Friday, April 19, 2024

‘ಶೂರ್ಪನಕಿ’ ಹೇಳಿಕೆ : ಪ್ರಧಾನಿ ಮೋದಿ ವಿರುದ್ಧ ಮಾನನಷ್ಟ ಪ್ರಕರಣ?

ಬೆಂಗಳೂರು : ‘ಮೋದಿ ಉಪನಾಮ’ ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ರದ್ದಾಗಿದೆ. ಇದೀಗ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಲು ಕಾಂಗ್ರೆಸ್ ಮುಂದಾಗಿದೆ.

ಹೌದು, ಶೂರ್ಪನಕಿ ಎಂದು ಕರೆದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕಾಂಗ್ರೆಸ್ ನಾಯಕಿ, ಮಾಜಿ ಸಚಿವೆ ರೇಣುಕಾ ಚೌಧರಿ ಹೇಳಿದ್ದಾರೆ.

2018ರಲ್ಲಿ ರೇಣುಕಾ ಚಾಧರಿ ಸದನದಲ್ಲಿ ಭಾಷಣ ಮಾಡುವಾಗ, ಪ್ರಧಾನಿಯವರು ರೇಣುಕಾ ಚೌಧರಿಯವರ ನಗುವನ್ನು ಲೇವಡಿ ಮಾಡಿದ್ದರು. ಅವರ ನಗುವನ್ನು ರಾಮಾಯಣ, ಶೂರ್ಪನಕಿ ಪಾತ್ರಕ್ಕೆ ಪರೋಕ್ಷವಾಗಿ ಹೋಲಿಸಿದ್ದರು.

ಇದೀಗ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ಸೂರತ್ ಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ರೇಣುಕಾ ಚೌಧರಿ ಕೂಡ ಪ್ರಧಾನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಮಾತನಾಡಿದ್ದಾರೆ.

ಸದನದಲ್ಲಿ ನನ್ನನ್ನು ಶೂರ್ಪನಕಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆದಿದ್ದರು, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ರೇಣುಕಾ ಚೌಧರಿ ಬರೆದುಕೊಂಡಿದ್ದಾರೆ. ಈ ತ್ವರಿತ ನ್ಯಾಯಾಲಯಗಳು ಈಗ ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ನೋಡಬೇಕು ಎಂದು ಲೇವಡಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES