ಬೆಂಗಳೂರು : ಕನ್ನಡದ ಮತ್ತೊಂದು ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಬರೆದಿದೆ. ಬಾಕ್ಸ್ ಆಫೀಸ್ ನಲ್ಲಿ ಕಬ್ಜ ಬಂಗಾರದ ಫಸಲು ಬೆಳೆದಿದೆ.
ಹೌದು, ಆರ್.ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾದ ಮೊದಲ ದಿನದ ಕಲೆಕ್ಷನ್ ರಿಷಭ್ ಶೆಟ್ಟಿಯ ಕಾಂತಾರ ಮತ್ತು ರಾಕಿಭಾಯ್ ನಟನೆಯ ಕೆಜಿಎಫ್ 1 ಚಿತ್ರಕ್ಕಿಂತ ಹೆಚ್ಚು ಗಳಿಕೆ ಮಾಡಿದೆ ಎಂದು ವರದಿಯಾಗಿದೆ.
ವಿದೇಶದಿಂದಲೂ ಹರಿದು ಬಂದ ಹಣ
ಗಾಂಧಿನಗರದ ಲೆಕ್ಕಾಚಾರದ ಪ್ರಕಾರ ಮೊದಲ ದಿನದ ಕಲೆಕ್ಷನ್ ಬರೋಬ್ಬರಿ 54 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದು ಭಾರತೀಯ ಸಿನಿಮಾ ರಂಗದಲ್ಲಿ ಮತ್ತೊಂದು ದಾಖಲೆ ಸೃಷ್ಟಿಸಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶದಿಂದಲೂ ಹಣ ಹರಿದು ಬಂದಿದ್ದು, ಹತ್ತು ಕೋಟಿಗೂ ಹೆಚ್ಚು ಗಳಿಕೆಯನ್ನು ಕಬ್ಜ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ : ‘ಕಬ್ಜ’ ಮೈನಸ್ ಪಾಯಿಂಟ್ಸ್ ಏನು ಗೊತ್ತಾ?
ಕನ್ನಡದಲ್ಲೇ 20 ಕೋಟಿ ಕಮಾಯ್
ಕರ್ನಾಟಕ ಒಂದರಲ್ಲೇ ಮೊದಲ ದಿನ ಕಬ್ಜ ಗಲ್ಲಾ ಪೆಟ್ಟಿಗೆಯಲ್ಲಿ 20 ಕೋಟಿ ರೂ. ಕಮಾಯ್ ಮಾಡಿದೆ. ಹಿಂದಿಯಲ್ಲಿ 12 ಕೋಟಿ ರೂ., ಆಂಧ್ರ ಹಾಗೂ ತೆಲಂಗಾಣದಲ್ಲಿ 7 ಕೋಟಿ, ತಮಿಳು 5 ಕೋಟಿ ಹಾಗೂ ಮಲಯಾಳಂನಲ್ಲಿ 3 ಕೋಟಿ ರೂ. ಕೊಳ್ಳೆ ಹೊಡೆದಿದೆ. ಮತ್ತೊಂದೆಡೆ, ಓವರ್ಸೀಸ್ ಕಲೆಕ್ಷನ್ ರಿಪೋರ್ಟ್ ಪ್ರಕಾರ ವಿದೇಶಿಗಳಲ್ಲಿ 8 ಕೋಟಿ ರೂ. ಕಬ್ಜ ಜೋಳಿಗೆಗೆ ಬಿದ್ದಿದೆ. ಆ ಮೂಲಕ ಭಾರತೀಯರಿಗಷ್ಟೇ ಅಲ್ಲ, ವಿದೇಶಿಗರಿಗೂ ಕಬ್ಜ ಕಿಕ್ ನೀಡಿದೆ.
ನಿನ್ನೆ ಬಿಡುಗಡೆಯಾದಾಗ ಕೆಲವು ಕಡೆ ಫಸ್ಟ್ ಶೋಗೆ ಪ್ರತಿಕ್ರಿಯೆ ಭಾರೀ ಪ್ರಮಾಣದಲ್ಲಿ ಇಲ್ಲವೆಂದು ಹೇಳಲಾಗಿತ್ತು. ಆದರೆ, ಸಂಜೆ ಅಷ್ಟೊತ್ತಿಗೆ ಅಷ್ಟೂ ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿವೆ. ಮಧ್ಯಾಹ್ನದಿಂದ ಥಿಯೇಟರ್ ಸಂಖ್ಯೆ ಹಾಗೂ ಶೋಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ.
ಈ ವರ್ಷದ ಬಹು ನಿರೀಕ್ಷಿತ ಪ್ಯಾನ್ ಇಂಡಿಯನ್ ಸಿನಿಮಾಗಳಲ್ಲಿ ಒಂದಾದ ಕಬ್ಜ ವಿಶ್ವದಾದ್ಯಂತ ದೊಡ್ಡ ಪರದೆಗೆ ಅಡಿಯಿಟ್ಟಿದೆ. ಅದೂ ನಾಲ್ಕು ಸಾವಿರಕ್ಕೂ ಅಧಿಕ ಸ್ಕ್ರೀನ್ಸ್ನಲ್ಲಿ ಅನ್ನೋದು ವಿಶೇಷ. ಆರ್. ಚಂದ್ರು ನಿರ್ದೇಶಿಸಿ, ನಿರ್ಮಿಸಿರೋ ಈ ಸಿನಿಮಾ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ಉಪೇಂದ್ರ ಹೀರೋ ಅಂದಾಗಲೇ ನಿರೀಕ್ಷೆ ಮೂಡಿಸಿತ್ತು. ಅದೀಗ ಹುಸಿಯಾಗಿಲ್ಲ. ಡೆಡ್ಲಿ ಅಂಡ್ ಡೇರಿಂಗ್ ಉಪ್ಪಿಯ ಖದರ್ಗೆ ಎಲ್ರೂ ಫಿದಾ ಆಗಿದ್ದಾರೆ.