Wednesday, January 22, 2025

ಹೊಯ್ಸಳ ಟ್ರೈಲರ್ ಬಿಡುಗಡೆ : ಮೂವರು ನರರಾಕ್ಷಸರ ಎದುರು ಒಬ್ಬ ನಟರಾಕ್ಷಸ

ಬೆಂಗಳೂರು : ಡಾಲಿ ಧನಂಜಯ ನಟನೆಯ 25ನೇ ಚಿತ್ರದ ಹೈ ವೋಲ್ಟೇಜ್ ಟ್ರೈಲರ್ ಲಾಂಚ್ ಆಗಿದೆ. ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್ ಟ್ರೈಲರ್ ಲಾಂಚ್ ಮಾಡಿದ್ದಾರೆ. ಡಾಲಿ ಗಮ್ಮತ್ತಿಗೆ ಇಡೀ ಇಂಡಸ್ಟ್ರಿ ಸ್ಟನ್ ಆಗಿದೆ. ಅಷ್ಟೇ ಅಲ್ಲ, ಈ ಚಿತ್ರದಿಂದ ಮತ್ತಿಬ್ಬರು ಹೀರೋಗಳು ವಿಲನ್​ಗಳಾಗಿ ಪರಿಚಯ ಆಗ್ತಿರೋದು ಮತ್ತೊಂದು ಹೈಲೆಟ್.

ಕಾಮನ್ ಮ್ಯಾನ್ ಅನ್ನೋ ಸಿಎಂನಿಂದ ಹಿಡಿದು ಸಿಎಂವರೆಗೆ ಎಲ್ಲರಿಗೂ ಪೊಲೀಸ್ ಬೇಕು. ಆದ್ರೆ, ಅದೇ ಪೊಲೀಸ್​ಗೆ ಕಷ್ಟ ಬಂದಿದೆ ಅಂದ್ರೆ ಯಾರೂ ಆಗಲ್ಲ ಅನ್ನೋ ಖಡಕ್ ಡೈಲಾಗ್​ನಿಂದ ಹೊಯ್ಸಳ ಟ್ರೈಲರ್ ಶುರುವಾಗುತ್ತೆ. ಸದ್ಯ ಡಾಲಿ ಟ್ರೈಲರ್ ಟ್ರೆಂಡಿಂಗ್​ನಲ್ಲಿದೆ.

ಡಾಲಿ ಧನಂಜಯ ನಟನೆಯ 25ನೇ ಸಿನಿಮಾ ಇದಾಗಿದ್ದು, ಕೆಆರ್​ಜಿ ಸ್ಟುಡಿಯೋಸ್ ಬ್ಯಾನರ್​​ನಡಿ ರತ್ನನ್ ಪ್ರಪಂಚ ನಂತ್ರ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಈ ಸಿನಿಮಾನ ನಿರ್ಮಾಣ ಮಾಡಿದ್ದಾರೆ. ಸಂತೋಷ್ ಆನಂದ್​ರಾಮ್ ಶಿಷ್ಯ ವಿಜಯ್ ಎನ್ ಆಕ್ಷನ್ ಕಟ್ ಹೇಳಿದ್ದು, ಒಬ್ಬ ನಿಷ್ಠಾವಂತ ಖಡಕ್ ಪೊಲೀಸ್ ಕಾಪ್ ಸುತ್ತ ಕಥೆ ಸುತ್ತಲಿದೆ.

ಕನ್ನಡದ ಮತ್ತಿಬ್ಬರು ಹೀರೋಗಳು!

