Wednesday, January 22, 2025

ಕಿಚ್ಚನ ಕಿಚ್ಚು, ಉಪ್ಪಿ ಕಮಾಯ್, ಶಿವಣ್ಣನ ಎಂಟ್ರಿ..! ‘ಕಬ್ಜ’ ಮೈನಸ್ ಪಾಯಿಂಟ್ಸ್ ಏನು ಗೊತ್ತಾ?

ಬೆಂಗಳೂರು : ಈ ವರ್ಷದ ಬಹು ನಿರೀಕ್ಷಿತ ಪ್ಯಾನ್ ಇಂಡಿಯನ್ ಸಿನಿಮಾಗಳಲ್ಲಿ ಒಂದಾದ ಕಬ್ಜ ಇಂದು ವಿಶ್ವದಾದ್ಯಂತ ದೊಡ್ಡ ಪರದೆಗೆ ಅಡಿಯಿಟ್ಟಿದೆ. ಅದೂ ನಾಲ್ಕು ಸಾವಿರಕ್ಕೂ ಅಧಿಕ ಸ್ಕ್ರೀನ್ಸ್​ನಲ್ಲಿ ಅನ್ನೋದು ವಿಶೇಷ. ಆರ್. ಚಂದ್ರು ನಿರ್ದೇಶಿಸಿ, ನಿರ್ಮಿಸಿರೋ ಈ ಸಿನಿಮಾ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ಉಪೇಂದ್ರ ಹೀರೋ ಅಂದಾಗಲೇ ನಿರೀಕ್ಷೆ ಮೂಡಿಸಿತ್ತು. ಅದೀಗ ಹುಸಿಯಾಗಿಲ್ಲ. ಡೆಡ್ಲಿ ಅಂಡ್ ಡೇರಿಂಗ್ ಉಪ್ಪಿಯ ಖದರ್​ಗೆ ಎಲ್ರೂ ಫಿದಾ ಆಗಿದ್ದಾರೆ.

ಹೌದು, ಉಪ್ಪಿ ಜೊತೆಗೆ ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್ ಹಾಗೂ ಶಿವರಾಜ್​ಕುಮಾರ್ ಕೂಡ ಚಿತ್ರದಲ್ಲಿದ್ದು, ಕಬ್ಜ ಗತ್ತು ಗಮ್ಮತ್ತು ಮತ್ತಷ್ಟು ಹೆಚ್ಚಿಸಿದ್ದಾರೆ. ಭಯಂಕರ ಉಪ್ಪಿಗೆ, ಕಿಚ್ಚನ ಖಾಕಿ ಪವರ್ ಹಾಗೂ ಶಿವಣ್ಣನ ಕಿಲ್ಲರ್ ಎಂಟ್ರಿ ಸಾಥ್ ನೀಡಿವೆ. ಕಬ್ಜ ಕ್ಯಾಪ್ಟನ್ ಆರ್ ಚಂದ್ರು ಕ್ರಯೇಟಿವಿಟಿ ಹಾಗೂ ಮೇಕಿಂಗ್ ಸ್ಟೈಲ್​ಗೆ ಇಡೀ ಭಾರತೀಯ ಚಿತ್ರರಂಗ ಹುಬ್ಬೇರಿಸಿದೆ.

ಟಾಲಿವುಡ್ ಪವರ್ ಸ್ಟಾರ್ ಫಿದಾ

ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಈಗಾಗ್ಲೇ ಕಬ್ಜ ನೋಡಿ ಮೆಚ್ಚಿಕೊಂಡಿದ್ದು, ಸ್ವತಃ ಚಂದ್ರು ಅವ್ರನ್ನ ಭೇಟಿಯಾಗಿ ನನಗೊಂದು ಸಿನಿಮಾ ಮಾಡಿಕೊಡಿ ಅಂತ ಆಫರ್ ಮಾಡಿದ್ದಾರಂತೆ. ಇದಕ್ಕಿಂತ ಮತ್ತೇನಿದೆ ಅಲ್ಲವೇ? ಕಬ್ಜ ಕನ್ನಡ ಚಿತ್ರರಂಗದ ನಯಾ ಮಾಸ್ಟರ್​ಪೀಸ್ ಅನಿಸಿಕೊಂಡಿದ್ದು, ಬಾಕ್ಸ್ ಆಫೀಸ್​​ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ.

ಇದೇ ಕಬ್ಜ ಸ್ಟೋರಿಲೈನ್

ಭಾರ್ಗವ್ ಭಕ್ಷಿ ಅನ್ನೋ ಪೊಲೀಸ್ ಕಾಪ್ ರೌಡಿಗಳನ್ನೆಲ್ಲಾ ಕರೆಸಿ ವಾರ್ನಿಂಗ್ ಕೊಡುವುದರ ಜೊತೆಗೆ ಡಾನ್ ಅರ್ಕೇಶ್ವರನ ಸ್ಟೋರಿ ಹೇಳೋಕೆ ಪ್ರಾರಂಭ ಮಾಡ್ತಾರೆ. ಅದು ಸ್ವತಂತ್ರಪೂರ್ವ ಭಾರತ. ಸಂಗ್ರಾಮನಗರದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಅಮರೇಶ್ವರನ ನಿಧಾನ ನಂತರ ಆತನ ಪತ್ನಿ ತನ್ನ ಇಬ್ಬರು ಮಕ್ಕಳಾದ ಸಂಕೇಶ್ವರ ಮತ್ತು ಅರ್ಕೇಶ್ವರನ ಜೊತೆ ದಕ್ಷಿಣ ಭಾರತಕ್ಕೆ ಬಂದು ಜೀವನ ಕಟ್ಟಿಕೊಳ್ಳುತ್ತಾರೆ. ಸ್ವತಂತ್ರ ಕೂಡ ಬರುತ್ತದೆ. ಅರ್ಕೇಶ್ವರ, ವೈಜಾಕ್​ನ ಏರ್ ಫೋರ್ಸ್​ ಅಕಾಡೆಮಿಯಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸ್ತಿರ್ತಾರೆ. ಆತನಿಗೆ ಅಮರಾಪುರದ ವೀರ್ ಬಹದ್ದೂರ್ ಮಗಳು ಯುವರಾಣಿ ಮಧುಮತಿ ಜೊತೆ ಪ್ರೇಮ. ಬಾಲ್ಯದಿಂದಲೂ ಪರಸ್ಪರ ಪ್ರೀತಿಸುತ್ತಿದ್ದ ಅವರು ಪ್ರೇಮಪರ್ವವನ್ನು ಮುಂದುವರೆಸುತ್ತಾರೆ.

ಅಣ್ಣನ ಸಾವಿಗೆ ಪ್ರತಿಕಾರ

ಮತ್ತೊಂದು ಕಡೆ ತಮಗೆ ಆಶ್ರಯ ಕೊಟ್ಟಂತಹ ಟೌನ್​ನಲ್ಲಿ ಖಲೀದ್ ಭಾಯ್ ಎನ್ನುವ ನರ ರಾಕ್ಷಸನ ಅಟ್ಟಹಾಸಕ್ಕೆ ಅಲ್ಲಿನ ಜನ ಬೇಸತ್ತು ಹೋಗಿರುತ್ತಾರೆ. ಸ್ವತಂತ್ರ ನಂತರ ಚುನಾವನೆ ಬಂದಾಗ ಅಮರಾಪುರದ ಅಧಿಕಾರ ಬೇರೆಯವರ ಪಾಲಾಗೋದನ್ನು ತಡೆಯೋಕೆ ವೀರ್ ಬಹದ್ದೂರ್ ದೊಡ್ಡ ಸಂಚು ರೂಪಿಸ್ತಾರೆ. ಅವರ ಆಪೋಸಿಟ್ ಗ್ಯಾಂಗ್ ಆಗಿದ್ದ ಖಲೀದ್ ಭಾಯ್ ತನ್ನ ಮಗನನ್ನು ದುಬೈನಿಂದ ಇಂಡಿಯಾಗೆ ಕರೆಸುತ್ತಾರೆ. ಆತನ ಮದುವೆ ಸಮಯದಲ್ಲಿ ಫೈರ್ ಆಗಿ ಸಂಕೇಶ್ವರ ಕಡೆಯವರು ಸಾಯುತ್ತಾರೆ. ಅದಕ್ಕೆ ಆ ಖಲೀದ್ ಭಾಯ್ ಮಗನನ್ನೇ ಸಾಯಿಸೋ ಸಂಕೇಶ್ವರನ ರುಂಡ ಕತ್ತರಿಸಿ, ಮತ್ತಷ್ಟು ವಿಕೃತ ಮೆರೆಯುತ್ತಾರೆ ಖಲೀದ್. ಆಗ ವೃತ್ತಿ ಬಿಟ್ಟು, ಅಂಡರ್​ವರ್ಲ್ಡ್​ನೇ ವೃತ್ತಿಯಾಗಿಸಿಕೊಳ್ಳೋ ಅರ್ಕೇಶ್ವರ, ತನ್ನ ಅಣ್ಣನ ಸಾವಿಗೆ ಪ್ರತಿಯಾಗಿ ಖಲೀದ್​ ರುಂಡ ಚೆಂಡಾಡುತ್ತಾನೆ.

ಅಲ್ಲಿಂದ ಶುರುವಾಗೋ ಅಸಲಿ ಕಬ್ಜಾದಲ್ಲಿ ಸಾಕಷ್ಟು ಟ್ವಿಸ್ಟ್​ ಅಂಡ್ ಟರ್ನ್ಸ್. ಅರ್ಕೇಶ್ವರ ಗ್ಯಾಂಗ್​ಸ್ಟರ್ ಆಗಿ ಬಹುದೊಡ್ಡ ಸಾಮ್ರಾಜ್ಯ ಕಟ್ಟುತ್ತಾರೆ. ಇಷ್ಟ ದೇವತೆ ಮಧುಮತಿಯನ್ನು ಮದುವೆ ಕೂಡ ಆಗ್ತಾರೆ. ಆದಿತ್ಯ ಅಮರೇಶ್ವರ ಹಾಗೂ ಸಾಮ್ರಾಟ ಅಮರೇಶ್ವರ ಎನ್ನುವ ಎರಡು ಮಕ್ಕಳ ಪೋಷಕರೂ ಆಗುತ್ತಾರೆ. ಆದರೆ, ಇಂಡಿಯನ್ ಗವರ್ನಮೆಂಟ್ ಆತನನ್ನು ಬಿಡಲು ಸಿದ್ದರಿಲ್ಲ. ಸಾಲದು ಅಂತ ಮತ್ತೊಬ್ಬ ಗ್ಯಾಂಗ್​ಸ್ಟರ್ ಎಂಟ್ರಿ ಬೇರೆ. ಅವರೆಲ್ಲರ ಪೈಕಿ ಯಾರು ಉಳೀತಾರೆ? ಅರ್ಕೇಶ್ವರನ ಸಾಮ್ರಾಜ್ಯ ಉಳಿದುಕೊಳ್ಳುತ್ತಾ? ಇನ್ನೂ ರಿವೀಲ್ ಆಗದ ಆ ಢಾಕಾ ಯಾರು ಎನ್ನುವುದೇ ಚಿತ್ರದ ಕಥಾನಕ.

ಕಿಚ್ಚು ಹಚ್ಚಿದ ಕಿಚ್ಚನ ಖಾಕಿ ಪವರ್

ಟ್ರೆಂಡ್ ಸೆಟ್ಟರ್ ಉಪೇಂದ್ರ ಡಾನ್ ಅರ್ಕೇಶ್ವರನಾಗಿ ಮ್ಯಾಜಿಕ್ ಮಾಡಿದ್ದಾರೆ. ಡೆಡ್ಲಿ ಅಂಡ್ ಡೇರಿಂಗ್ ರೋಲ್​ನಲ್ಲಿ ನೋಡುಗರ ಎದೆ ನಡುಗಿಸುತ್ತಾರೆ. ಪೈಲಟ್ ಹಾಗೂ ಡಾನ್ ಎರಡು ಶೇಡ್​​ಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ಉಪ್ಪಿ ಸ್ಟೈಲು, ಮ್ಯಾನರಿಸಂ ಜೊತೆ ಸ್ವ್ಯಾಗ್ ಸಖತ್ ಇಂಪ್ರೆಸ್ಸೀವ್ ಆಗಿದೆ. ಅವರ ಡೈಲಾಗ್ಸ್​ಗೆ ಶಿಳ್ಳೆ ಚಪ್ಪಾಳೆಗಳ ಸುರಿಮಳೆ ಆಗಲಿದೆ.

ಭಾರ್ಗವ್ ಭಕ್ಷಿಯಾಗಿ ಖದರ್

ಪೊಲೀಸ್ ಕಾಪ್ ಭಾರ್ಗವ್ ಭಕ್ಷಿಯಾಗಿ ಕಿಚ್ಚನ ಖದರ್ ಜೋರಿದೆ. ಅವರ ವಾಯ್ಸ್, ಆ ಅಧಿಕಾರದ ಗತ್ತು ನೆಕ್ಸ್ಟ್ ಲೆವೆಲ್​ ಆಗಿದೆ. ಕ್ಲೈಮ್ಯಾಕ್ಸ್​​ನಲ್ಲಿ ಕಿಕ್ ಕೊಡೋ ಶಿವರಾಜ್​ಕುಮಾರ್ ನೋಡುಗರನ್ನು ಸೀಟಿನ ಅಂಚಿನಲ್ಲಿ ಕೂರಿಸ್ತಾರೆ. ಇನ್ನು ಶ್ರಿಯಾ ಶರಣ್, ಅಮರಾಪುರದ ಬಹದ್ದೂರ್ ಕುಟುಂಬದ ಯುವರಾಣಿಯಾಗಿ ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಫಯಾಝ್ ಪಾತ್ರಧಾರಿ ಅನೂಪ್ ರೇವಣ್ಣ ನೆನಪಲ್ಲಿ ಉಳಿಯಲಿದ್ದಾರೆ.

ವೀರ್ ಬಹದ್ದೂರ್ ಆಗಿ ಮುರಳಿ ಶರ್ಮಾ, ಖಲೀದ್ ಆಗಿ ಕಾಮರಾಜ್, ನವಾಬ್ ಷಾ, ಡಿಸಿಪಿ ವಿಕ್ರಮ್ ಪಾತ್ರದಲ್ಲಿ ದೇವ್​ಗಿಲ್ ಸೇರಿದಂತೆ ಎಲ್ಲರೂ ಅವರವರ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಢಾಕಾ ಯಾರು ಅನ್ನೋದು ಇನ್ನೂ ರಿವೀಲ್ ಆಗದ ಕಾರಣ ಅತೀವ ಕುತೂಹಲ ಮೂಡಿದೆ.

ಕಬ್ಜ ಪ್ಲಸ್ ಪಾಯಿಂಟ್ಸ್

  • ಉಪೇಂದ್ರ ಡಾನ್ ಖದರ್, ಸುದೀಪ್ ಖಾಕಿ ಪವರ್
  • ಶಿವರಾಜ್​ಕುಮಾರ್ ಎಂಟ್ರಿ
  • ಆರ್ ಚಂದ್ರು ಕಥೆ & ನಿರೂಪಣೆ
  • ಮೇಕಿಂಗ್ ಕ್ವಾಲಿಟಿ
  • ಬ್ಲ್ಯಾಕ್ ಟಿಂಟ್, ಆರ್ಟ್​ ವರ್ಕ್​
  • ರವಿ ಬಸ್ರೂರು ಬ್ಯಾಗ್ರೌಂಡ್ ಮ್ಯೂಸಿಕ್
  • ಹೈ ವೋಲ್ಟೇಜ್ ಫೈಟ್ಸ್

