Saturday, November 2, 2024

ಅಬ್ಬಾ.. 4 ಸಾವಿರ ಸ್ಕ್ರೀನ್ಸ್ ನಲ್ಲಿ ‘ಕಬ್ಜ’ ಹಬ್ಬ : ಹೇಗಿರಲಿದೆ ಗೊತ್ತಾ ಉಪ್ಪಿ ಆರ್ಭಟ?

ಬೆಂಗಳೂರು : ಬೆಳ್ಳಿತೆರೆಯಲ್ಲಿ ಕಬ್ಜ ವರ್ಲ್ಡ್​ ಅನಾವರಣಗೊಳ್ಳೋಕೆ ಎರಡೇ ದಿನ ಬಾಕಿ ಉಳಿದಿದೆ. ಬರೋಬ್ಬರಿ ನಾಲ್ಕು ಸಾವಿರ ಸ್ಕ್ರೀನ್ಸ್​​ನಲ್ಲಿ ವರ್ಲ್ಡ್​ ಬಾಕ್ಸ್ ಆಫೀಸ್ ಕಬ್ಜಾಗೆ ಇಳಿಯಲಿರೋ ಇಂಡಿಯನ್ ರಿಯಲ್ ಸ್ಟಾರ್​​ಗೆ ಪ್ರೇಕ್ಷಕಪ್ರಭುಗಳು ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಆನ್​ಲೈನ್​​ ಟಿಕೆಟ್ ಬುಕಿಂಗ್ ಜೋರಾಗಿದ್ದು, ಸಿನಿಪ್ರೇಮಿಗಳು ಈಗಾಗ್ಲೇ ಟಿಕೆಟ್ಸ್ ಕಬ್ಜ ಮಾಡ್ತಿದ್ದಾರೆ.

ಹೌದು, ಕಬ್ಜ ಕ್ರೇಜ್​​ ಯಾವ ರೇಂಜ್​ಗಿದೆ ಅಂದ್ರೆ, ಸ್ವತಃ ಬಾಲಿವುಡ್ ಮಂದಿಯೇ ಹಿಂದಿಯಲ್ಲಿ ತಯಾರಾದ ಬಿಗ್ಗೆಸ್ಟ್ ಮೂವಿ ಅನ್ನೋ ರೀತಿ ಭಾವಿಸ್ತಿದ್ದಾರೆ. ಕಬ್ಜ ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್ ಸ್ಯಾಂಪಲ್​ಗಳಿಗೆ ಅಕ್ಷರಶಃ ಫಿದಾ ಆಗಿದ್ದಾರೆ. ಬರೀ ಬಾಲಿವುಡ್ ಮಂದಿಯಷ್ಟೇ ಅಲ್ಲ, ಪಕ್ಕದ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಕಬ್ಜ ಕಣ್ತುಂಬಿಕೊಳ್ಳೋಕೆ ಬಹಳ ಕಾತರರಾಗಿದ್ದಾರೆ.

ಚಂದ್ರು ಕನಸಿನ ಕೂಸು ಕಬ್ಜ

ಟ್ರೆಂಡ್ ಸೆಟ್ಟರ್ ಉಪೇಂದ್ರ ಲೀಡ್​​ನಲ್ಲಿರೋ ಕಬ್ಜದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಕೂಡ ಇರೋದ್ರಿಂದ ಸಿನಿಮಾ ಮೇಲೆ ಸಹಜವಾಗಿಯೇ ನಿರೀಕ್ಷೆಗಳು ಗರಿಗೆದರಿವೆ. ಅದರಲ್ಲೂ ನಿಬ್ಬೇರಗಾಗೋ ಅಂತಹ ಅಲ್ಟಿಮೇಟ್ ಮೇಕಿಂಗ್ ಚಿತ್ರದ ಅಸಲಿ ಸ್ಟ್ರೆಂಥ್ ಅಂದ್ರೆ ತಪ್ಪಾಗಲ್ಲ. ಪ್ಯಾಷನೇಟ್ ಡೈರೆಕ್ಟರ್ ಆರ್ ಚಂದ್ರು ಸಿನಿಮೋತ್ಸಾಹದ ಕೈಗನ್ನಡಿ, ಕನಸಿನ ಕೂಸು ಈ ಕಬ್ಜ.