ಡಾಲಿ ಪೊಲೀಸ್ ಆಫೀಸರ್ ಆಗಿ ಬಣ್ಣ ಹಚ್ಚಿದ್ರೆ, ಇದೇ ಮೊದಲ ಬಾರಿ ಕನ್ನಡದ ಮತ್ತಿಬ್ಬರು ಹೀರೋಗಳು ವಿಲನ್​ಗಳಾಗಿ ಬಣ್ಣ ಹಚ್ಚಿದ್ದಾರೆ. ಗುಳ್ಟು ನವೀನ್ ಬಲಿ ಅನ್ನೋ ಪಾತ್ರಕ್ಕಾಗಿ ಡೆಡ್ಲಿ ಹಾಗೂ ಡೇರಿಂಗ್ ಆಗಿ ಕಾಣಿಸಿಕೊಂಡ್ರೆ, ಪ್ರತಾಪ್ ನಾರಾಯಣ್ ತಂದೆಯ ಮಾತನ್ನು ಪಾಲಿಸೋ ನಾನಾ ರೋಲ್​​ನಲ್ಲಿ ಮಿಂಚು ಹರಿಸಲಿದ್ದಾರೆ.

ಇನ್ನು ಕೆಜಿಎಫ್​ನ ಌಂಡ್ರೂಸ್ ಅವಿನಾಶ್ ಅವ್ರು ನಾರ್ತ್ ಕರ್ನಾಟಕ ಶೈಲಿಯ ಭಾಷೆಯಲ್ಲಿ ವಿಲನಿಸಂ ಪವರ್ ತೋರಲಿದ್ದಾರೆ. ಅಚ್ಯುತ್ ಕುಮಾರ್ ಸಂಪತ್ ಕುಮಾರ್ ಅನ್ನೋ ಸಂಪತ್ತನ್ನೇ ಬಯಸೋ ಭ್ರಷ್ಟ ಪೊಲೀಸ್ ಆಫೀಸರ್ ಆಗಿ ಬಣ್ಣ ಹಚ್ಚಿದ್ದಾರಂತೆ.

ಮಾಸ್ತಿಯ ಡೈಲಾಗ್​ಗೆ ಅನುಶ್ರೀ ದಂಗು

ಮಾಸ್ತಿ ಡೈಲಾಗ್ಸ್ ಚಿತ್ರದ ಸ್ಟ್ರೆಂಥ್ ಹೆಚ್ಚಿಸಲಿದ್ದು, ವೇದಿಕೆ ಮೇಲೆ ಮಾಸ್ತಿಯ ಡೈಲಾಗ್​ಗೆ ಅನುಶ್ರೀ ದಂಗಾಗಿದ್ದಾರೆ. ಮಯೂರಿ ಹಾಗೂ ಅನಿರುದ್ದ್ ಅನ್ನೋ ಇಬ್ಬರು ಹೊಸ ಪ್ರತಿಭೆಗಳು ಈ ಚಿತ್ರದಲ್ಲಿ ಗಮನ ಸೆಳೆಯಲಿದ್ದು, ಅವರಿಗೆ ಕಿಚ್ಚನಿಂದ ಅಪ್ಪುಗೆ ಹಾಗೂ ಸ್ಪೆಷಲ್ ಗಿಫ್ಟ್ ಕೂಡ ಸಿಕ್ಕಿದೆ. ಇನ್ನು ಕಿಚ್ಚನ ಪ್ರೀತಿ, ಸ್ನೇಹಕ್ಕೆ ಡಾಲಿ ಭಾವುಕರಾಗಿದ್ದಾರೆ. ನಿಮ್ಮ ನಿರ್ದೇಶನದಲ್ಲಿ ನಾನು ನಟಿಸಬೇಕು ಅಂತ ಓಪನ್ ಆಗಿ ತಮ್ಮ ಅಂತರಂಗದ ಮಾತನ್ನು ಹೊರಹಾಕಿದ್ದಾರೆ.

ಹೀಗೆ ಹತ್ತು ಹಲವು ವಿಶೇಷತೆಗಳಿಂದ ಗುರುದೇವ್ ಹೊಯ್ಸಳ ಚಿತ್ರದ ಟ್ರೈಲರ್ ಲಾಂಚ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಇದೇ ಮಾರ್ಚ್​ 30ಕ್ಕೆ ಸಿನಿಮಾ ಗ್ರ್ಯಾಂಡ್ ಆಗಿ ತೆರೆಗಪ್ಪಳಿಸಲಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES