Wednesday, January 22, 2025

ಜನರ ಶ್ರೇಯೋಭಿವೃದ್ಧಿಗೆ ಕೃಷ್ಣಪ್ಪ ಕಂಕಣಬದ್ದ : ಸಿಎಂ ಬೊಮ್ಮಾಯಿ

ಬೆಂಗಳೂರು: ಕೃಷ್ಣಪ್ಪ ಅವರು ನಿಮ್ಮ ಜೊತೆಗೆ ಇದ್ದು, ನಿಮ್ಮ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಕಂಕಣಬದ್ದವಾಗಿ ಕೆಲಸ ಮಾಡುವ ಜನೋಪಯೋಗಿ ಶಾಸಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ.

ಬೆಂಗಳೂರಿನ ಉತ್ತರಹಳ್ಳಿಯ ಊರು ಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನೋಪಯೋಗಿ ಶಾಸಕರಿಗೆ ನಿಮ್ಮ ಆಶೀರ್ವಾದ ಇರಲಿ ಎಂದು ತಿಳಿಸಿದ್ದಾರೆ.

ಕೃಷ್ಣಪ್ಪ ಅವರು ಜನಪ್ರಿಯ ಶಾಸಕರು ಅಂತ ನಾನು ಹೇಳಿಲ್ಲ. ಯಾಕೆ ಅಂತ ಕೇಳಿದರೆ, ಏನು ಕೆಲಸ ಮಾಡದೇ ಜನಪ್ರಿಯ ಶಾಸಕರು ಅಂತ ಹೇಳಿಕೊಂಡು ಮೇಲೆ ಹೋದವರು ತುಂಬ ಜನರು ಇದ್ದಾರೆ. ಜನರಿಗೆ ಉಪಯೋಗ ಆಗುವ ಕೆಲಸ ಮಾಡುವ ಶಾಸಕ ಕೃಷ್ಣಪ್ಪರು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬಿಜೆಪಿ 140ಕ್ಕೂ ಹೆಚ್ಚು ಸ್ಥಾನ ಪಡೆಯುತ್ತೆ 

ಜನರ ಕಷ್ಟಗಳನ್ನು, ಸಮಸ್ಯೆಗಳನ್ನು ತಿಳಿದುಕೊಂಡು ಬಗೆಹರಿಸುವ ಶಾಸಕರು. ಸದಾ ಕ್ರಿಯಾಶೀಲವಾಗಿ ನಿಮ್ಮ ಹಿತರಕ್ಷಣೆ ಮಾಡುವ ಶಾಸಕ. ಅದಕ್ಕೆ ಜನೋಪಯೋಗಿ ಶಾಸಕ ಎಂದು ಹೇಳಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಕೃಷ್ಣಪ್ಪ ಕುಟುಂಬಕ್ಕೆ ದೊಡ್ಡ ಇತಿಹಾಸ

ರಸ್ತೆ, ರಾಜಕಾಲುವೆ, ಹಳ್ಳಿಗಳ ಅಭಿವೃದ್ಧಿಗೆ ನನಗೆ ಗೊತ್ತಿಲ್ಲದ ಹಾಗೇ ಅನುದಾನ ತೆಗೆದುಕೊಂಡು ಹೋಗಿ ಕೆಲಸ ಮಾಡಿದ್ದಾರೆ. ಅದಕ್ಕಾಗಿ ನನಗೆ ಕೃಷ್ಣಣ್ಣ ಎಂದರೆ ಪ್ರೀತಿ. ಪ್ರೀತಿ ವಿಶ್ವಾಸದಿಂದ ಈ ಕ್ಷೇತ್ರದ ಜನರಿಗೊಸ್ಕರ ಯಾವ ರೀತಿ ಕೆಲಸ ಮಾಡಬೇಕು ಎನ್ನುವುದಕ್ಕೆ ಕೃಷ್ಣಪ್ಪ ಅವರು ಸಾಕ್ಷಿ. ಅವರ ಕುಟುಂಬಕ್ಕೆ ದೊಡ್ಡ ಇತಿಹಾಸ ಇದೆ. ಅವರ  ಅಣ್ಣನವರು ಈ ಭಾಗದ ಶಾಸಕರು, ಸಂಸದರಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಜನರ ಪ್ರೀತಿ-ವಿಶ್ವಾಸ ಗಳಿಸಿದ್ದಾರೆ

ಇವರು 25-30 ವರ್ಷ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡಿ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಈ ಭಾಗದ ಜನರ ಹಾಗೂ ರಾಜ್ಯದ ಜನರ ಮನಸ್ಸು ಗೆದ್ದಿರುವ ಕೃಷ್ಣಪ್ಪನವರನ್ನು ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ. ಊರ ಹಬ್ಬ ಅಂದರೆ ಬೆಂಗಳೂರಿಗರಿಗೆ ಗೊತ್ತಾಗುವುದಿಲ್ಲ. ದಕ್ಷಿಣ ಕ್ಷೇತ್ರದಲ್ಲಿ ಹಳ್ಳಿಯ ಸೊಗಡು, ಶಹರದ ವೈಭವ ಇಲ್ಲಿದೆ‌. ಅಲ್ಲದೇ ಬೆಂಗಳೂರಿಗೆ ಹೆಚ್ಚು ಆದಾಯ ಕೊಡುವ ಕ್ಷೇತ್ರದಲ್ಲಿ ದಕ್ಷಿಣದ ಕ್ಷೇತ್ರವು ಒಂದು ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES