Monday, December 23, 2024

ಆಸ್ಕರ್ ಪ್ರಶಸ್ತಿ ಏನೆಲ್ಲಾ ಒಳಗೊಂಡಿರುತ್ತೆ? ಇಲ್ಲಿದೆ ಫುಲ್ ಡೀಟೈಲ್ಸ್

ಬೆಂಗಳೂರು : ಆಸ್ಕರ್ ಪ್ರಶಸ್ತಿ ಏನೆಲ್ಲಾ ಒಳಗೊಂಡಿರುತ್ತೆ..? ಅದರ ವೆಯ್ಟೇಜ್ ಏನು ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ವಿಶ್ವ ದರ್ಜೆಯ ಸಿನಿಮಾಗಳಿಗೆ ನೀಡೋ ಮೋಸ್ಟ್ ಪ್ರೆಸ್ಟೀಜಿಯಸ್ ಅವಾರ್ಡ್​ನಲ್ಲಿ ಏನಿರುತ್ತೆ ಅನ್ನೋದ್ರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇಡೀ ಭಾರತೀಯ ಚಿತ್ರರಂಗ ಆಸ್ಕರ್ ವಿಜೇತರಿಗೆ ಶುಭ ಹಾರೈಸಿದ್ದಾರೆ. ಹಾಗಿದ್ರೆ, ಈ ಪ್ರಶಸ್ತಿ ಏನೆಲ್ಲಾ ಸ್ಪೆಷಲ್ ಹೊಂದಿದೆ ಎಂಬ ಬಗ್ಗೆ ನೋಡೋಣ ಬನ್ನಿ.

ಹೌದು, ಆಸ್ಕರ್ ಪ್ರಶಸ್ತಿ ವಿಜೇತರಿಗೆ ನ್ಯಾಷನಲ್ ಅವಾರ್ಡ್​ಗಳ ರೀತಿ ನಗದು ಬಹುಮಾನ ಇರುವುದಿಲ್ಲ. ಹದಿಮೂರುವರೆ ಇಂಚಿನ ಗೋಲ್ಡನ್ ಪ್ರತಿಮೆ ಸಿಗಲಿದೆ. ಆದ್ರೆ ಅದು ಪ್ಯೂರ್ ಗೋಲ್ಡ್ ಅಲ್ಲ. ಗೋಲ್ಡ್ ಕೋಟೆಡ್​ ಪ್ರತಿಮೆ. ಅದನ್ನು ನ್ಯೂಯಾರ್ಕ್​ನ ಪಾಲಿಕ್ ಟಾಲಿಕ್ಸ್ ಫೈನ್ ಆರ್ಟ್​ ಫೌಂಡ್ರಿಯಿಂದ ತಯಾರಿಸಿರುತ್ತಾರೆ. ಅದನ್ನು ಆಸ್ಕರ್ ಪಡೆದ ವಿಜೇತರು ಮಾರಬೇಕು ಅಂದಾಗ ಸಿಗುವ ಹಣ ಕೇವಲ ಹತ್ತು ಡಾಲರ್ ಮಾತ್ರ.

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವಿಜೇತರಿಗೆ ಇಷ್ಟೇನಾ ಅಂತ ಹುಬ್ಬೇರಿಸಬೇಡಿ. ವಿನ್ನರ್ಸ್​, ನಾಮಿನೀಸ್ ಹಾಗೂ ಪ್ರೆಸೆಂಟರ್ಸ್​ಗೆ ಬಾಲ್ ಪಾರ್ಟಿ ಸಿಗಲಿದೆ. ಅಲ್ಲಿ ಖ್ಯಾತ ಆರ್ಟಿಸ್ಟ್​ಗಳ ಲೈವ್ ಪರ್ಫಾಮೆನ್ಸ್ ಜೊತೆ ಇಂಟರ್​ನ್ಯಾಷನಲ್ ಮಾಸ್ಟರ್ ಶೆಫ್​​ಗಳ ವಿಶೇಷ ಖಾದ್ಯಗಳು, ಮಧ್ಯ ಇರಲಿದೆ. ಇದಕ್ಕೆ ಇಷ್ಟೊಂದು ಹೈಪ್ ಕೊಡುತ್ತಾರಾ? ಅಂತ ಊಹಿಸಬೇಡಿ. ವಿಜೇತರಿಗೆ ಒಂದು ಸ್ವ್ಯಾಗ್​ಬ್ಯಾಗ್ ಗಿಫ್ಟ್ ಆಗಿ ಸಿಗಲಿದೆ.

ಸ್ವ್ಯಾಗ್ ಬ್ಯಾಗ್ ಅಂದ್ರೆ ಏನು?

