Sunday, March 26, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeಈ ಕ್ಷಣಬೆದರಿದ ಆಸ್ಟ್ರೇಲಿಯಾ : 188 ರನ್‌ ಗಳಿಗೆ ಸರ್ವಪತನ

ಬೆದರಿದ ಆಸ್ಟ್ರೇಲಿಯಾ : 188 ರನ್‌ ಗಳಿಗೆ ಸರ್ವಪತನ

ಬೆಂಗಳೂರು : ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಆಸಿಸ್ ಬ್ಯಾಟರ್ ಗಳು ಪೆವಿಲಿಯನ್ ಪೆರೇಡ್ ನಡೆಸಿದ್ದಾರೆ.

ಹೌದು, ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ಆಸ್ಟ್ರೇಲಿಯಾ ಬೆದರಿದೆ. 35.4 ಓವರ್‌ಗಳಲ್ಲೇ 188 ರನ್‌ ಗಳಿಗೆ ಆಲೌಟಾಗುವ ಮೂಲಕ 189 ರನ್‌ಗಳ ಗುರಿ ನೀಡಿದೆ. ಟೀಂ ಇಂಡಿಯ ವೇಗಿಗಳಾದ ಶಮಿ ಮತ್ತು ಸಿರಾಜ್ ತಲಾ 3, ಜಡೇಜಾ 2, ಪಾಂಡ್ಯ ಮತ್ತು ಕುಲೀಪ್ ತಲಾ 1 ವಿಕೆಟ್ ಕಬಳಿಸಿದರು.

ಆಸಿಸ್ ಪರ ಮಿಚೆಲ್ ಮಾರ್ಚ್ 81 ರನ್ ಗಳಿಸಿದ್ದು ಬಿಟ್ಟರೆ, ಉಳಿದವರು ಬ್ಯಾಟಿಂಗ್‌ನಲ್ಲಿ ವಿಫಲರಾದರು. ಜಡೇಜಾ, ರಾಹುಲ್ ಮತ್ತು ಗಿಲ್ ಅದ್ಭುತ ಕ್ಯಾಚ್ ಪಡೆದು ಮಿಂಚಿದರು.

ಇದನ್ನೂ ಓದಿ : ಈಜುಕೊಳದಲ್ಲಿ ಊರುಗೋಲು ಹಿಡಿದು ನಡೆದಾಡಿದ ಪಂತ್

ಕಮಾಲ್ ಮಾಡದ ಮ್ಯಾಕ್ಸ್‌ವೆಲ್‌

ಆಸಿಸ್ ತಂಡವು 129 ರನ್‌ಗಳಿಗೆ ಕೇವಲ 2 ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತದತ್ತ ಮುಖ ಮಾಡಿತ್ತು. ಮಿಚೆಲ್ ಮಾರ್ಶ್‌ ವಿಕೆಟ್‌ ಪತನದ ಬಳಿಕ ಆಸ್ಟ್ರೇಲಿಯಾ ದಿಢೀರ್ ಕುಸಿತ ಕಂಡಿತು. 59 ರನ್‌ ಸೇರಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಳ್ಳುವ ಮೂಲಕ 190 ರನ್‌ಗಳೊಳಗೆ ಸರ್ವಪತನ ಕಂಡಿತು.

ಆಸಿಸ್ ಪರ ಮಾರ್ನಸ್ ಲಬುಶೇನ್(15), ಜೋಶ್ ಇಂಗ್ಲಿಶ್‌(26) ಹಾಗೂ ಕ್ಯಾಮರೋನ್ ಗ್ರೀನ್‌(12) ಬಾರಿಸಿ ವಿಕೆಟ್ ಒಪ್ಪಿಸಿದರೆ, ಆಲ್ರೌಂಡರ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್‌(8), ಮಾರ್ಕಸ್ ಸ್ಟೋನಿಸ್(5) ಹಾಗೂ ಶಾನ್ ಅಬೋಟ್ ಒಂದಂಕಿ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದರು.

LEAVE A REPLY

Please enter your comment!
Please enter your name here

Most Popular

Recent Comments