ಬೆಂಗಳೂರು : ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮೇಲೆ ಮುಸ್ಲಿಂ ಯುವಕ ಆಜಾನ್ ಕೂಗಿದ ವಿಚಾರಕ್ಕೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರಗಳು ಅತ್ಯಂತ್ಯ ಸೂಕ್ಷ್ಮವಾದ ವಿಚಾರಗಳು. ಆಜಾನ್ ಕೂಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಬಿಜೆಪಿಯವರೇ ಕಾರಣ
ರಾಜ್ಯದಲ್ಲಿ ಈ ರೀತಿಯ ವಿಚಾರಗಳು ಪ್ರಾರಂಭವಾಗುವುದಕ್ಕೆ ಬಿಜೆಪಿಯವರು ಕಾರಣರು. ಜೊತೆಗೆ ಇನ್ನೊಂದು ಧರ್ಮದ ಕೆಲ ಕಿಡಿಗೇಡಿಗಳ ಪಾತ್ರವಿದೆ. ಈಶ್ವರಪ್ಪನ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಎಚ್.ಡಿಕೆ, ಬಿಜೆಪಿಯವನ ಇನ್ಯಾವನ ಹೇಳಿಕೆಯೇ ಇರಲಿ ಎಂದು ಗರಂ ಆಗಿದ್ದಾರೆ.
ಈ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿರಬೇಕು. ಸಮಾಜದಲ್ಲಿ ಕೋಮು ಸಂಘರ್ಷ ಉಂಟುಮಾಡುವವರು ಯಾರೇ ಇದ್ದರೂ ಅಂತವರ ವಿರುದ್ದ ಕಠಿಣವಾದ ಕ್ರಮ ಕೈಗೊಳ್ಳಬೇಕು. ಶಿವಮೊಗ್ಗದಲ್ಲ ನಡೆದ ಘಟನೆ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕೇಳೋಕೆ ಈಶ್ವರಪ್ಪ ಯಾರು?
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮೇಲೆ ಯುವಕ ಆಜಾನ್ ಕೂಗಿದ್ದಾರೆ. ಪೊಲೀಸರ ಆಜಾನ್ ಕೂಗಬೇಡ ಎಂದು ತಾಕೀತು ನಡೆಸಿದ್ದಾರೆ. ಈ ವೇಳೆ ಮತ್ತೋರ್ವ ಯುವಕ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ್ದಾನೆ. ಆಜಾನ್ ಬಗ್ಗೆ ಮಾತನಾಡುವುದಕ್ಕೆ ಈಶ್ವರಪ್ಪ ಯಾರು? ಇವತ್ತು ಇಲ್ಲಿ ಕೂಗಿದ್ದೇವೆ? ನಾಳೆ ವಿಧಾನಸೌಧದಲ್ಲಿ ಕೂಗುತ್ತೇವೆ ಎಂದು ಕಿಡಿಕಾರಿದ್ದಾನೆ.
ಆಜಾನ್ ನಿಂದ ವಿದ್ಯಾರ್ಥಿಗಳಿಗೆ ತೊಂದ್ರೆ
ಆಜಾನ್ ಕೂಗುವುದರಿಂದ ವಿದ್ಯಾರ್ಥಿಗಳಿಗೆ ಎಷ್ಟು ತೊಂದರೆಯಾಗುತ್ತಿದೆ. ಇದು ಪೋಷಕರಿಗೆ ಗೊತ್ತು. ವಿದ್ಯಾರ್ಥಿಗಳಿಗೂ ಸಹ ಗೊತ್ತು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಆಜಾನ್ ನಿಂದ ಎಷ್ಟು ತೊಂದರೆಯಾಗಿದೆ. ಇರುವುದನ್ನು ಬಹಿರಂಗವಾಗಿ ಹೇಳುವುದಕ್ಕೆ ನಾನು ಹಿಂದೆ ಮುಂದೆ ನೋಡಲ್ಲ. ಆಜಾನ್ ಹೇಳಿಕೆ ಕುರಿತು ಎಷ್ಟೇ ವಿರೋಧ ಎದುರಾದ್ರೂ ನಾನು ಜನ ಸಾಮಾನ್ಯನ ನೋವನ್ನು ಹೇಳುವವನೇ ಎಂದು ತಿಳಿಸಿದ್ದಾರೆ.