ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ದಾಖಲಿಸಿದ್ದಾರೆ.
241 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ, 5 ಬೌಂಡರಿಗಳ ನೆರವಿನಿಂದ 100 ರನ್ ಬಾರಿಸಿದ್ದಾರೆ. ಈ ಮೂಲಕ ಟೆಸ್ಟ್‌ನಲ್ಲಿ 28ನೇ ಶತಕ ಹಾಗೂ ಒಟ್ಟು 75ನೇ ಶತಕ ದಾಖಲಿಸಿದ್ದಾರೆ. ಅಲ್ಲದೇ, ಟೆಸ್ಟ್ ಮಾದರಿಯಲ್ಲಿ ಶತಕದ ಬರವನ್ನು ನೀಗಿಸಿಕೊಂಡಿದ್ದಾರೆ.
ಮೂರು ವರ್ಷ ಮೂರು ತಿಂಗಳು 13 ದಿನಗಳ ಬಳಿಕ ವಿರಾಟ್ ಶತಕದ ದಾಖಲಿಸಿದ್ದಾರೆ. 2019ರಲ್ಲಿ ಬಾಂಗ್ಲಾ ವಿರುದ್ಧ ಕೋಲ್ಕತ್ತಾದಲ್ಲಿ 136 ರನ್ ಬಾರಿಸಿದ್ದರು.
ಇದನ್ನೂ ಓದಿ : ಹೆಣ್ಣು ಮಗುವಿಗೆ ತಂದೆಯಾದ ಉಮೇಶ್ ಯಾದವ್
ಇಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 289/3 ರನ್ ನಿಂದ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ, ಸದ್ಯ ವಿರಾಟ್ ಕೊಹ್ಲಿ ಶತಕದ ನೆರವಿನಿಂದ 402/5 ರನ್ ಕಲೆಹಾಕಿದೆ.