Sunday, December 22, 2024

ಸರ್.. ನನ್ನ ಹೆಂಡ್ತಿ ಜಾಸ್ತಿ ನಿದ್ರೆ ಮಾಡ್ತಾಳೆ : ಪತಿಯಿಂದಲೇ ಪೊಲೀಸರಿಗೆ ದೂರು

ಬೆಂಗಳೂರು : ಸರ್, ನನ್ನ ಹೆಂಡ್ತಿ ಜಾಸ್ತಿ ನಿದ್ರೆ ಮಾಡ್ತಾಳೆ. ನಿತ್ಯ ಪತ್ನಿ ತಡವಾಗಿ ಎದ್ದೇಳುತ್ತಾಳೆ. ಅವಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಪತಿಯೇ ತನ್ನ ಹೆಂಡ್ತಿ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಅಪರೂಪದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಹೌದು, ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಮ್ರಾನ್ ಖಾನ್ ಎಂಬ ವ್ಯಕ್ತಿ ತನ್ನ ಪತ್ನಿ  ವಿರುದ್ಧ ದೂರು ನೀಡಿರುವ ಪತಿ.

ಸರ್, ನನ್ನ ಪತ್ನಿ ರಾತ್ರಿ ಮಲಗಿದ್ರೆ ಮಧ್ಯಾಹ್ನ 12.30 ಗಂಟೆಯವರೆಗೂ ನಿದ್ದೆ ಮಾಡುತ್ತಾಳೆ. ಸಂಜೆ 5.30‌ಗಂಟೆಗೆ ಮಲಗಿದ್ರೆ ರಾತ್ರಿ 9.30 ಕ್ಕೆ ಎದ್ದೇಳುತ್ತಾಳೆ. ಕಳೆದ ಐದು ವರ್ಷದಿಂದಲೂ ಇದೇ ರೀತಿ ಮಾಡುತ್ತಿದ್ದಾಳೆ ಎಂದು ಪತ್ನಿ ವಿರುದ್ಧ ನೀಡಿರುವ ದೂರಿನಲ್ಲಿ ಕಮ್ರಾನ್ ಉಲ್ಲೇಖಿಸಿದ್ದಾರೆ.

ಅಡುಗೆ ಕೂಡ ಮಾಡಲ್ಲ ಸರ್

ಇಷ್ಟೇ ಅಲ್ಲ ಸರ್, ನನ್ನ ಪತ್ನಿ ಅಡುಗೆ ಕೂಡ ಮಾಡುವುದಿಲ್ಲ. ನನ್ನ ಅಮ್ಮನೇ ಅಡುಗೆ ಮಾಡಿ ಬಡಿಸಬೇಕು. ನಾನು ಪ್ರಶ್ನಿಸದೆ ಸುಮ್ಮನಿದ್ದೆ. ಆದರೆ ಈಗ ಕುಟುಂಬಸ್ಥರಿಂದ ಹಲ್ಲೆ ನಡೆಸಿದ್ದಾಳೆ ಎಂದು ಕಮ್ರಾನ್ ಪೊಲೀಸರ ಬಳಿ ತನ್ನ ಅಳಲು ತೋಡಿಕೊಂಡಿದ್ದಾರೆ.

ತನಗೆ ಪತ್ನಿಯಿಂದ ಹಾಗೂ ಆಕೆಯ ಕುಟುಂಬದಿಂದ ನರಕಯಾತನೆಯಾಗಿದೆ. ಹೀಗಾಗಿ, ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ಮೇಲೆ ಕ್ರಮ ಕೈಗೊಳ್ಳಿ ಎಂದು ಪತ್ನಿ ಸೇರಿದಂತೆ ನಾಲ್ವರ ಮೇಲೆ ಕಮ್ರಾನ್ ಖಾನ್  ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

RELATED ARTICLES

Related Articles

TRENDING ARTICLES