ಕಬ್ಜ ಮೈನಸ್ ಪಾಯಿಂಟ್ಸ್

ಸಿನಿಮಾ ಅಂದ್ಮೇಲೆ ಮಿಸ್ಟೇಕ್ಸ್ ಇದ್ದೇ ಇರುತ್ತದೆ. ಆದರೆ, ಸಿಕ್ಕಾಪಟ್ಟೆ ವಯಲೆನ್ಸ್ ಇರೋದ್ರಿಂದ ಎಮೋಷನ್ಸ್ ಹೈಲೈಟ್ ಆಗಿಲ್ಲ. ಌಕ್ಷನ್ ಬೇಸ್ಡ್ ಸಿನಿಮಾ ಆಗಿರೋದ್ರಿಂದ ಕಾಮಿಡಿಗೆ ಸ್ಪೇಸ್ ಇಲ್ಲ. ಅಷ್ಟೇ ಯಾಕೆ ಗ್ಲಾಮರ್ ಕೂಡ ಕೊಂಚ ಕಡಿಮೇನೇ. ಗನ್​ಗಳ ಮೊರೆತ, ರುಂಡಗಳ ಕಡಿಯುವಿಕೆ, ಕತ್ತಿಯಲ್ಲಿ ನೆತ್ತರು ಹರಿಸೋ ದೃಶ್ಯಗಳು ಅತಿರೇಖ ಅನಿಸಲಿದೆ. ಆದರೆ, ನಿಮಾನ ಮನರಂಜನೆ ಌಂಗಲ್​ನಿಂದ ನೋಡೋದಾದ್ರೆ ಥ್ರಿಲ್ಲಿಂಗ್ ಎಂಟರ್​ಟೈನಿಂಗ್ ಆಗಿ ಎಂಗೇಜ್ ಮಾಡಲಿದೆ.

ಒಟ್ಟಾರೆ, ಹಳ್ಳಿ ಪ್ರತಿಭೆ ಆರ್. ಚಂದ್ರು ಇಂಥದ್ದೊಂದು ಬಿಗ್ ಸ್ಕೇಲ್ ಸಿನಿಮಾಗೆ ಕೈ ಹಾಕಿದಾಗಲೇ ಅರ್ಧ ಗೆದ್ದಿದ್ದರು. ಅಮಿತಾಬ್ ಬಚ್ಚನ್ ಟ್ರೈಲರ್ ಲಾಂಚ್ ಹಾಗೂ ಪವನ್ ಕಲ್ಯಾಣ್ ಮೆಚ್ಚುಗೆಯಿಂದ ಸಂಚಲನ ಮೂಡಿಸಿದ್ದರು. ಈಗ ಅವರಲ್ಲಿದ್ದ ಇಂಟೆನ್ಸ್ ಟೆಕ್ನಿಷಿಯನ್ ಸಿನಿಮಾ ಹುಚ್ಚನ್ನು ಪರಿಚಯಿಸಿದ್ದಾರೆ.

ಕಥೆ, ಪಾತ್ರಗಳು, ಮೇಕಿಂಗ್, ಸ್ವತಂತ್ರಪೂರ್ವ ಭಾರತ ಸೇರಿದಂತೆ ರೆಟ್ರೋ ಬ್ಯಾಕ್​ಡ್ರಾಪ್ ಹೀಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಎಜೆ ಶೆಟ್ಟಿ ಸಿನಿಮಾಟೋಗ್ರಫಿ, ರವಿ ಬಸ್ರೂರು ಮ್ಯೂಸಿಕ್ ಹಾಗೂ ಶಿವಕುಮಾರ್ ಆರ್ಟ್​ ವರ್ಕ್​ ಚಿತ್ರದ ಸ್ಟ್ರೆಂಥ್ ಹೆಚ್ಚಿಸಿವೆ. ಮೆಕಿಂಗ್​ನಲ್ಲಿ ಈ ಸಿನಿಮಾ ಹೊಸ ಇತಿಹಾಸ ಸೃಷ್ಟಿಸಲಿದ್ದು, ಇಡೀ ಭಾರತೀಯ ಚಿತ್ರರಂಗ ನೆನಪಿನಲ್ಲಿ ಇಟ್ಕೊಳ್ಳೋ ಅಂತಹ ಮೈಲಿಗಲ್ಲು ಸಿನಿಮಾ ಆಗಲಿದೆ. ಮನರಂಜನೆ ಹರಸಿ ಥಿಯೇಟರ್ ಕಡೆ ಹೋಗೋರಿಗೆ ಇದು ನಿಜಕ್ಕೂ ಹಬ್ಬದೂಟ ಬಡಿಸಲಿದೆ.

ಕಬ್ಜ ಚಿತ್ರಕ್ಕೆ ಪವರ್ ಟಿವಿ ರೇಟಿಂಗ್ : 4/5

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿ

RELATED ARTICLES

Related Articles

TRENDING ARTICLES