Sunday, January 19, 2025

Finish Modi : ‘ಪ್ರಧಾನಿ ಮೋದಿಯನ್ನು ಮುಗಿಸಿ’ ಎಂದ ಕಾಂಗ್ರೆಸ್ ನಾಯಕ

ಬೆಂಗಳೂರು : ಉದ್ಯಮಿ ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಸುಖ್ವಿಂದರ್ ಸಿಂಗ್ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪ್ರತಿಪಕ್ಷಗಳ ಒಗ್ಗಟ್ಟಿಗೆ ಕರೆ ನೀಡಿರುವ ಅವರು, ನಿಮ್ಮ ಜಗಳವನ್ನು ಮುಗಿಸಬೇಕು. ಪ್ರಧಾನಿ ಮೋದಿ ಅವರನ್ನು ಕೊನೆಗಾಣಿಸುವಂತೆ ಯೋಚನೆ ಮಾಡಬೇಕು ಎಂದು ವಿವಾದಾತ್ಮಕ ಹೇಳಿಕೆ ಹರಿಬಿಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಗಿಸಿದರೆ ಭಾರತ ಉದ್ದಾರವಾಗುತ್ತದೆ. ಮೋದಿ ಅವರಿಗೆ ದೇಶಭಕ್ತಿಯ ಅರ್ಥವೇ ಗೊತ್ತಿಲ್ಲ. ಮೋದಿಯನ್ನು ಮುಗಿಸಿದರೆ ಅದಾನಿಯೂ ಕೊನೆಯಾಗುತ್ತಾರೆ ಎಂದು ಸುಖ್ವಿಂದರ್ ಸಿಂಗ್ ಹೇಳಿದ್ದಾರೆ.

ಮೋದಿ ಸಮಾಧಿ ನಿರ್ಮಿಸುವ ಕನಸು

ಪ್ರಧಾನಿ ಮೋದಿ ರಸ್ತೆ, ವಸತಿ, ಕೃಷಿಕರ ಅಭಿವೃದ್ಧಿಗೆ ಶ್ರಮಿಸುತ್ತಿದ್ದರೆ, ಕಾಂಗ್ರೆಸ್ ಮೋದಿಯ ಸಮಾಧಿ ಅಗೆಯಲು ಕನಸು ಕಾಣುತ್ತಿದೆ. ಇದಕ್ಕೆಲ್ಲಾ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಧಾರವಾಡದಲ್ಲಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟಿದ್ದರು.

ಕಾಂಗ್ರೆಸ್ ಕನಸು ಎಂದೂ ನನಸಾಗುವುದಿಲ್ಲ

ಮೋದಿಯ ಹಿಂದೆ ದೇಶದ ಜನರ ಆಶರ‍್ವಾದ ನನ್ನ ರಕ್ಷಾ ಕವಚವಾಗಿದೆ. ಶೋಷಿತ ರ‍್ಗಗಳ ಆಶರ‍್ವಾದ ನನ್ನ ಜೊತೆಯಿದೆ. ಮೋದಿಯನ್ನು ಎಂದೂ ಇವರು ಹಿಂದೆ ತಿರುಗಿ ನೋಡಲು ಬಿಡುವುದಿಲ್ಲ ಅನ್ನುವ ನಂಬಿಕೆ ಇದೆ. ಸಮಾಧಿ ಸೇರಿಸುವ ಕಾಂಗ್ರೆಸ್ ಕನಸು ಎಂದೂ ನನಸಾಗುವುದಿಲ್ಲ ಎಂದು ಕಿಡಿಕಾರಿದ್ದರು.

RELATED ARTICLES

Related Articles

TRENDING ARTICLES