Sunday, December 22, 2024

ಕಾಂಗ್ರೆಸ್ ಬೋಗಸ್ ಕಾರ್ಡ್ ಗೆ ಬೆಂಕಿ ಹಚ್ಚಿ : ರೇಣುಕಾಚಾರ್ಯ

ಬೆಂಗಳೂರು : ಕಾಂಗ್ರೆಸ್ ಪಕ್ಷದವರು ಕೊಟ್ಟಿದ್ದು ಗ್ಯಾರಂಟಿ ಕಾರ್ಡ್ ಅಲ್ಲ , ಬೋಗಸ್ ಕಾರ್ಡ್. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರ ಸಹಿ ಇದೆ. ಆ ಬೋಗಸ್ ಕಾರ್ಡ್ ಗೆ ಬೆಂಕಿ ಹಚ್ಚಿ ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಈಗ ಹೇಳತಾರೆ, ನಾವು ಉಚಿತವಾಗಿ ಅಕ್ಕಿ ಕೊಡುತ್ತೇವೆ ಅಂತ. ಅಕ್ಕಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್ ನವರಲ್ಲ. ಕಾಂಗ್ರೆಸ್ ನವರು ದೇಶವನ್ನು, ರಾಜ್ಯವನ್ನು ಲೂಟಿ ಹೊಡೆದಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.

ಮಾಜಿ ಶಾಸಕ ಡಿ.ಜಿ ಶಾಂತನಗೌಡರಿಗೆ ಟಾಂಗ್ ನೀಡಿದ ಶಾಸಕ ರೇಣುಕಾಚಾರ್ಯ, ಮಾಜಿ ಶಾಸಕರು ಹೇಳಿದ್ದಾರೆ ಇದು ಕೊನೆ ಚುನಾವಣೆ. ನಾಲ್ಕು ಬಾರಿ ಇದೇ ನನ್ನ ಕೊನೆ ಚುನಾವಣೆ ಎಂದಿದ್ದಾರೆ. ಬೀದಿ ನಾಟಕ ಮಾಡುವವರು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ : ಬಿಜೆಪಿ ಹೆಬ್ಬಾಗಿಲು ಶಾಶ್ವತವಾಗಿ ಕ್ಲೋಸ್ ಆಗುತ್ತೆ : ಎಚ್ ಡಿಕೆ ಭವಿಷ್ಯ

ನನ್ನನ್ನು ಚುನಾವಣೆ ಗೆಲ್ಲಿಸತೀರೋ?

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ರೆ ನಾನು ಚುನಾವಣೆಗೆ ನಿಲ್ಲುತ್ತೇನೆ. ಅವರು ಬೇಡ ಅಂದ್ರೆ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿರುತ್ತೇನೆ. ನೀವು ನನ್ನನ್ನು ಚುನಾವಣೆ ಗೆಲ್ಲಿಸತೀರೋ? ಎಂದು ರೇಣುಕಾಚಾರ್ಯ ಜನರಿಂದ ಉತ್ತರ ಪಡೆದಿದ್ದಾರೆ.

ಯಡಿಯೂರಪ್ಪ ತಂದೆ ಸಮಾನ

ಬಸವರಾಜ್ ಬೊಮ್ಮಾಯಿ ನನಗೆ ಅಣ್ಣನ ಸಮಾನ. ಬಿ.ಎಸ್ ಯಡಿಯೂರಪ್ಪ ಅವರು ತಂದೆ ಸಮಾನ. ಪಕ್ಷ ತಾಯಿ ಸಮಾನ. ಬಸವರಾಜ್ ಬೊಮ್ಮಾಯಿ ಮೀಸಲಾತಿ ಕೊಟ್ಟರು. ಸೇವಾಲಾಲ್ ಯಡಿಯೂರಪ್ಪರ ಕೊಡುಗೆ ಎಂದು ಶಾಸಕ ರೇಣುಕಾಚಾರ್ಯ ಬಿಎಸ್ ವೈ ಹಾಗೂ ಸಿಎಂ ಬೊಮ್ಮಾಯಿ ಅವರನ್ನು ಹಾಡಿ ಹೊಗಳಿದ್ದಾರೆ.

RELATED ARTICLES

Related Articles

TRENDING ARTICLES