ಸ್ವ್ಯಾಗ್ ಬ್ಯಾಗ್ ಅಂದ್ರೆ ಏನು..? ಅದರಲ್ಲಿ ಏನೆಲ್ಲಾ ಇರುತ್ತೆ? ಇದೊಂದು 2 ಸಾವಿರ ಡಾಲರ್ ಮೌಲ್ಯದ ಬ್ಯಾಗ್. ಇಂಡಿಯನ್ ಕರೆನ್ಸಿ ಪ್ರಕಾರ ಸುಮಾರು ಒಂದು ಲಕ್ಷ ಅರವತ್ತ ನಾಲ್ಕು ಸಾವಿರ ರೂ. ಅದರಲ್ಲಿ ಇಬ್ಬರಿಗೆ ಹನ್ನೆರಡು ದಿನಗಳ ತಾಂಜೇನಿಯಾ ಟೂರ್ ಕೂಪನ್ಸ್ ಸಿಗಲಿದೆ. ಗೋಲ್ಡರ್ ಡೋರ್ ಸ್ಪಾನಲ್ಲಿ ಒಂದು ವಾರ ತಂಗಲು ಅವಕಾಶ ಇರೂ ಕೂಪನ್ಸ್ ಇರಲಿದೆ. ಡಿಎನ್​ಎ ಕಿಟ್ ಹಾಗೂ ಕುವೈಗೆ ಆರು ರಾತ್ರಿ ಏಳು ದಿನಗಳ ಟೂರ್ ಕೂಪನ್ಸ್ ಇರಲಿದೆ.

ಹೆಚ್ಚಾಗಲಿದೆ ಸ್ಟಾರ್​ಡಮ್- ಫ್ಯಾನ್ ಲೋಯಿಂಗ್

ಇದೆಲ್ಲವೂ ಒಂದು ಮ್ಯಾಟರಾ ಗುರೂ ಅಂತ ಮೂಗು ಮುರಿಯೋ ಹಾಗಿಲ್ಲ. ಕಾರಣ ಆಸ್ಕರ್ ವಿಜೇತರ ನಸೀಬು ಬದಲಾಗಲಿದೆ. ಅವರ ಸಿನಿಮಾಗಳ ಮೌಲ್ಯ ಹೆಚ್ಚಲಿದೆ. ಸ್ಟಾರ್​ಡಮ್, ಫ್ಯಾನ್ ಲೋಯಿಂಗ್, ಅವಕಾಶಗಳು ಹೀಗೆ ಎಲ್ಲವೂ ನಿರೀಕ್ಷೆಗೆ ಮೀರಿದ ರೇಂಜ್​ಗೆ ಸಿಗಲಿವೆ.

ಪ್ರಧಾನಿ ಮೋದಿ ಶುಭಾಶಯ

ದೇಶದ ಗರಿಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದು, ಇಡೀ ವಿಶ್ವ ನಮ್ಮ ಇಂಡಿಯನ್ ಸಿನಿದುನಿಯಾದತ್ತ ತಿರುಗಿ ನೋಡುವಂತೆ ಮಾಡಿದ ಗರಿಮೆ ತ್ರಿಬಲ್ ಆರ್ ಹಾಗೂ ದಿ ಎಲಿಫೆಂಟ್ ವ್ಹಿಸ್ಪರರ್ಸ್​ಗೆ ಸಲ್ಲುತ್ತೆ. ಹಾಗಾಗಿ, ಆಸ್ಕರ್ ಪ್ರಶಸ್ತಿ ಪಡೆದ ವಿಜೇತರಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.

ಗಣ್ಯರಿಂದ ಶುಭಾಶಯಗಳ ಮಹಾಪೂರ

ಇನ್ನೂ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಹ ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಎ.ಆರ್. ರಹಮಾನ್, ಅನಿರುದ್ ರವಿಚಂದರ್, ಡಿಕೆ, ಅಣ್ಣಾಮಲೈ, ಕಾರ್ತಿ, ಪ್ರಭುದೇವ, ಪ್ರಣೀತಾ, ರಾಘವ ಲಾರೆನ್ಸ್, ರಾಣಾ ದಗ್ಗುಭಾಟಿ, ರಶ್ಮಿಕಾ ಮಂದಣ್ಣ, ಸೂರ್ಯ, ಸಚಿನ್ ತೆಂಡೂಲ್ಕರ್, ರಾಕಿಭಾಯ್ ಯಶ್ ಹೀಗೆ ನೂರಾರು ಮಂದಿ ತಾರೆಯರು, ಪೊಲಿಟಿಕಲ್ ಲೀಡರ್ಸ್​ನಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಒಟ್ಟಾರೆ, ರಾಜಮೌಳಿ ಅವರ ವಿಷನ್, ಸಿನಿಮಾ ಪ್ಯಾಷನ್ ಅನನ್ಯ. ಸಿನಿಮಾದಿಂದ ಸಿನಿಮಾಗೆ ಅವರ ಔಟ್​ಪುಟ್ ನಿಜಕ್ಕೂ ಮೈಂಡ್ ಬ್ಲೋಯಿಂಗ್. ಈ ಬಾರಿ ಗ್ಲೋಬಲ್ ಸಿನಿಮಾ ಮಾಡ್ತಿರೋ ರಾಜಮೌಳಿ, ಮಹೇಶ್ ಬಾಬು ಜೊತೆ ಹಾಲಿವುಡ್ ಸ್ಟ್ಯಾಂಡರ್ಡ್​ ಮೂವಿಯನ್ನ ಸುಮಾರು 850 ಕೋಟಿ ಭಾರೀ ವೆಚ್ಚದಲ್ಲಿ ಕಟ್ಟಿ ಕೊಡಲಿದ್ದಾರೆ. ಅವರ ಆ ಮಹತ್ವದ ಕನಸು ನನಸಾಗಲಿ ಎನ್ನುವುದು ಅಭಿಮಾನಿಗಳ ಬಯಕೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES