ಬೆಂಗಳೂರು : ಮಹಿಳಾ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಇಸ್ಲಾಮಾಬಾದ್‌ನ ಸೆಷನ್ಸ್ ನ್ಯಾಯಾಲಯವು ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.
ತೋಷಖಾನಾ ಪ್ರಕರಣಕ್ಕೆ ಸಂಬಂಧಪಟ್ಟ ಪ್ರಕರಣದಲ್ಲಿಯೂ ಇವರನ್ನು ವಿಚಾರಣೆ ನಡೆಸಲಾಗುತ್ತದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಈಗ ಮಾರ್ಚ್ 18 ರಂದು ಲಾಹೋರ್ ಹೈಕೋರ್ಟ್‌ಗೆ ಹಾಜರಾಗಲು ಸಿದ್ಧರಾಗಿದ್ದಾರೆ.
ಲಾಹೋರ್ ಹೈಕೋರ್ಟ್ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಖಾನ್ ಹೇಳಿದ ದಿನಾಂಕದಂದು ನ್ಯಾಯಾಲಯಕ್ಕೆ ಹಾಜರಾಗುವುದಾಗಿ ಬುಧವಾರ ಭರವಸೆ ನೀಡಿದ್ದಾರೆ.
ನನ್ನನ್ನು ಜೈಲಿಗೆ ಹಾಕಿದರೆ..!
ನನ್ನನ್ನು ಜೈಲಿಗೆ ಹಾಕಿದರೆ ಅಥವಾ ಹತ್ಯೆ ಮಾಡಿದರೆ, ನೀವು ಇಮ್ರಾನ್ ಖಾನ್ ಇಲ್ಲದೆಯೂ ಹೋರಾಟವನ್ನು ಮುಂದುವರೆಸಬೇಕು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತನ್ನ ಬೆಂಬಲಿಗರಿಗೆ ಹೇಳಿದ್ದಾರೆ.
ಖಾನ್ ಬಂಧನ ಸಾಧ್ಯತೆ
ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ನಿವಾಸದ ಬಳಿ ನೆರೆದಿರುವ ಬೆಂಬಲಿಗರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಇಮ್ರಾನ್ ಖಾನ್ ಬಂಧನಕ್ಕೊಳಗಾಗುವ ಸಾಧ್ಯತೆ ಇದ್ದು, ಇದನ್ನು ತಡೆಗಟ್ಟಲು ಇಮ್ರಾನ್ ಖಾನ್ ನಿವಾಸದ ಎದುರು ಬೆಂಬಲಿಗರು ಸೇರಿದ್ದರು.
ಪಾಕ್ ಪ್ರಧಾನಿಯಾಗಿದ್ದಾಗ ಸ್ವೀಕರಿಸಿದ್ದ ಉಡುಗೊರೆಗಳನ್ನು ಮಾರಿಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ.