Thursday, January 23, 2025

ಯುಗಾದಿ ಭವಿಷ್ಯ : ಇಂದಿನಿಂದ ಈ ರಾಶಿಗೆ ರಾಜಯೋಗ

ಬೆಂಗಳೂರು : ಶೋಭಕೃತ್ ನಾಮ ಸಂವತ್ಸರ ಇಂದಿನಿಂದ ಆರಂಭವಾಗಿದೆ. ಶೋಭಕೃತ್ ಎಂದರೆ ಲಾಭ, ಪ್ರಯೋಜನಗಳನ್ನು ತರುವುದು ಎಂಬ ಅರ್ಥವಾಗಿದೆ ಎಂದು ಶಾಸ್ತ್ರಜ್ಞರು ಹೇಳುತ್ತಾರೆ.

ಈ ಯುಗಾದಿಯಿಂದ ಬುಧಾದಿತ್ಯ ಮತ್ತು ಗಜಕೇಸರಿ ಎಂಬ ಎರಡು ರಾಜಯೋಗಗಳು ರೂಪುಗೊಳ್ಳುತ್ತವೆ ಎಂದು ಅವರು ಹೇಳಿದ್ದಾರೆ.

ಇದರಿಂದ ಹಲವು ರಾಶಿಯಲ್ಲಿ ಜನಿಸಿದವರಿಗೆ ಲಾಭವಾಗಲಿದ್ದು, ವಿದ್ಯಾರ್ಥಿ, ವ್ಯಾಪಾರಿಗಳಿಗೆ ಈ ವರ್ಷ ಶುಭವಾಗಲಿದೆ. ಸಿಂಹ, ಧನಸ್ಸು ಮತ್ತು ಮಿಥುನ ರಾಶಿ ಜನರಿಗೂ ಒಳ್ಳೆಯದಾಗುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ.

ಮೇಷ : ಕಠಿಣ ಪರಿಶ್ರಮದಿಂದ ಯಶಸ್ಸು, ಕೌಟುಂಬಿಕ ಕಲಹ. ವ್ಯಾಪಾರಸ್ಥರಿಗೆ ಹೆಚ್ಚಿನ ಒತ್ತಡ

ವೃಷಭ : ವೃತ್ತಿ ಜೀವನದಲ್ಲಿ ಅಭಿವೃದ್ಧಿ. ಆರೋಗ್ಯ ವಿಚಾರದಲ್ಲಿ ಮಿಶ್ರಫಲ. ಕೌಟುಂಬಿಕ ವಿಚಾರದಲ್ಲಿ ಸವಾಲು.

ಮೀನಾ : ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ, ಹೊಸ ಉದ್ಯಮಗಳಿಗೆ ಕೈ ಹಾಕುವವರಿಗೆ ಅನುಕೂಲ

ಮಿಥುನ : ಪ್ರಾಮಾಣಿಕ ಪ್ರಯತ್ನದಿಂದ ಉತ್ತಮ ಫಲ

ಕುಂಭ : ವ್ಯಾಪಾರ, ಉದ್ಯೋಗದಲ್ಲಿ ಧನಲಾಭ

ಕರ್ಕಾಟಕ : ಬದುಕಿನಲ್ಲಿ ಸಿಹಿ-ಕಹಿಗಳ ಮಿಶ್ರಣ. ಆರೋಗ್ಯ ವಿಷಯದಲ್ಲಿ ಕಾಳಜಿ ವಹಿಸಿ

ಮಕರ : ಕೈ ಹಾಕಿದ ಕೆಲಸಗಳಲ್ಲಿ ವಿಘ್ನ, ನಿರಾಸೆ

ವೃಶ್ಚಿಕ : ರಾಜಕೀಯ ಮುಖಂಡರಲ್ಲಿ ಪರಸ್ಪರ ವೈಮನಸ್ಸು

ಸಿಂಹ : ಗೃಹ ಲಾಭವಿದ್ದರೂ ನೆಮ್ಮದಿ ಇಲ್ಲ. ಕುಟುಂಬದಲ್ಲಿ ಅಹಿತಕರ ವಾತಾವರಣ

ಕನ್ಯಾ : ಕೌಟುಂಬಿಕ ಬಿಕ್ಕಟ್ಟು

ತುಲಾ : ಆರೋಗ್ಯದಲ್ಲಿ ಕಿರಿಕಿರಿ, ವ್ಯಾಪಾರದಲ್ಲಿ ನಷ್ಟ

RELATED ARTICLES

Related Articles

TRENDING ARTICLES