Friday, November 22, 2024

ಹೀಗಿರಲಿದೆ ಕರುನಾಡಲ್ಲಿ ಪ್ರಧಾನಿ ಮೋದಿ ಮೇನಿಯಾ..!

ಬೆಂಗಳೂರು : ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇ ಉದ್ಘಾಟನೆ, ಮಂಡ್ಯ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆಗೆ ಕ್ಷಣಗಣನೆ ಶುರುವಾಗಿದೆ. ಪ್ರಧಾನಿ ನರೇಮದ್ರ ಮೋದಿ ಇಂದು ರಾಜ್ಯದಲ್ಲಿ ಹೊಸ ಆರಂಭಕ್ಕೆ ಮುನ್ನುಡಿ ಬರೆಯಲಿದ್ದಾರೆ.

ಮೋದಿ ಆಗಮನದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಘಟಕ ಫುಲ್ ಜೋಶ್ ನಲ್ಲಿದೆ. ಮುಮಬರುವ ವಿಧಾನಸಭಾ ಚುನಾವಣೆಯನ್ನೇ ಗುರಿಯಾಗಿಸಿಕೊಂಡು ಪ್ರಧಾನಿ ಮೋದಿ, ಸುಮಾರು 16,000 ಕೋಟಿ ರೂ. ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.

ಇಂದು (ಭಾನುವಾರ) ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮೋದಿಯವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಬಳಿಕ ಮಧ್ಯಾಹ್ನ 3.15ಕ್ಕೆ ಹುಬ್ಬಳ್ಳಿ-ಧಾರವಾಡದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.

ಇದನ್ನೂ ಓದಿ : ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ

ಹೀಗಿರುತ್ತೆ ಪ್ರಧಾನಿ ಮೋದಿ ಪ್ರವಾಸ

  • ಬೆಳಿಗ್ಗೆ 11.20 ಕ್ಕೆ ಮಂಡ್ಯಕ್ಕೆ ಆಗಮಿಸಲಿರುವ ಮೋದಿ
  • ಪಿಇಎಸ್ ಕಾಲೇಜು ಮೈದಾನಕ್ಕೆ  ಹೆಲಿಕಾಪ್ಟರ್ ಮೂಲಕ ಆಗಮನ
  • ಮಂಡ್ಯದಲ್ಲಿ ಭರ್ಜರಿ ರೋಡ್ ಶೋ
  • ಮಂಡ್ಯ ನಗರದಲ್ಲಿ 1.8 ಕಿ.ಮೀ ರೋಡ್ ಶೋ
  • ಬೆಳಿಗ್ಗೆ 11.25 ಮಂಡ್ಯದ ಪ್ರವಾಸಿ ಮಂದಿರದಿಂದ ರೋಡ್ ಶೋ ಆರಂಭ
  • ಬೆಳಿಗ್ಗೆ 11.30 ಕ್ಕೆ ಸಂಜಯ್ ವೃತ್ತಕ್ಕೆ ಆಗಮನ
  • ಬೆಳಿಗ್ಗೆ 11.33 ಕ್ಕೆ ಮಹಾವೀರ್ ವೃತ್ತಕ್ಕೆ ಎಂಟ್ರಿ
  • ಬೆಳಿಗ್ಗೆ 11.37 ಕ್ಕೆ ನಂದ ವೃತ್ತಕ್ಕೆ ಮೋದಿ ರೋಡ್ ಶೋ ಎಂಟ್ರಿ
  • ಬೆಳಿಗ್ಗೆ 11.40 ಕ್ಕೆ ಅಮರಾವತಿ ಬಳಿ ಎಕ್ಸ್ ಪ್ರೆಸ್ ಹೈವೆಗೆ ಎಂಟ್ರಿ
  • ನೂತನ ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ಲೋಕಾರ್ಪಣೆ
  • ಮಧ್ಯಾಹ್ನ 11.40 ಕ್ಕೆ ಹೆದ್ದಾರಿ ಲೋಕಾರ್ಪಣೆ
  • ಮಧ್ಯಾಹ್ನ 12.15 ರಿಂದ 1.15 ರವರೆಗೆ ವೇದಿಕೆ ಸಮಾರಂಭ
  • ಮದ್ದೂರಿನ ಗೆಜ್ಜಲಗೆರೆ ಕಾಲೋನಿ ಬಳಿ ಬೃಹತ್ ವೇದಿಕೆ
  • 50 ಮೀಟರ್ ಎಕ್ಸ್ ಪ್ರೆಸ್ ಹೈವೆಯಲ್ಲಿ ನಡೆಯಲಿರುವ ಮೋದಿ
  • ಹೈವೆ ಲೋಕಾರ್ಪಣೆ ನಂತರ ಗಜ್ಜಲೆಗೆರೆ ವೇದಿಕೆಯತ್ತ ಪ್ರಯಾಣ
  • ಗಜ್ಜಲೆಗೆರೆ ಬಳಿ‌ ನಿರ್ಮಾಣವಾಗಿರುವ ಹೆಲಿಪ್ಯಾಡ್ ನಿಂದ ನಿರ್ಗಮನ

RELATED ARTICLES

Related Articles

TRENDING ARTICLES