Friday, November 22, 2024

ಸದನದಲ್ಲಿ ಅವಕಾಶ ನೀಡಿದ್ರೆ ಮಾತನಾಡ್ತೀನಿ : ರಾಹುಲ್ ಗಾಂಧಿ

ಬೆಂಗಳೂರು : ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರು ಲಂಡನ್​ನಲ್ಲಿ ಭಾರತವನ್ನು ಟೀಕಿಸಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ.

ಸದನದಲ್ಲಿ ಭಾಗವಹಿಸಲು ಆಗಮಿಸಿದ್ದ ರಾಹುಲ್ ಗಾಂಧಿ, ತಮಗೆ ಅವಕಾಶ ಕೊಡುವುದಾದರೆ, ಲೋಕಸಭೆಯಲ್ಲೇ ಈ ಸಂಬಂಧ ಸ್ಪಷ್ಟನೆ ನೀಡಲು ತಾವು ಸಿದ್ದವಿರುವುದಾಗಿ ಹೇಳಿದ್ದಾರೆ.

ಪ್ರಜಾಪ್ರಭುತ್ವ ಅಪಾಯದಲ್ಲಿದೆ

ಬ್ರಿಟನ್​ ನ ಸಾರ್ವಜನಿಕ ವೇದಿಕೆಯಲ್ಲಿ  ಮಾತನಾಡುವ ಸಂದರ್ಭದಲ್ಲಿ ರಾಹುಲ್ ಗಾಂಧಿ, ಭಾರತ ಸರ್ಕಾರವನ್ನು ಟೀಕಿಸಿದ್ದರು. ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದಿದ್ದರು. ಇದೇ ವಿಷಯವಾಗಿ ಲೋಕಸಭೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರಿ ಕೋಲಾಹಲ ಉಂಟಾಗಿದೆ. ದೇಶಕ್ಕೆ ಅಪಮಾನ ಮಾಡಿರುವ ರಾಹುಲ್ ಗಾಂಧಿ ದೇಶದ ಕ್ಷಮೆ ಕೇಳಬೇಕು ಎಂದು ಆಡಳಿತಾರೂಢ ಬಿಜೆಪಿಯ ಸಂಸದರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ‘ಪ್ರಧಾನಿ ಮೋದಿಯನ್ನು ಮುಗಿಸಿ’ ಎಂದ ಕಾಂಗ್ರೆಸ್ ನಾಯಕ

ಇಂದು ಕಲಾಪಕ್ಕೆ ರಾಹುಲ್ ಹಾಜರ್

ಸಂಸತ್ ಬಜೆಟ್​ ಅಧಿವೇಶನದ ಎರಡನೆ ಚರಣ ಆರಂಭವಾದಾಗಿನಿಂದ ಲೋಕಸಭೆ ಕಲಾಪಕ್ಕೆ ಗೈರು ಹಾಜರಾಗಿದ್ದ ರಾಹುಲ್ ಗಾಂಧಿ, ಇದೇ ಮೊದಲ ಬಾರಿಗೆ ಇಂದು ಕಲಾಪಕ್ಕೆ ಹಾಜರಾದರು. ತಮ್ಮ ಹೇಳಿಕೆಯ ಸಂಬಂಧ ಲೋಕಸಭೆಯಲ್ಲಿ ಭಾರಿ ಕೋಲಾಹಲವಾಗುತ್ತಿರುವುದರಿಂದ, ಅಲ್ಲೇ ಸ್ಪಷ್ಟೀಕರಣ ಕೊಡಲು ತಾವು ಬಯಸಿರುವುದಾಗಿ ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಭಾರತದಲ್ಲಿ ಹುಟ್ಟಿದ್ದು ಪಾಪ!

ಇನ್ನೂ, ರಾಹುಲ್ ಕ್ಷಮೆಯಾಚನೆಗೆ ಆಗ್ರಹಿಸಿರುವ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದರು. ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸುವ ಜನರಿಗೆ ನಾನು ಒಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ. ಮೋದಿಯವರು ಐದಾರು ದೇಶಗಳಿಗೆ ಭೇಟಿ ನೀಡಿ, ಅಲ್ಲಿ ನಮ್ಮ ದೇಶದ ಜನರನ್ನು ಅವಮಾನಿಸಿದ ಮತ್ತು ಭಾರತದಲ್ಲಿ ಹುಟ್ಟಿದ್ದು ಪಾಪ ಎಂದು ನೀಡಿರುವ ಹೇಳಿಕೆ ಬಗ್ಗೆ ನೀವು ಉತ್ತರಿಸಬೇಕು ಎಂದು ಆಗ್ರಹಿಸಿದ್ದರು.

RELATED ARTICLES

Related Articles

TRENDING ARTICLES