ಬೆಂಗಳೂರು : 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನದ ಬದಲಾಗಿ ಪಬ್ಲಿಕ್ ಪರೀಕ್ಷೆ ನಡೆಸಲು ಸರ್ಕಾರ ಕೈಗೊಂಡಿದ್ದ ನಿರ್ಧಾರಕ್ಕೆ ಹೈಕೋರ್ಟ್ ಒಪ್ಪಿಗೆ ನೀಡಿದ್ದು, ಇದೀಗ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಮಾರ್ಚ್ 27ರಿಂದ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿತ್ತು. ಜೊತೆಗೆ ಕೆಲವೊಂದಿಷ್ಟು ಸೂಚನೆ ನೀಡಿದೆ. ಶಿಕ್ಷಣ ಕಾಯ್ದೆಯಡಿ ಪರೀಕ್ಷೆಗೆ ಅಡ್ಡಿ ಇಲ್ಲ, ಯಾವುದೇ ವಿದ್ಯಾರ್ಥಿಗಳನ್ನು ಅನುತ್ತೀರ್ಣ (ಫೇಲ್) ಮಾಡುವಂತಿಲ್ಲ ಎಂದು ಹೇಳಿತ್ತು.
ಐದನೇ ತರಗತಿ ವೇಳಾಪಟ್ಟಿ
- ಮಾರ್ಚ್ 27- ಪ್ರಥಮ ಭಾಷೆ (ಕನ್ನಡ, ಇಂಗ್ಲಿಷ್)
- ಮಾರ್ಚ್ 28- ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)
- ಮಾರ್ಚ್ 29- ಪರಿಸರ ಅಧ್ಯಯನ
- ಮಾರ್ಚ್ 30- ಗಣಿತ
8ನೇ ತರಗತಿ ವೇಳಾಪಟ್ಟಿ
- ಮಾರ್ಚ್ 27- ಪ್ರಥಮ ಭಾಷೆ (ಕನ್ನಡ, ಇಂಗ್ಲಿಷ್)
- ಮಾರ್ಚ್ 28- ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)
- ಮಾರ್ಚ್ 29 ತೃತೀಯ ಭಾಷೆ
- ಮಾರ್ಚ್ 30 ಗಣಿತ
- ಮಾರ್ಚ್ 31 ವಿಜ್ಞಾನ
- ಏಪ್ರಿಲ್ 1 ಸಮಾಜ ವಿಜ್ಞಾನ
ಇದನ್ನೂ ಓದಿ : ಪಬ್ಲಿಕ್ ಪರೀಕ್ಷೆ : ಹೀಗಿದೆ ನ್ಯಾಯಾಲಯದ ತೀರ್ಪು
ಪ್ರಮುಖ ಅಂಶಗಳು
- ಮಾರ್ಚ್ 27 ರಿಂದ ಮಾರ್ಚ್ 30ರವರೆಗೆ 5ನೇ ತರಗತಿ ಪರೀಕ್ಷೆ
- ಮಾರ್ಚ್ 27ರಿಂದ ಏಪ್ರಿಲ್ 1ರವರೆಗೆ 8ನೇ ತರಗತಿ ಪರೀಕ್ಷೆ
- ಆಯಾ ಶಾಲೆಗಳಲ್ಲಿ ಪರೀಕ್ಷೆ ನಡೆಸಲು ನಿರ್ಧಾರ
- ಫಲಿತಾಂಶವನ್ನು ವಿದ್ಯಾರ್ಥಿಗಳಿಗೆ ಮಾತ್ರ ತಿಳಿಸಬೇಕು
- ಗೌಪ್ಯತೆ ಕಾಪಾಡಲು ಶಿಕ್ಷಣ ಇಲಾಖೆ ಸೂಚನೆ
- ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವಂತಿಲ್ಲ
- ಪಠ್ಯಕ್ರಮ ಹೊರತುಪಡಿಸಿ ಬೇರೆ ಪ್ರಶ್ನೆಗಳನ್ನು ಕೇಳುವಂತಿಲ್ಲ