Sunday, March 26, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

HomePower SpecialWow.. ಬೀಟ್ರೂಟ್ ನಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭಗಳಿವೆಯಾ?

Wow.. ಬೀಟ್ರೂಟ್ ನಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭಗಳಿವೆಯಾ?

ಬೆಂಗಳೂರು : ಹುಷಾರಿಲ್ಲ ಅಂದ್ರೆ ನಾವು ನೇರವಾಗಿ ವೈದ್ಯರ ಬಳಿ ಹೋಗುತ್ತೇವೆ. ಮನೆಯಲ್ಲಿರೋ ಹಿರಿಯರಾಗಲಿ ಅಥವಾ ವೈದ್ಯರಾಗಲಿ ನಮಗೆ ಸಲಹೆ ಕೊಡೋದು. ಚೆನ್ನಾಗಿ ನೀರು ಕುಡೀರಿ ಅಥವಾ ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ ಅಂತ. ಆದರೆ, ಬಹುತೇಕರಿಗೆ ಗೊತ್ತಿಲ್ಲ ಹಣ್ಣು ಹಾಗೂ ತರಕಾರಿ ಸೇವಿಸೋದರಿಂದ ಏನೆಲ್ಲಾ ಪ್ರಯೋಜನಗಳಿವೆ ಅಂತ. ಹಾಗಾದ್ರೆ ಇವತ್ತು ಬೀಟ್ರೂಟ್ ನ ಮಹತ್ವವನ್ನು ತಿಳಿದುಕೊಳ್ಳೋಣ.

ಬೀಟ್ರೂಟ್ ಹಾಗೂ ಅದರಿಂದ ಮಾಡುವ ಜ್ಯೂಸ್‌ನ ಸೇವಿವುದರಿಂದಾಗುವ ಈ ಪ್ರಯೋಜನಗಳನ್ನು ತಿಳಿದರೆ ನೀವು ನಿತ್ಯ ಮಿಸ್ ಮಾಡದೇ ಬೀಟ್ರೂಟ್ ಬಳಸುತ್ತೀರಿ!

  1. ಬೀಟ್ರೂಟ್ ನಲ್ಲಿ ನೈಸರ್ಗಿಕ ರಾಸಾಯನಿಕವಾಗಿರುವ ನೈಟ್ರೇಟ್ ಇರವುದರಿಂದ ರಕ್ತ ಸಂಚಾರ ಸುಧಾರಿಸುತ್ತೆ.
  2. ಬೀಟ್ರೂಟ್ ನಲ್ಲಿ ಇರುವ ನೈಟ್ರೇಟ್ ಅಂಶವು ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆ ಆಗುವ ಕಾರಣದಿಂದಾಗಿ ಇದು ರಕ್ತನಾಳಗಳನ್ನು ಹಿಗ್ಗುವಂತೆ ಮಾಡುತ್ತೆ. ಇದರಿಂದ ರಕ್ತದೊತ್ತಡ ಕಡಿಮೆ ಆಗುವುದು.
  3. ನಿತ್ಯವೂ ಬೀಟ್ರೂಟ್ ಜ್ಯೂಸ್ ಕುಡಿದರೆ ಅದು ದೈನಂದಿನ ಕಾರ್ಯಕ್ಕೆ ಶಕ್ತಿ ನೀಡುವುದು ಮತ್ತು ದೀರ್ಘಕಾಲ ದೈಹಿಕ ಚಟುವಟಿಕೆಯನ್ನು ದಣಿವಿಲ್ಲದೆ ಮಾಡಬಹುದಾಗಿದೆ.
  4. ಬೀಟ್ರೂಟ್ ನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಆಂಶವು ಹಲವಾರು ವಿಧದ ಕ್ಯಾನ್ಸರ್ ಅಪಾಯ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ.
  5. ಬೀಟ್ರೂಟ್ ನಲ್ಲಿ ಇರುವ ಫಾಲಟೆ ಅಂಶವು ಚರ್ಮದ ಆರೋಗ್ಯ ವೃದ್ಧಿಸುವುದು. ಇದು ಚರ್ಮದ ಸಮಸ್ಯೆ ಮತ್ತು ನೆರಿಗೆ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಚರ್ಮಕ್ಕೆ ಪುನರ್ಶ್ಚೇತನ ನೀಡಿ ಆರೋಗ್ಯಕಾರಿ ಮತ್ತು ಕಾಂತಿಯುತ ಚರ್ಮ ಪಡೆಯಬಹುದು.
  6. ಕೂದಲಿನ ಆರೈಕೆಗೆ ಒಣ ತಲೆಬುರುಡೆ, ಕೂದಲು ಉದುರುವಿಕೆ ಮತ್ತು ಕಾಂತಿಯುತ ಕೂದಲು ಪಡೆಯಲು ನೀವು ಬೀಟ್ರೂಟ್ ಜ್ಯೂಸ್ ಬಳಸಿ. ಬೀಟ್ರೂಟ್ ಜ್ಯೂಸ್ ಗೆ ಸ್ವಲ್ಪ ಶುಂಠಿ ಹಾಕಿ ಕುಡಿದರೆ ಆಗ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಮಾಡಬಹುದು. ಬೀಟ್ರೂಟ್ ಜ್ಯೂಸ್ ಗೆ ವಿನೇಗರ್ ಹಾಕಿದರೆ ಆಗ ಒಣ ತಲೆಬುರುಡೆ ಸಮಸ್ಯೆ ನಿವಾರಣೆ ಆಗುವುದು.
  7. ಮಧುಮೇಹ ರೋಗಕ್ಕೆ ಬೀಟ್ರೂಟ್ ತುಂಬಾ ಒಳ್ಳೆಯದು ಅರ್ಧ ಕಪ್ ಬೀಟ್ರೂಟ್ ರಸ ಸೇವಿಸಿದ ಮೇಲೆ ಊಟದ ನಂತರ ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಗಮನಾರ್ಹ ಇಳಿಕೆ ಕಂಡುಬರಲಿದೆ. ಟೈಪ್ 2 ಡಯಾಬಿಟಿಸ್ ಇರುವವರಲ್ಲಿ ಈ ಪರಿಣಾಮ ಹೆಚ್ಚು ಕಂಡುಬರಲಿದೆ.
  8. ಹೃದಯದ ಆರೋಗ್ಯ ಕಾಪಾಡುವಲ್ಲೂ ಮಹತ್ವದ ಪಾತ್ರವಹಿಸಲಿದೆ. ಬೀಟ್ರೂಟ್ ರಸ ಸೇವಿಸಿ ಕೇವಲ 30 ನಿಮಿಷಗಳಲ್ಲಿ, ತಮ್ಮ ರಕ್ತದೊತ್ತಡದ ಮಟ್ಟದಲ್ಲಿ ಗಣನೀಯ ಇಳಿಕೆ ಕಾಣಲಿದೆ.
  • ರಜಿನಿ ಸುದರ್ಶನ್, ಪವರ್ ಟಿವಿ

LEAVE A REPLY

Please enter your comment!
Please enter your name here

Most Popular

Recent Comments