Tuesday, December 24, 2024

ಸೆಮಿ ಫೈನಲ್ ಗೆ ಲಗ್ಗೆಯಿಟ್ಟ ನೀತು ಗಂಗಾಸ್ : ಭಾರತಕ್ಕೆ ಪದಕ ಪಕ್ಕಾ!

ಬೆಂಗಳೂರು : ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಶಿಪ್ ನಲ್ಲಿ ಭಾರತದ ಭರವಸೆಯ ಬಾಕ್ಸರ್ ನೀತು ಗಂಗಾಸ್ (Boxer Nitu Ghanghas) ಸೆಮಿ ಫೈನಲ್‌ ಗೆ ಲಗ್ಗೆಯಿಟ್ಟಿದ್ದಾರೆ.

ಇಲ್ಲಿ ನಡೆಯುತ್ತಿರುವ ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ನೀತು ಗಂಗಾಸ್‌ ಅವರು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಜಪಾನ್‌ನ ಮಡೊಕಾ ವಡಾ ಅವರನ್ನು ಮಣಿಸುವ ಮೂಲಕ ಸೆಮಿ ಫೈನಲ್ ಪ್ರವೇಶಿಸಿದ್ದಾರೆ.

ಈ ಮೂಲಕ ಭಾರತಕ್ಕೆ ಒಂದು ಪದಕ ಬರುವುದು ಗ್ಯಾರಂಟಿಯಾಗಿದೆ. ಪ್ರಬಲ ಪಂಚ್‌ಗಳ ಮೂಲಕ ನೀತು ಗಂಗಾಸ್‌ ಮಿಂಚಿದರು. ನೀತು ಅವರು ಮಡೊಕಾ ವಿರುದ್ಧ ಆರಂಭದಿಂದಲೇ ಮೇಲುಗೈ ಸಾಧಿಸಿದರು. ಮೇಲಿಂದ ಮೇಲೆ ಪಂಚ್‌ಗಳನ್ನು ನೀಡಿ ಎದುರಾಳಿ ನೆಲಕ್ಕುರುಳುವಂತೆ ಮಾಡಿದರು.

ಇದನ್ನೂ ಓದಿ : ಹೆಣ್ಣು ಮಗುವಿಗೆ ತಂದೆಯಾದ ಉಮೇಶ್ ಯಾದವ್

ನೀತು ಅವರ ಪ್ರಬಲ ಪಂಚ್‌ಗಳ ಮುಂದೆ ಮಡೊಕಾ ತಬ್ಬಿಬ್ಬಾದರು. ಕಾಮನ್‌ವೆಲ್ತ್‌ ಕೂಟದ ಚಾಂಪಿಯನ್‌ ನೀತು ಅವರು ಮಂಗಳವಾರ ನಡೆದ 48 ಕೆ.ಜಿ. ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಬೌಟ್‌ನಲ್ಲಿ ತಜಿಕಿಸ್ತಾನದ ಸುಮೈಯಾ ಒಸಿಮೊವಾ ವಿರುದ್ಧ ಆರ್‌ಎಸ್‌ಸಿ ಆಧಾರದಲ್ಲಿ ಗೆದಿದ್ದರು

RELATED ARTICLES

Related Articles

TRENDING ARTICLES