Thursday, April 25, 2024

ಶಾಕಿಂಗ್ ನ್ಯೂಸ್ : ಮಹಿಳೆಯರು ಸೇರಿ ಈ.. ಹಾಲಿ ಶಾಸಕರಿಗಿಲ್ಲ ಟಿಕೆಟ್!

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಹಾಲಿ ಶಾಸಕರುಗಳಿಗೆ ಪಕ್ಷಗಳಿಂದ ಶಾಕಿಂಗ್ ಸುದ್ದಿ ಹೊರಬೀಳುತ್ತಿದೆ. ಬಿಜೆಪಿ ಪಕ್ಷದಂತೆಯೇ ಕಾಂಗ್ರೆಸ್ ಪಕ್ಷದಲ್ಲೂ ಕೆಲ ಕ್ಷೇತ್ರಗಳ ಹಾಲಿ ಶಾಸಕರಿಗೆ ಕೊಕ್ ನೀಡಲಾಗುತ್ತಿದೆ.

ಬಿಜೆಪಿ ಪಾಳಯದಂತೆ ಕಾಂಗ್ರೆಸ್‌ನಲ್ಲೂ ಅರ್ಧ ಡಜನ್ ಶಾಸಕರಿಗೆ ಟಿಕೆಟ್ ಕೈತಪ್ಪುವ ಆತಂಕವಿದೆ. ಗೆಲ್ಲುವ ಅರ್ಹತೆ ಜತೆಗೆ ಕ್ಷೇತ್ರದಲ್ಲಿ ಮುಂದಿನ 20ರಿಂದ 25 ವರ್ಷಗಳ ರಾಜಕಾರಣದ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷವು ಹಾಲಿ ಶಾಸಕರ ಪೈಕಿ ಐದಾರು ಮಂದಿಗೆ ಟಿಕೆಟ್ ಕೊಡದಿರಲು ನಿರ್ಧರಿಸಿದ್ದು, ಇದರಲ್ಲಿ ಇಬ್ಬರು ಮಹಿಳೆ ಯರೂ ಸೇರಿದ್ದಾರೆ.

ಶಿಡ್ಲಘಟ್ಟ, ಲಿಂಗಸಗೂರು, ಪಾವಗಡ, ಅಫ್ಜಲ್‌ಪುರ, ಕುಂದಗೋಳ, ಕಲಬುರಗಿ ಉತ್ತರ ಕ್ಷೇತ್ರಗಳ ಶಾಸಕರಿಗೆ ಟಿಕೆಟ್ ಸಿಗುವುದು ಬಹುತೇಕ ಅನುಮಾನ. ಈಗಾಗಲೇ ಈ ಪೈಕಿ ಹಲವರಿಗೆ ರಾಜ್ಯ ನಾಯಕರು ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯಲ್ಲಿ ಹಿರಿಯರು : ಯಾರ್ಯಾರು ಇದಾರೆ?

ಈ ವಿಧಾನಸಭಾ ಕ್ಷೇತ್ರಗಳಲ್ಲಿ ಹೊಸ ಪ್ರಯೋಗಕ್ಕೆ ಕಾಂಗ್ರೆಸ್ ಪಕ್ಷ ಮುಂದಾಗಿದೆ. ಸದ್ಯ ವಿಧಾನಸಭೆಯಲ್ಲಿ 6 ಮಹಿಳಾ ಸದಸ್ಯರಿದ್ದು, ಈ ಬಾರಿ ಮಹಿಳೆಯರಿಗೆ 15 ಕ್ಷೇತ್ರಗಳಲ್ಲಿ ಟಿಕೆಟ್ ನೀಡುವ ಸಾಧ್ಯತೆಯಿದೆ. ಇಲ್ಲೆಲ್ಲ ಸಂಭವನೀಯ ಅಭ್ಯರ್ಥಿಗಳನ್ನು ಗುರುತಿಸಲಾಗಿದೆ.

ಇನ್ನೂ, ಈ ಬಾರಿಯ ವಿಧಾನಸಭಾ ಚುನಾವನೆಯಲ್ಲಿ ಮುಸ್ಲಿಂ ಸಮುದಾಯಕ್ಕೆ 20 ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕೆಂಬ ಬೇಡಿಕೆ ಇದೆ. ಆದಾಗ್ಯೂ, 12ರಿಂದ 15 ಕ್ಷೇತ್ರಗಳಿಗೆ ಸೀಮಿತವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES