Monday, December 23, 2024

ಇಂಡೋ-ಆಸೀಸ್ ಏಕದಿನ ಪಂದ್ಯ : ಇಂದು ಸರಣಿ ನಿರ್ಧಾರ

ಬೆಂಗಳೂರು : ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮೂರನೇ ಏಕದಿನ ಪಂದ್ಯ ಇಂದು ಚೆನ್ನೈನಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಜಯಶಾಲಿಯಾಗಿದ್ದರೆ, ಎರಡನೇ ಪಂದ್ಯದಲ್ಲಿ ಆಸಿಸ್ ಗೆದ್ದಿತ್ತು.

ತವರಿನಲ್ಲಿ ಸತತ 8ನೇ ಏಕದಿನ ಸರಣಿ ಗೆಲ್ಲುವ ವಿಶ್ವಾಸದಲ್ಲಿ ಟೀಂ ಇಂಡಿಯಾ ಇದೆ. ಉಭಯ ತಂಡಗಳು ಒಂದೊಂದು ಪಂದ್ಯವನ್ನು ಜಯಿಸಿದೆ. ಎರಡೂ ವಿಶ್ವದ ಶ್ರೇಷ್ಠ ತಂಡಗಳೇ. ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಹೊಂದಿವೆ. ಆದರೂ, ಮೊದಲೆರಡು ಪಂದ್ಯಗಳಲ್ಲಿ ವೇಗದ ಬೌಲರ್‌ಗಳು ಪ್ರಾಬಲ್ಯ ಮೆರೆದಿದ್ದಾರೆ.

ಸರಣಿ ಗೆಲ್ಲುವ ಗುರಿ

ಭಾರತದಲ್ಲಿ ಸತತ ಏಕದಿನ ಪಂದ್ಯಗಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ 200 ರನ್‌ ದಾಟದೆ ಇರುವುದು ತೀರಾ ಅಪರೂಪ. ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ 3ನೇ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕಲು ತಂಡಗಳು ಎದುರು ನೋಡುತ್ತಿವೆಯಾದರೂ, ಸರಣಿ ಗೆಲ್ಲುವುದು ಎರಡೂ ತಂಡಗಳ ಮುಂದಿರುವ ಬಹು ಮುಖ್ಯ ಗುರಿ.

ಏಕದಿನ ರ‍್ಯಾಂಕಿಂಗ್‌ ನಿರ್ಧಾರ

ಚೆನ್ನೈನ ಚೆಪಾಕ್‌ ಕ್ರೀಡಾಂಗಣ ದೊಡ್ಡ ಮೊತ್ತಕ್ಕೆ ಹೆಸರುವಾಸಿಯಲ್ಲ. ಅಲ್ಲದೇ ಇಲ್ಲಿ 2019ರ ಬಳಿಕ ಮೊದಲ ಬಾರಿಗೆ ಏಕದಿನ ಪಂದ್ಯ ನಡೆಯಲಿದೆ. ಈ ಅಂಶಗಳು ಪಂದ್ಯವನ್ನು ಮತ್ತಷ್ಟು ರೋಚಕಗೊಳಿಸಲಿದೆ. ಜೊತೆಗೆ ಈ ಪಂದ್ಯದ ಫಲಿತಾಂಶ ಏಕದಿನ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ನಿರ್ಧರಿಸಲಿದೆ.

ತೀವ್ರ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ರೋಹಿತ್ ಬಳಗ ಇಂದು ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದೆ. ಇತ್ತ, ಆಸಿಸ್ ಬಳಕ ಎರಡನೇ ಪಂದ್ಯದಲ್ಲಿ ತೋರಿದ ಪ್ರದರ್ಶನವನ್ನೇ ಕಂಟಿನ್ಯೂ ಮಾಡಿ, ಏಕದಿನ ಸರಣಿ ಗೆದ್ದು ಟೆಸ್ಟ್  ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

RELATED ARTICLES

Related Articles

TRENDING ARTICLES