Wednesday, May 22, 2024

ನೀವು ಕೇವಲ ಪ್ರಧಾನಿ, ದೇಶವೂ ಅಲ್ಲ.. ದೇವರೂ ಅಲ್ಲ : ಕಾಂಗ್ರೆಸ್ ನಾಯಕ ತಿರುಗೇಟು

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಫೇಡಾ ನಗರಿಯಲ್ಲಿ ಕಾಂಗ್ರೆಸ್ ಆಡಳಿತದ ಬಗ್ಗೆ ವಾಗ್ದಾಳಿ ನಡೆಸಿರುವುದಕ್ಕೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ.

ನಿಮ್ಮ ನೀತಿಗಳ ಬಗೆಗಿನ ಟೀಕೆ ದೇಶದ ಟೀಕೆಯಾಗಿ ಮಾರ್ಪಟ್ಟಿದ್ದು ಯಾವಾಗ? ನೀವು ಕೇವಲ ಪ್ರಧಾನಿ, ನೀವು ದೇಶವೂ ಅಲ್ಲ, ದೇವರೂ ಅಲ್ಲ, ಸೃಷ್ಟಿಕರ್ತನೂ ಅಲ್ಲ ಎಂದು ಕಾಂಗ್ರೆಸ್​ ನಾಯಕ ಪವನ್​ ಖೇರಾ ಹೇಳಿದ್ದಾರೆ.

ಧಾರವಾಡದಲ್ಲಿ ಭಾನುವಾರ ನಡೆದಿದ್ದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಟೀಕೆ ಮಾಡಿದ್ದು, ಇದಕ್ಕೆ, ಕಾಂಗ್ರೆಸ್‌ ಇದೀಗ ತಿರುಗೇಟು ನೀಡಿದ್ದಾರೆ.

ಪ್ರಜಾಪ್ರಭುತ್ವವು ‘ಕ್ರೂರ ದಾಳಿ’ಗೆ ಒಳಗಾಗುತ್ತಿದೆ ಎಂಬ ರಾಹುಲ್ ಗಾಂಧಿಯವರ ಭಾರತದ ಸಂಪ್ರದಾಯ ಮತ್ತು ಅದರ ನಾಗರಿಕರಿಗೆ ಮಾಡಿದ ಅವಮಾನವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.

ಇದನ್ನೂ ಓದಿ : ಫೇಡಾ ನಗರಿಯಲ್ಲಿ ವಿಪಕ್ಷಗಳಿಗೆ ಪ್ರಧಾನಿ ಮೋದಿ ಟಾಂಗ್

ಪ್ರಜಾಪ್ರಭುತ್ವದ ಮೇಲೆ ಪ್ರಶ್ನೆ

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ಪ್ರಧಾನಿಯವರ ನೀತಿಗಳ ಟೀಕೆ ಯಾವಾಗಿನಿಂದ ದೇಶದ ಟೀಕೆಯಾಗುತ್ತಿದೆ ಎಂದು ಕೇಳಿದೆ. ಬಸವೇಶ್ವರರ ಪ್ರತಿಮೆ ಲಂಡನ್ ನಲ್ಲಿದೆ. ಆದರೆ, ಅದೇ ಲಂಡನ್ ನಲ್ಲಿ ಭಾರತದ ಪ್ರಜಾಪ್ರಭುತ್ವದ ಮೇಲೆ ಪ್ರಶ್ನೆಗಳು ಎದ್ದಿರುವುದು ದುರದೃಷ್ಟಕರ.

ಪ್ರಜಾಪ್ರಭುತ್ವ ಸಂಪ್ರದಾಯಕ್ಕೆ ಧಕ್ಕೆ

ನಮ್ಮ ಶತಮಾನಗಳ ಇತಿಹಾಸದಿಂದ ಭಾರತದ ಪ್ರಜಾಪ್ರಭುತ್ವದ ಬೇರುಗಳನ್ನು ಪೋಷಿಸಲಾಗಿದೆ. ಈ ಜಗತ್ತಿನಲ್ಲಿ ಯಾವುದೇ ಶಕ್ತಿಯು ಭಾರತದ ಪ್ರಜಾಪ್ರಭುತ್ವ ಸಂಪ್ರದಾಯಗಳಿಗೆ ಧಕ್ಕೆ ತರಲು ಸಾಧ್ಯವಿಲ್ಲ. ಇದರ ಹೊರತಾಗಿಯೂ ಕೆಲವರು ಅದನ್ನು ಕಟಕಟೆಯಲ್ಲಿ ನಿಲ್ಲುವಂತೆ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಧಾರವಾಡದಲ್ಲಿ ಹೇಳಿದ್ದರು.

RELATED ARTICLES

Related Articles

TRENDING ARTICLES