ತಾಯಿ-ಮಕ್ಕಳ ಎಮೋಷನಲ್ ಬಾಂಡಿಂಗ್

ರೆಟ್ರೋ ಅಂಡರ್​ವರ್ಲ್ಡ್​ ಕಥಾನಕವಾಗಿರೋ ಕಬ್ಜದಲ್ಲಿ ಸ್ವತಂತ್ರಪೂರ್ವ ಭಾರತದ ಬ್ಯಾಕ್​ಡ್ರಾಪ್ ಕಾಣಸಿಗಲಿದೆ. ದೇಶಪ್ರೇಮದ ಕಿಚ್ಚು ಇದೆ. ತಾಯಿ-ಮಕ್ಕಳ ಎಮೋಷನಲ್ ಬಾಂಡಿಂಗ್ ಇದೆ. ಸಹೋದರರಿಬ್ಬರ ರಕ್ತಸಂಬಂಧದ ಅನುಬಂಧವಿದೆ. ಬ್ರಿಟಿಷ್ ಗವರ್ನರ್​​​, ಪ್ರಧಾನಮಂತ್ರಿಗಳ ಆಡಳಿತದ ಗತವೈಭವವಿದೆ. ಎಲ್ಲಕ್ಕಿಂತ ಮಿಗಿಲಾಗಿ ಹೈ ವೋಲ್ಟೇಜ್ ಌಕ್ಷನ್ ಸೀಕ್ವೆನ್ಸ್​​, ಮಚ್ಚು- ಲಾಂಗ್​ಗಳ ಮೊರೆತ, ಗನ್-ಪಿಸ್ತೂಲ್​ಗಳ ಗುಂಡಿನ ಕಾಳಗವಿದೆ. ಭಯಾನಕ ರಕ್ತಸಿಕ್ತ ಅಧ್ಯಾಯದ ಕರಾಳ ಕ್ಷಣಗಳ ಚಿತ್ರಣ ಕಾಣಸಿಗಲಿದೆ.

ಇದನ್ನೂ ಓದಿ : ಯುಗಾದಿಗೆ ಬ್ಯಾಡ್ ಮ್ಯಾನರ್ಸ್ ಸರ್ಪ್ರೈಸ್

ಮಾರ್ಚ್​ 17ಕ್ಕೆ ಗ್ರ್ಯಾಂಡ್ ರಿಲೀಸ್

ಕಂಪೋಸರ್ ರವಿ ಬಸ್ರೂರು, ಆರ್ಟ್ ಡೈರೆಕ್ಟರ್ ಶಿವಕುಮಾರ್, ಸಿನಿಮಾಟೋಗ್ರಾಫರ್ ಎ.ಜೆ ಶೆಟ್ಟಿ ಅಂತಹ ಘಟಾನುಘಟಿ ಟೆಕ್ನಿಷಿಯನ್​ಗಳ ಕೈಚಳಕವಿರೋ ಕಬ್ಜ ರಿಲೀಸ್​ಗೆ ಇನ್ನೆರಡೇ ದಿನ ಬಾಕಿಯಿದೆ. ಮುಂಬೈ, ಚೆನ್ನೈ, ಹೈದ್ರಾಬಾದ್ ಸುತ್ತಿ ಬಂದಿರೋ ಕಬ್ಜ ಟೀಂ, ಎಲ್ಲೆಡೆ ಸಖತ್ ಹವಾ ಇಟ್ಟು, ಹೈಪ್ ಕ್ರಿಯೇಟ್ ಮಾಡಿದೆ. ವಿಶ್ವದಾದ್ಯಂತ ಇದೇ ಮಾರ್ಚ್​ 17ಕ್ಕೆ ಕಬ್ಜ ಗ್ರ್ಯಾಂಡ್ ಆಗಿ ತೆರೆಗಪ್ಪಳಿಸಲಿದೆ.

ಆಂಧ್ರ- ತೆಲಂಗಾಣದಲ್ಲಿ ಸುಧಾಕರ್ ರೆಡ್ಡಿ, ಹಿಂದಿಯಲ್ಲಿ ಆನಂದ್ ಪಂಡಿತ್, ತಮಿಳಿನಲ್ಲಿ ಲೈಕಾ ಪ್ರೊಡಕ್ಷನ್ಸ್ ಹೀಗೆ ದೊಡ್ಡ ದೊಡ್ಡ ಡಿಸ್ಟ್ರಿಬ್ಯೂಟರ್​​ಗಳೇ ಕಬ್ಜ ಸಿನಿಮಾದ ರೈಟ್ಸ್​ನ ಕಬ್ಜ ಮಾಡಿರೋದ್ರಿಂದ, ರಿಲೀಸ್ ನೆಕ್ಸ್ಟ್ ಲೆವೆಲ್​ಗೆ ಇರಲಿದೆ. ಅಲ್ಲದೆ, ಆನ್​ಲೈನ್ ಟಿಕೆಟ್ ಬುಕಿಂಗ್ ಈಗಾಗ್ಲೇ ಶುರುವಾಗಿದ್ದು, ಮೈಸೂರಿನ ಡಿಆರ್​ಸಿ ಹಾಗೂ ಬೆಂಗಳೂರಿನ ಪಿವಿಆರ್ ಒರಾಯನ್​​ನಲ್ಲಿ ಜನ ಮುಗಿಬಿದ್ದು ಟಿಕೆಟ್ಸ್​​ನ ಕಾಯ್ದಿರಿಸುತ್ತಿದ್ದಾರೆ.

ಒಟ್ಟಾರೆ ಸಾವಿರ ಕೋಟಿ ಬಾಕ್ಸ್ ಆಫೀಸ್ ಲೆಕ್ಕಾಚಾರಗಳು ನಡೆಯುತ್ತಿದ್ದು, ಕೆಜಿಎಫ್, ಕಾಂತಾರ ನಂತ್ರ 500 ಕೋಟಿ, ಸಾವಿರ ಕೋಟಿ ಕ್ಲಬ್​ಗೆ ಸೇರುವ ಸೂಚನೆ ಸಿಕ್ಕಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES