Sunday, December 22, 2024

ಪ್ರಧಾನಿ ಮೋದಿ ಮೇನಿಯಾ : ಜನರಿಗೆ ಏನೆಲ್ಲಾ ಊಟದ ವ್ಯವಸ್ಥೆಯಿದೆ ಗೊತ್ತಾ?

ಬೆಂಗಳೂರು  : ಮೈಸೂರು – ಬೆಂಗಳೂರು ದಶಪಥ ಹೆದ್ದಾರಿ ಲೋಕಾರ್ಪಣೆಗೆ ಕ್ಷಣಗಣನೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯದಲ್ಲಿ ಹಲ್ ಚಲ್ ಎಬ್ಬಿಸಲಿದ್ದಾರೆ.

ಪ್ರಧಾನಿ ಮೋದಿ ಅವರು ಕೆಲವೇ ಕ್ಷಣಗಳಲ್ಲಿ ಸಕ್ಕರೆ ನಾಡು ಮಂಡ್ಯಕ್ಕೆ ಆಗಮಿಸಲಿದ್ದಾರೆ. ಹೀಗಾಗಿ, ಮಂಡ್ಯ ಜಿಲ್ಲಾ ಬಿಜೆಪಿ ಮೋದಿ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದೆ.

ಇನ್ನೂ, ಸಮಾರಂಭಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರಿಗೂ ಸಮಾರಂಭದ ಜಾಗದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು, ಬೆಂಗಳೂರು – ಮೈಸೂರು ದಶಪಥ ರಸ್ತೆಯ ಲೋಕಾರ್ಪಣೆ ಮಾಡಿ ಲಕ್ಷಾಂತರ ಜನರ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ವೇಳೆ ಕಾರ್ಯಕ್ರಮಕ್ಕೆ ಬರುವವರಿಗಾಗಿಯೇ ವಿಶೇಷವಾಗಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಇದನ್ನೂ ಓದಿ : ಬೆಂಗಳೂರು-ಮೈಸೂರು ರಸ್ತೆ ಕ್ರೆಡಿಟ್ ಯಾರಿಗೆ? : ಸಿಎಂ ಕೊಟ್ಟ ಉತ್ತರ ಏನು?

600 ಬಾಣಸಿಗರಿಂದ ಊಟ ತಯಾರಿ

ಒಟ್ಟು 600 ಬಾಣಸಿಗರು ಊಟವನ್ನು ಸಿದ್ಧಪಡಿಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ಸುಮಾರು ಒಂದೂವರೆ ಲಕ್ಷ ಜನರು ಭಾಗಿಯಾಗುವ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಅವರೆಲ್ಲರಿಗಾಗಿ 60 ಕ್ವಿಂಟಲ್ ಬಾತ್, 25 ಕ್ವಿಂಟಲ್ ಮೊಸರನ್ನ ಹಾಗೂ (ಗೋಧಿ ಪಾಯಸ) ಸಿಹಿಯನ್ನು ಸಿದ್ಧಪಡಿಸಿದ್ದಾರೆ. 250 ಕ್ವಿಂಟಲ್ ಅಕ್ಕಿ 50 ಕ್ವಿಂಟಲ್ ತರಕಾರಿ ಬಳಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

250 ಕೌಂಟರ್‌ನಲ್ಲಿ ಜನರಿಗೆ ಊಟ

ಸಮಾರಂಭಕ್ಕೆ ಬರುವ ಜನರಿಗೆ ಊಟ ತಯಾರಿ ಮಾಡಿ ಬಡಿಸುವ ಜವಾಬ್ದಾರಿಯನ್ನು ಬೆಂಗಳೂರಿನ ಕ್ಯಾಟರಿಂಗ್‌ನವರಿಗೆ ವಹಿಸಲಾಗಿದೆ. ಈಗಾಗಲೇ, 250 ಕೌಂಟರ್‌ ಸಿದ್ಧತೆ ಮಾಡಲಾಗಿದ್ದು, ಇಲ್ಲಿಯೇ ಜನರಿಗೆ ಊಟ ಬಡಿಸಲಾಗುತ್ತದೆ. ಒಟ್ಟು ಮೂರೂವರೆ ಲಕ್ಷ ಜನರಿಗೆ ಊಟ ಬಡಿಸಲು ಆಹಾರ ಸಾಮಾಗ್ರಿಗಳನ್ನು ಸಂಗ್ರಹಿಸಲಾಗಿದೆ.

RELATED ARTICLES

Related Articles

TRENDING ARTICLES