೇಡಿಕೆ ಇಟ್ಟಿದ್ದು, 2 ಲಕ್ಷ ರೂಪಾಯಿ ಡೀಲ್​ ಕುದುರಿಸಿದ್ದಾರೆ.

ಹೌದು, ಓಎಫ್​ಸಿ ಕೇಬಲ್ ಅಳವಡಿಕೆ ಸಂಬಂಧ ಮತ್ತೊಂದು ಡೀಲ್​​​​​ ಮಾತುಕತೆ ವೇಳೆ ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ್ ಪವರ್ ಟಿವಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಓಎಫ್​ಸಿ ಕೇಬಲ್ ಅಳವಡಿಕೆ ಪರ್ಮಿಶನ್ ನೀಡಲು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಕಿಲೋಮೀಟರ್​ಗೆ 4 ಲಕ್ಷ ಲಂಚ ಕೇಳಿದ್ದಾರೆ. ಅಂತಿಮವಾಗಿ ಕಿಲೋಮೀಟರ್​ಗೆ 2 ಲಕ್ಷಕ್ಕೆ ಫೈನಲ್ ಮಾಡಿದ್ದಾರೆ.

ಬೆಂಗಳೂರಿನ ಎಂ.ಜಿ.ರೋಡ್ ಶಾಪ್​​​ವೊಂದರಲ್ಲಿ ಅಡ್ವಾನ್ಸ್ ಆಗಿ ಒಂದೂವರೆ ಲಕ್ಷ ಸ್ವೀಕಾರ ಮಾಡಿದ್ದಾರೆ. ಹಗರಿಬೊಮ್ಮನಹಳ್ಳಿ ಶಾಸಕ ಲಂಚ ಪಡೆಯುವ ದೃಶ್ಯ ಪವರ್ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಭೀಮಾ ನಾಯ್ಕ್

ಪಕ್ಷ: ಕಾಂಗ್ರೆಸ್

ವಯಸ್ಸು : 47 ವರ್ಷ

ಕ್ಷೇತ್ರ: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ

ಜಿಲ್ಲೆ : ವಿಜಯನಗರ

 

ಪ್ರಮುಖ ಅಂಶಗಳು:

ಎರಡು ಬಾರಿ ಶಾಸಕರಾಗಿ ಆಯ್ಕೆ

ಹಗರಿಬೊಮ್ಮನಹಳ್ಳಿ MLA ಭೀಮಾನಾಯ್ಕ್ ಪಾಸ್ ದುರ್ಬಳಕೆ

ಆಲದಹಳ್ಳಿಯಲ್ಲಿ ಪಶುಸಂಗೋಪನೆ ಹೆಸರಲ್ಲಿ ನಕಲಿ ಡೈರಿ

ಒಟ್ಟು ಆಸ್ತಿ : 9.34 ಕೋಟಿ

RELATED ARTICLES

Related Articles

TRENDING ARTICLES